More

    ಯಡಿಯೂರಪ್ಪಗೆ ಎಷ್ಟು ಕೃತಜ್ಙತೆ ಹೇಳಿದರೂ ಸಾಲದು

    ಯಾದಗಿರಿ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸಕ್ತಿ ತಾಳಿದ ಕಾರಣದಿಂದಲೇ ಕೇಂದ್ರದಿಂದ ಸಕರ್ಾರಿ ಮೆಡಿಕಲ್ ಕಾಲೇಜು ಮಂಜೂರಾಗಲು ಕಾರಣವಾಯಿತು ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.

    ನಗರದ ಹೊರ ವಲಯದಲ್ಲಿನ ಯಿಮ್ಸ್ ಆವರಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯಿಂದ 16 ಕೋಟಿ ರೂ.ವೆಚ್ಛದಲ್ಲಿ ನಿಮರ್ಾಣಗೊಳ್ಳುತ್ತಿರುವ 50 ಹಾಸಿಗೆಗಳ ತೀವ್ರ ನಿಗಾ ಘಟಕದ ಕಟ್ಟಡ ನಿಮರ್ಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಿಎಸ್ವೈ ಮುಖ್ಯಮಂತ್ರಿಯಾಗಿದ್ದಾಗ ನಾನು ಮನವಿ ಮಾಡಿಕೊಂಡ ಐದೇ ನಿಮಿಷದಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಆದೇಶ ನೀಡಿದ್ದಲ್ಲದೆ, ಕೇಂದ್ರದ ಮೇಲೆ ನಿರಂತರವಾಗಿ ಒತ್ತಡ ಹೇರುವ ಮೂಲಜ ಜಿಲ್ಲೆಗೆ ಈ ಬಹುದೊಡ್ಡ ಯೋಜನೆ ದಕ್ಕುವಂತೆ ಮಾಡಿದ್ದಾರೆ. ಹಾಗೂ ಯಡಿಯೂರಪ್ಪನವರಿಗೆ ನಾನು ಎಷ್ಟು ಬಾರಿ ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದರು.

    ನಾನು ಶಾಸಕನಾಗಿ ಆಯ್ಕೆಯಾದ ನಂತರ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಗ್ರಾಮೀಣ ಭಾಗದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಖಚರ್ು ಮಾಡಿದ್ದೇನೆ. ವಿಜ್ಞಾನ ಸಂಸ್ಥೆಯ ನಿರ್ದೇಶಕರು ಕೂಡಲೇ ಮೆಡಿಕಲ್ ಕಾಲೇಜ್ ಉಪನ್ಯಾಸಕರ ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

    ಈ ವರ್ಷ ಕಲ್ಯಾಣ ಕನರ್ಾಟಕ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿನ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಸಿಕ್ಕಿರುವುದು ಸಂತಸ ತಂದಿದೆ, , ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ನೀಡಿದಾಗ ಮಾತ್ರ ಅವರು ಒಳ್ಳೆಯ ಫಲಿತಾಂಶದೊಂದಿಗೆ ಗಿರಿಜಿಲ್ಲೆಗೆ ಕೀರ್ತಿತರುತ್ತಾರೆ. ಜಮ್ಮು,ಕಾಶ್ಮೀರದಿಂದ ಹಿಡಿದು, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    ಎಂಎಲ್ಸಿ ಬಾಬುರಾವ ಚಿಂಚನಸೂರ ಮಾತನಾಡಿ, ಈ ಹಿಂದೆ ಅಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಭಾಗ ಹಿಂದುಳಿದಿತ್ತು. ಆದರೆ ಬಿಜೆಪಿ ಅಕಾರಕ್ಕೆ ಬರುತ್ತಿದ್ದಂತೆ, ಜಿಲ್ಲಾ ಕೇಂದ್ರಕ್ಕೆ ಶಾಸಕ ಮುದ್ನಾಳ ನೇತೃತ್ವದಲ್ಲಿ ಹೊಸ ಕಾಯಕಲ್ಪ ನೀಡಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts