More

    ಯಾರು ಭಯ ಪಡಬೇಡಿ, ಕಂಪನವಾಗಿಲ್ಲ

    ಚಿಂಚೋಳಿ: ಭಯಾನಕ ಶಬ್ದ ಕೇಳಿಸಿದ ಬುರಗಪಳ್ಳಿ, ಚತ್ರಸಾಲ, ಗಣಾಪುರ, ಖರ್ಚಖೇಡ ಗ್ರಾಮಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಭೂ ವಿಜ್ಞಾನಿಗಳು ಗುರುವಾರ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದರು.
    ಭೂ ವಿಜ್ಞಾನಿ ರಿಯಾಜ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಾಗಿ ಮಳೆಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇದರಿಂದ ಭುಮಿಯಲ್ಲಿ ಒಂದಿಷ್ಟು ಶಬ್ದ ಬರುವುದು ಸಾಮಾನ್ಯ. ಅಲ್ಲದೆ ಕಂಪನಿಗಳು ಕಳೆದ 13 ವರ್ಷಗಳಿಂದ ಮೈನಿಂಗ್ ಸ್ಫೋಟ ನಡೆಸುತ್ತಿದ್ದು, ಎಲ್ಲ ರೀತಿಯ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಯಾರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
    ಮಿರಿಯಾಣ ಠಾಣೆ ಪಿಎಸ್ಐ ಸಂತೋಷ ರಾಠೋಡ್ ಅವರು ಬುಧವಾರ ಸಂಜೆ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲು ಧೈರ್ಯ ತುಂಬಿದರು. ಚತ್ರಸಾಲ ಗ್ರಾಪಂ ಪಿಡಿಒ ಲಲಿತಾಬಾಯಿ ಪಾಟೀಲ್, ಗ್ರಾಮ ಲೇಖಪಾಲಕ ಮಂಜುನಾಥ, ಭೂ ವಿಜ್ಞಾನಿ ಹಫೀಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts