More

    ಯಕ್ಷಗಾನ ನಮ್ಮ ಪರಂಪರೆಯ ಜೀವಂತ ಕಲೆ

    ತೀರ್ಥಹಳ್ಳಿ: ಭಾರತೀಯ ಸಂಸ್ಕøತಿಯ ಪರಂಪರೆಯಲ್ಲಿ ಯಕ್ಷಗಾನ ಧಾರ್ಮಿಕ ಪ್ರಜ್ಞೆಯೊಂದಿಗೆ ಭಾಷೆ ಸಾಹಿತ್ಯದ ಜೀವಂತ ಕಲೆಯಾಗಿದ್ದು ಈ ಕಲೆಯ ಶ್ರೀಮಂತಿಕೆಯನ್ನು ಮೆರೆಯುವ ಕಲಾವಿದರನ್ನು ಉತ್ತೇಜಿಸುವ ಕಾರ್ಯ ಆಗಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ತಾಲೂಕಿನ ಗುಡ್ಡೇಕೊಪ್ಪದ ಯಕ್ಷರಂಗ ತಂಡದಿಂದ ಯುಗಾದಿ ಹಬ್ಬದ ಪ್ರಯುಕ್ತ ಗುಡ್ಡೇಕೊಪ್ಪ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ತಂಡದಿಂದ ಭೀಷ್ಮಾರ್ಜುನ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿ ಮಾತನಾಡಿದ ಅವರು, ಕಲಾವಿದರ ಕಣ್ಣೀರೊರೆಸುವ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಹೇಳಿದರು.
    ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದರನ್ನು ಗೌರವಿಸುವ ಮತ್ತು ಅವರ ಸಂಕಷ್ಟಕ್ಕೆ ನೆರವಾಗುವ ಸತೀಶ್ ಶೆಟ್ಟಿಯವರ ಮಾನವೀಯ ಕಳಕಳಿ ಅನುಕರಣೀಯವಾಗಿದೆ. ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್‍ನಿಂದ ಈವರೆಗೆ ಸುಮಾರು 9.50 ಕೋಟಿ ರೂ.ಗಳಿಗೂ ಅ„ಕ ಮೊತ್ತದಲ್ಲಿ ಬಡ ಕಲಾವಿದರಿಗೆ ಮನೆ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ನೆರವು ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕಿಂತ ಮುಂಚಿತವಾಗಿ ಕಲಾವಿದರ ಮನೆಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಿದವರು ಎಂದು ಹೇಳಿದರು.
    ಗೃಹ ಸಚಿವರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್ ಮತ್ತು ಪವನ್ ಕಿರಣಕೆರೆ, ಸುಸಂಸ್ಕøತವಾದ ಮಲೆನಾಡಿನ ಈ ಮಣ್ಣಿನ ಅಸ್ಮಿತೆಯಲ್ಲಿ ಜನಿಸಿದ ಆರಗ ಜ್ಞಾನೇಂದ್ರ ಮಹಾಭಾರತದ ಭೀಷ್ಮನ ಮುತ್ಸದ್ದಿತನ, ಧರ್ಮರಾಯನ ಧರ್ಮಸೂಕ್ಷ್ಮತೆ ಉಳ್ಳವರಾಗಿದ್ದಾರೆ. ರಾಜಕೀಯವಾಗಿ ಭವಿಷ್ಯದಲ್ಲಿ ಇನ್ನೂ ಎತ್ತರ ಸ್ಥಾನಕ್ಕೇರಬೇಕು. ಹಾಲಿ ಸಂಪುಟದ ಎರಡನೇ ಸ್ಥಾನದಲ್ಲಿರುವ ಇವರು ಮುಖ್ಯಮಂತ್ರಿಯಾಗಲಿ ಎಂದೂ ಹಾರೈಸಿದರು.
    ಗೃಹ ಸಚಿವರ ಕುರಿತು ಹಿರಿಯ ಯಕ್ಷಗಾನ ಕಲಾವಿದ ಮಂಗಳಗಾರು ರಮೇಶಾಚಾರ್ಯ ರಚಿಸಿದ ಹಾಡಿಗೆ ಭಾಗವತ ಪಟ್ಲ ಸತೀಶ್ ಶೆಟ್ಟಿ ಸ್ವರ ಹಾಕಿ ಹಾಡಿದರು. ಬಡಗುತಿಟ್ಟಿನಲ್ಲಿ ಭಾಗವತರಾಗಿ ಕು.ರಕ್ಷಾ ಹೆಗ್ಡೆ, ಅರ್ಥಧಾರಿಗಳಾಗಿ ಡಾ. ಎಂ. ಪ್ರಭಾಕರ ಜೋಷಿ, ಎಂ.ಕೆ.ರಮೇಶಾಚಾರ್ಯ, ಉಜಿರೆ ಅಶೋಕ ಭಟ್ ಹಾಗೂ ಪವನ್ ಕಿರಣಕೆರೆ ಭಾಗವಹಿಸಿದ್ದು ಗುಡ್ಡೆಕೊಪ್ಪ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts