More

    ಯಾರೊಬ್ಬರೂ ಮತ ಹಾಕದಿರಲು ನಿರ್ಧಾರ

    ಆನಂದಪುರ: ಸಾಗರ ತಾಲೂಕಿನ ಉಳ್ಳೂರು ಗ್ರಾಪಂ ವ್ಯಾಪ್ತಿಯ ಪುರದಸರ ಗ್ರಾಮಸ್ಥರು ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗೂ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.
    ಸೋಮವಾರ ಸಭೆ ನಡೆಸಿದ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ಕೊರತೆಯಿದೆ. ಶರಾವತಿ ಯೋಜನೆಯ ಮುಳುಗಡೆಯಿಂದ ನಿರಾಶ್ರಿತರಾಗಿ ವಲಸೆ ಬಂದ ಕುಟುಂಬವಾಗಿರುವ ತಮಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ದೊರೆಯುತ್ತಿಲ್ಲ. ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳು ವಿವಿಧ ಬಗೆಯ ಆಶ್ವಾಸನೆ ನೀಡಿ ನಂತರ ಯಾವುದೇ ಕಾಮಗಾರಿ ಮಂಜೂರು ಮಾಡುತ್ತಿಲ್ಲ ಎಂದು ದೂರಿದ್ದಾರೆ.
    ಶಿವಮೊಗ್ಗ-ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಿಂದ ತಮ್ಮ ಗ್ರಾಮದ ಮೂಲಕ ಹೆಗ್ಗೋಡಿನ ಹೆನೆಗೆರೆ ಸಂಪರ್ಕಿಸುವ ರಸ್ತೆಯಿದೆ. ಈ ರಸ್ತೆ ಅತ್ಯಂತ ಶಿಥಿಲ ರಸ್ತೆಯಾಗಿದ್ದು ನಿತ್ಯದ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ನಮ್ಮ ಗ್ರಾಮದ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಹ ಇಲ್ಲವಾಗಿದೆ. ದೂರದ ಗದ್ದೆ ಹೊಂಡದಿಂದ ನೀರನ್ನು ಹೊತ್ತು ತರುವ ಪರಿಸ್ಥಿತಿಯಿದೆ. ಗ್ರಾಮದಲ್ಲಿ ಮೂರು ತಲೆಮಾರಿನಿಂದ ವಾಸವಾಗಿರುವ ಕುಟುಂಬಗಳಿಗೆ ಸಹ ಹಕ್ಕುಪತ್ರ ಇಲ್ಲವಾಗಿದೆ. ಹಲವು ಕುಟುಂಬಕ್ಕೆ ಸಾಗುವಳಿ ಜಮೀನಿನ ಬಗರ್‍ಹುಕುಂ ಮಂಜೂರಾತಿ ದೊರೆತಿಲ್ಲ. ಇದರಿಂದ ಗ್ರಾಮ ಹಿಂದುಳಿದಿದೆ ಎಂದಿದ್ದಾರೆ. ಗ್ರಾಮಸ್ಥರಾದ ಶಾಂತಮ್ಮ, ಪ್ರಸನ್ನ, ಪ್ರವೀಣ, ಸರೋಜಾ, ತೀರ್ಥಪ್ಪ, ಕೆ.ಮಮತಾ, ಪಿ.ಎಸ್.ಚಂದ್ರಶೇಖರ್, ಎಚ್.ಎಸ್.ನಳಿನಾ, ಸುನಂದಾ, ಭಾಗ್ಯಶ್ರೀ, ಸೃಷ್ಠಿ, ಉಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts