More

    ಯುವಕರಲ್ಲಿರಲಿ ದೇಶಾಭಿಮಾನ  ಸರ್ದಾರ್ ಸೇವಾಲಾಲ್ ಸ್ವಾಮೀಜಿ

    ದಾವಣಗೆರೆ: ಇಂದಿನ ಯುವಕರಲ್ಲಿ ದೇಶಾಭಿಮಾನ ಹೆಚ್ಚಬೇಕು. ದೇಶ ಮತ್ತು ಧರ್ಮ ಕಾರ್ಯದಲ್ಲಿ ತೊಡಗಬೇಕು ಎಂದು ಚಿತ್ರದುರ್ಗದ ಬಂಜಾರ ಸಮಾಜ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

    ನಗರದ ಲೇಬರ್ ಕಾಲನಿಯ ಬಯಲು ರಂಗ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದು ಜನಜಾಗೃತಿ ಸೇನಾ ಸಮಿತಿ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಜಗತ್ತಿಗೆ ಭಾವೈಕ್ಯತೆ, ಶಾಂತಿ ಬೋಧಿಸುತ್ತಲೇ ಬಂದ ದೇಶ ನಮ್ಮದು. ಭಾರತವನ್ನು ಎಷ್ಟೇ ಲೂಟಿ ಮಾಡಿದರೂ, ಗುಡಿ-ಗುಂಡಾರಗಳನ್ನು ನಾಶ ಮಾಡಿದರೂ ಇಲ್ಲಿನ ಸೌಹಾರ್ದತೆಯ ಗುಣ ಕಡಿಮೆಯಾಗಿಲ್ಲ ಎಂದು ಹೇಳಿದರು.
    ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿದ ಸ್ವಾಮೀಜಿ, ಧರ್ಮ-ಸಮಾಜಕ್ಕಾಗಿ ದುಡಿಯುವವರು ಹಾಗೂ ದೇಶ ಕಾಯಲು ಇರುವ ಯುವಕರನ್ನು ಹತ್ಯೆ ಮಾಡುವವರು ದೇಶದ್ರೋಹಿಗಳು ಎಂದವರು ಟೀಕಿಸಿದರು.
    ಮೃತ ಶಿವಮೊಗ್ಗದ ಹರ್ಷ ಅವರ ಸಹೋದರಿ ಅಶ್ವಿನಿ ಮಾತನಾಡಿ ಹಿಂದುತ್ವದ ಕೆಲಸಕ್ಕೆ ಯುವಕರು ಮುಂದಾಗಬೇಕು. ಕೈ ಜೋಡಿಸಬೇಕು ಎಂದರು. ತಾಯಿ ಪದ್ಮಾ,ವಿಭೂತಿ ಬಸವರಾಜ್, ಹಿಂದು ಜನಜಾಗೃತಿ ಸೇನಾ ಸಮಿತಿ ರಾಜ್ಯಾಧ್ಯಕ್ಷ ಜಿ. ಚೇತನ್ ಮಾತನಾಡಿದರು.ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕನ್ನಡತಿ, ಜಿಲ್ಲಾಧ್ಯಕ್ಷ ಎ.ಆಕಾಶ್, ಪದಾಧಿಕಾರಿಗಳಾದ ಶರಣು ಗಣಜಲಕೇಡ, ರಾಜೀವ್, ದೀಪಾ, ಜ್ಯೋತಿ, ರಾಶಿಕ್, ಸೌಂದರ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts