More

    ಯಾರೂ ಹಸಿವಿನಿಂದ ಬಳಲಬಾರದು

    ದಾಂಡೇಲಿ: ಯಾವುದೇ ವ್ಯಕ್ತಿ ಹಸಿವಿನಿಂದ ತೊಂದರೆಗೊಳಗಾಬಾರದು. ಈ ಕುರಿತು ಜಿಲ್ಲೆಯಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ಪೌರಾಯುಕ್ತರು ಮತ್ತು ತಹಸೀಲ್ದಾರರು ಹಸಿದವರಿಗೆ ಆಹಾರ ಧಾನ್ಯ ಪೂರೈಸುವಲ್ಲಿ ಕಾಳಜಿ ವಹಿಸಬೇಕು ಎಂದರು.

    ಕೃಷಿ ಚಟುವಟಿಕೆಗಾಗಿ ಓಡಾಡಲು ರೈತರ ವಾಹನ ಸಂಚಾರಕ್ಕೆ ಅವಶ್ಯವಿರುವ ಇಂಧನ ಪಡೆಯುವ ಸಲುವಾಗಿ ಪಾಸ್ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರಿಗೆ ಬಿತ್ತನೆ ಮಾಡುವ ಸಮಯ ಅತಿ ಮುಖ್ಯ. ಹಾಗಾಗಿ ರೈತರಿಗೆ ಎಲ್ಲ ಮಟ್ಟದ ಅಧಿಕಾರಿಗಳು ಸಹಕರಿಸಬೇಕು. ಸಾಂಪ್ರದಾಯಿಕ ಪದ್ಧತಿಯಿಂದ ಮೀನುಗಾರರು ಮೀನು ಹಿಡಿಯಲು ಅನುಮತಿ ಪಡೆದುಕೊಂಡಿದ್ದು ಈ ಸಮಯದಲ್ಲಿಯೂ ಮೀನುಗಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆಯ ಏಕೈಕ ಇಎಸ್​ಐ ಆಸ್ಪತ್ರೆ ದಾಂಡೇಲಿಯಲ್ಲಿ ಇದೆ. ಈ ಆಸ್ಪತ್ರೆಯ ಉನ್ನತಿಕರಣ ಮತ್ತು ಆಸ್ಪತ್ರೆಯ ಸೌಲಭ್ಯಗಳ ಸುಧಾರಣೆಗಾಗಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮುಚ್ಚಲ್ಪಟ್ಟಿರುವ ಶ್ರೀನಿಧಿ ಹಾಗೂ ಶ್ರೇಯಸ್ ಕಾಗದ ಕಾರ್ಖಾನೆ ಪುನರಾರಂಭಕ್ಕೆ ಸಂಬಂಧಪಟ್ಟವರೊಡನೆ ರ್ಚಚಿಸಿ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಾಜಿ ಶಾಸಕ ಸುನೀಲ ಹೆಗಡೆ, ನಗರಸಭೆಯ ಪೌರಾಯುಕ್ತ ಡಾಕ್ಟರ್ ಸೈಯದ್ ಜಾಹೀದ್ ಅಲಿ, ತಹಸೀಲ್ದಾರ್ ಶೈಲೇಶ್ ಪರಮಾನಂದ, ಸ್ಥಳೀಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ ಉಪಸ್ಥಿತರಿದ್ದರು.

    ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿ: ಆರೋಗ್ಯದ ತುರ್ತು ಚಿಕಿತ್ಸೆಗಾಗಿ ಕಾರವಾರ ಜಿಲ್ಲೆಯಿಂದ ಮಣಿಪಾಲ ಆಸ್ಪತ್ರೆಗೆ ಹೋಗಲು ತೊಂದರೆ ಆಗದಂತೆ ಉತ್ತರ ಕನ್ನಡ ಜಿಲ್ಲೆಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts