More

    ಯಂತ್ರೋಪಕರಣ ಬಳಕೆಯಿಂದ ಕೌಶಲ ಕ್ಷೀಣ

    ಗೋಕಾಕ, ಬೆಳಗಾವಿ: ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾದಂತೆ ಸಂಸ್ಕೃತಿ, ಕಲೆ ಹಾಗೂ ಕೌಶಲ ಮರೆಯಾಗುತ್ತಿವೆ. ಇಂದಿನ ಜಾಗತೀಕರಣದಲ್ಲಿ ದೇಶಿಯತೆ ಬಳಕೆಯಾಗಲಿ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಪ್ರಾ.ಜಯಾನಂದ ಮಾದರ ಹೇಳಿದರು.

    ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಳಕಟನಾಳದ ಶ್ರೀ ಬಲಭೀಮ ದಟ್ಟಿಕುಣಿತ, ಪರಿಶಿಷ್ಟ ಪಂಗಡ ಜಾನಪದ ಕಲಾ ಸಂಘದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಕೆ.ಎಂ.ಎಫ್. ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರೋತ್ಸಾಹದ ಮೇರೆಗೆ ಈ ಸಂಘಟನೆ ಹುಟ್ಟಿಕೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗೋಕಾಕದ ಹಿರಿಯ ರಂಗಭೂಮಿ ಸಾಹಿತಿ, ಕಲಾವಿದ ಈಶ್ವರಚಂದ್ರ ಬೆಟಗೇರಿ ಮಾತನಾಡಿ, ಜಾನಪದ ಕಲೆಗಳು ದೇವರ ಆರಾಧನೆ ಹಿನ್ನಲೆಯಲ್ಲಿ ಹುಟ್ಟಿಕೊಂಡಿವೆ ಎಂದರು. ಕಂಕಣವಾಡಿ ಶ್ರೀಕೃಷ್ಣ ಪಾರಿಜಾತ ಹಿರಿಯ ಕಲಾವಿದ ಹಸನಸಾಬ್ ನದಾಫ್ ನೂತನ ಸಂಘ ಉದ್ಘಾಟಿಸಿದರು.

    ಪ್ರಶಸ್ತಿ ಪ್ರದಾನ: ತಳಕಟನಾಳದ ಜಾನಪದ ಹಾಗೂ ಸಂಗೀತ ಕಲಾವಿದ ಲಗಮಣ್ಣ ದೊಡಮನಿ, ಮೆಳವಂಕಿಯ ಶಹನಾಯಿ ವಾದ್ಯಕಲಾವಿದ ರಾಯಪ್ಪ ಭಜಂತ್ರಿ, ಅರಬಾವಿಯ ಹಲಗೆ ವಾದ್ಯಕಲಾವಿದ ಸಿಡ್ಲೆಪ್ಪ ದೊಡಮನಿ, ಶಿಂಗಳಾಪುರದ ದೊಡ್ಡಾಟ ಕಲಾವಿದ ಬಾಳೇಶ ಹರಿಜನ, ಪಾಮಲದಿನ್ನಿಯ ಚೌಡಕಿಪದ ಕಲಾವಿದೆ ಕೆಂಪವ್ವ ಹರಿಜನ ಅವರಿಗೆ ಕಲಾ ಸಿರಿಸಂಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದರಿಂದ ಭಜನಾ ಪದಗಳು, ಜಾನಪದ ಕಾರ್ಯಕ್ರಮ ಜರುಗಿದವು.
    ಉದಗಟ್ಟಿಯ ಹಿರಿಯ ಜಾನಪದ ಕಲಾವಿದ ಉದ್ದಣ್ಣ ಗೋಡೆರ, ನೂತನ ಸಂಘದ ಅಧ್ಯಕ್ಷ ಮಾಯಪ್ಪ ಮುತ್ತೆನ್ನವರ, ತಳಕಟನಾಳದ ಭೀಮಪ್ಪ ಪೂಜೇರಿ, ಕಾಡಪ್ಪ ಬಂಗೆನ್ನವರ, ಮಹಾದೇವ ಕಳಸನ್ನವರ, ಪರಶುರಾಮ ಮುತ್ತೆಣ್ಣವರ, ಸುಗಂಧ ಹೊನಕುಪ್ಪಿ, ಭೀಮಪ್ಪ ಪೂಜೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts