More

    ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಫೈಟ್ ತೀವ್ರ: ಇಂದಿರಾ ಜ್ಯೋತಿ ನಿಯೋಜನೆ ಪುರಸ್ಕರಿಸಲು ಆಗ್ರಹಿಸಿ ಪ್ರತಿಭಟನೆ

    ಸಾಗರ: ತಾಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಂದಿರಾಜ್ಯೋತಿ ನಿಯೋಜನೆ ವಿಚಾರದಲ್ಲಿ ಸದಸ್ಯರ ನಡುವಿನ ಪರ-ವಿರೋಧ ಹೋರಾಟ ಬಿರುಸುಗೊಂಡಿದೆ. ಆಡಳಿತ ಸದಸ್ಯರು ಸೆ. 19ರಂದು ಪಾದಯಾತ್ರೆ ಹಮ್ಮಿಕೊಂಡಿದ್ದರೆ, ವಿರೋಧಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
    ತಾಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಇಂದಿರಾಜ್ಯೋತಿ ಅವರ ನಿಯೋಜನೆ ಆದೇಶ ಪುರಸ್ಕರಿಸಬೇಕು ಎಂದು ಒತ್ತಾಯಿಸಿ ಗ್ರಾಪಂ ಎದುರು ಆರು ಸದಸ್ಯರು ಮತ್ತು ಕೆಲ ಗ್ರಾಮಸ್ಥರು ಪ್ರತಿಭಟಿಸಿದರು.
    ಆನಂದಪುರಂನಲ್ಲಿ ಇಂದಿರಾ ಜ್ಯೋತಿ ಪಿಡಿಓ ಆಗಿದ್ದಾಗ ಪಂಚಾಯಿತಿ ಆಸ್ತಿಯನ್ನು ಕಬಳಿಸುವ ಪ್ರಯತ್ನವನ್ನು ತಡೆದಿದ್ದಕ್ಕೆ ಅವರ ವಿರುದ್ದ ಸ್ಥಳೀಯರಿಂದ ಪ್ರತಿಭಟನೆ ಮಾಡಿಸಿದ್ದರು. ಇದೀಗ ಯಡೇಹಳ್ಳಿಗೆ ಅವರು ವರ್ಗಾವಣೆಯಾಗಿ ಬಂದರೆ ಈ ಭಾಗದಲ್ಲಿರುವ ತಮ್ಮ ಆಸ್ತಿಗೆ ಎಲ್ಲಿ ಅಡ್ಡಿಯಾಗುತ್ತಾರೋ ಎಂದು ಜನರಿಗೆ ಕುರಿ ಊಟ ಹಾಕಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಹೊರಗಿನವರು ಬಂದು ನಮ್ಮ ಪಂಚಾಯ್ತಿ ಬಗ್ಗೆ ಮಾತನಾಡುವುದು ಬೇಡ. ಹಾಲಿ ಪಿಡಿಒ ಕುಮಾರ್ ಜನರನ್ನು ಎತ್ತಿ ಕಟ್ಟಿ ಪ್ರತಿಭಟನೆ ನಡೆಸಿ, ಇಲ್ಲಿಯೆ ಉಳಿಯುವ ಪ್ರಯತ್ನ ನಡೆಸುತ್ತಿದ್ದಾರೆ. ತಕ್ಷಣ ಇಂದಿರಾಜ್ಯೋತಿ ಅವರನ್ನು ಪಿಡಿಒ ಆಗಿ ನಿಯೋಜನೆ ಮಾಡಬೇಕು ಎಂದು ಸದಸ್ಯ ಅರುಣ್ ಗೌಡ ಒತ್ತಾಯಿಸಿದರು.
    ಸದಸ್ಯೆ ಜ್ಯೋತಿ ಹೆಬ್ಬೋಡಿ ಮಾತನಾಡಿ, ಮಹಿಳಾ ಅಧಿಕಾರಿ ವಿರುದ್ದ ಅನಗತ್ಯವಾಗಿ ಕೆಲವರು ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ಇಂದಿರಾಜ್ಯೋತಿ ಅವರು ಆನಂದಪುರಂನಲ್ಲಿ ಕರ್ತವ್ಯ ನಿರ್ವಹಿಸುವಾಗ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರಲಾಗುತ್ತಿದೆ. ಅದಕ್ಕೆ ಪೂರಕವಾದ ದಾಖಲೆಯನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts