More

    ಯಳಂದೂರು ವ್ಯಾಪ್ತಿಯಲ್ಲಿ ಸತತ ಮಳೆಗೆ ಬೆಳೆ ಹಾನಿ

    ತುಂಬಿ ಹರಿಯುತ್ತಿವೆ ಕೆರೆ ಕಟ್ಟೆಗಳು

    ಯಳಂದೂರು: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕು ಹಾಗೂ ಸುತ್ತಮುತ್ತಲಿನ ಕೆಲ ಗ್ರಾಮಗಳು ಸಂಪೂರ್ಣ ತತ್ತರಿಸಿಹೋಗಿದ್ದು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.


    ಆ.25ರಿಂದ ಬಿರುಸು ಮಳೆಯಾಗುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯೂ ಆಗಿದೆ. ಅಲ್ಲದೆ ಸಂಪರ್ಕ ರಸ್ತೆಗಳೂ ನೀರು ಪಾಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.


    ತುಂಬಿ ಹರಿದ ಕೆರೆಗಳು: ತಾಲೂಕಿನ ಬಹುತೇಕ ಕೆರೆಗಳು ಮತ್ತು ಜಲಾಶಯಗಳು ಭರ್ತಿಯಾಗಿವೆ. ಯರಗಂಬಳ್ಳಿ ಕೆರೆ, ಕೃಷ್ಣಯ್ಯನಕಟ್ಟೆ, ಗುಂಬಳ್ಳಿ, ಹೊಂಗನೂರು, ಇರಸವಾಡಿ ಕೆರೆಗಳು ಕೋಡಿ ಬೀಳುವ ದೃಶ್ಯ ಕಾಣ ಸಿಗುತ್ತಿದೆ.


    ಎಲ್ಲೆಡೆ ಭತ್ತ ಬಿತ್ತಲು ರೈತರು ಆರಂಭಿಸಿದ್ದು, ಕೆಲವೆಡೆ ಒಟ್ಟಿನ ಮನೆ ಮಾಡಿದರೆ, ಕೆಲವರು ಪೈರನ್ನೂ ನೆಟ್ಟಿದ್ದಾರೆ. ಆದರೆ ಸತತ ಮಳೆ ಹಾಗೂ ಪ್ರವಾಹದಿಂದ ಪೈರು ಕೊಚ್ಚಿ ಹೋಗಿದೆ. ದುಗ್ಗಹಟ್ಟಿ, ಹೊನ್ನೂರು, ಮೆಲ್ಲಹಳ್ಳಿ, ಕಂದಹಳ್ಳಿ, ಯಳಂದೂರು, ಕೃಷ್ಣಪುರ, ಗಣಿಗನೂರು, ಗುಂಬಳ್ಳಿ ಸೇರಿದಂತೆ ಹಲವು ಭೂ ಪ್ರದೇಶದಲ್ಲಿ ಭತ್ತದ ಪೈರು ಕೊಚ್ಚಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಬಗ್ಗೆ ಜಿಲ್ಲಾಡಳಿತವು ಸೂಕ್ತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts