More

    ಯುವಕರಿಗೆ ಸಂಸ್ಕೃತಿಯ ಅರಿವು ಮೂಡಿಸಿ

    ಹಾರೂಗೇರಿ: ಮನುಷ್ಯ ಜೀವನದಲ್ಲಿ ಸಂಸ್ಕೃತಿ ಅಳವಡಿಸಿಕೊಂಡರೆ ಸುಸಂಸ್ಕೃತನಾಗುತ್ತಾನೆ ಎಂದು ಇಂಚಗೇರಿಯ ಪ್ರದೀಪ ಘಂಟಿ ಮಹಾರಾಜರು ಹೇಳಿದರು.

    ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಇತ್ತೀಚೆಗೆ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪರಿಷತ್ ತಾಲೂಕು ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಾಂಸ್ಕೃತಿಕ ಪರಿಷತ್ ರಾಜ್ಯಾಧ್ಯಕ್ಷ ಮನೋಹರ ನಾಯಿಕ ಮಾತನಾಡಿ, ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗುತ್ತಿದೆ. ಯುವಕರಿಗೆ ದೇಶದ ಸಂಸ್ಕೃತಿಯ ಮಹತ್ವ ತಿಳಿಸುವ ಅವಶ್ಯಕತೆ ಇದೆ. ಆ ಕೆಲಸವನ್ನು ಪರಿಷತ್ ವತಿಯಿಂದ ಮಾಡಲಾಗುತ್ತದೆ ಎಂದರು.

    ಸಿಪಿಐ ಕೆ.ಎಸ್.ಹಟ್ಟಿ, ಜಿ.ಆರ್.ಕಿಲ್ಲೇದಾರ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ, ನೂತನವಾಗಿ ಆಯ್ಕೆಯಾದ ಪುರಸಭೆ ಸದಸ್ಯರಿಗೆ ಸತ್ಕಾರ ಹಾಗೂ ಸಾಂಸ್ಕೃತಿಕ ನುಡಿಸಿರಿ ಕಾರ್ಯಕ್ರಮ ಜರುಗಿದವು. ಪರಿಷತ್ ತಾಲೂಕು ಘಟಕವನ್ನು ಯುವ ಧುರೀಣ ಮಹೇಶ ತಮ್ಮಣ್ಣವರ ಉದ್ಘಾಟಿಸಿದರು. ಡಾ.ರಾಮ ಮನೋಹರ, ಎನ್.ಎಸ್.ಚೌಗಲಾ, ಸ್ವರೂಪಾನಂದ ಸ್ವಾಮೀಜಿ, ಡಾ.ಸಿ.ಬಿ.ಕೂಲಿಗೋಡ, ಸಾಹಿತಿ ಡಾ.ವಿ.ಎಸ್.ಮಾಳಿ, ಪುರಸಭೆ ಸದಸ್ಯ ಸಂತೋಷ ಶಿಂಗಾಡಿ, ಸಾಹಿತಿ ಕಲ್ಲೇಶ ಕುಂಬಾರ, ಸಾಹಿತಿ ಬಿ.ಎ.ಜಂಬಗಿ, ಎನ್.ಎಸ್.ಒಡೆಯರ, ಲತಾ ಹುದ್ದಾರ, ವಾಮನ ಹಟ್ಟಿಮನಿ, ಶಿವಾಜಿ ಮೇತ್ರಿ, ಶಿಂಗಾಡಿ ಕಂಠಿಕಾರ, ಆರ್.ಬಿ.ನಾಯಿಕ, ಜಿ.ಎಸ್.ಬಿರಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts