More

    ಧೀಮಂತ ನಾಯಕ ದಿ. ರಾಮಕೃಷ್ಣ ಹೆಗಡೆ

    ಶಿರಸಿ: ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಮೌಲ್ಯಾಧಾರಿತ ರಾಜಕಾರಣಿ ದಿ. ರಾಮಕೃಷ್ಣ ಹೆಗಡೆ ಅವರನ್ನು ಸ್ಮರಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಸ್ಮರಣೆ ದಿನದ ಅಂಗವಾಗಿ ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆ ವತಿಯಿಂದ ಬುಧವಾರ ಇಲ್ಲಿನ ಯಲ್ಲಾಪುರ ನಾಕಾ ಬಳಿ ಇರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

    ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಪ್ರತಿ ವರ್ಷ ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆಯ ವತಿಯಿಂದ ನಾಡಿನ ಧೀಮಂತ ನಾಯಕ ರಾಮಕೃಷ್ಣ ಹೆಗಡೆ ಅವರಿಗೆ ಪಕ್ಷಾತೀತವಾಗಿ ಗೌರವ ಸೂಚಿಸಲಾಗುತ್ತಿದೆ ಎಂದರು.

    ಪಕ್ಷಾತೀತ ಕಾರ್ಯಕ್ರಮ: ರಾಮಕೃಷ್ಣ ಹೆಗಡೆ ಅವರ ಪುಣ್ಯತಿಥಿಯ ಅಂಗವಾಗಿ ಲೋಕಶಕ್ತಿ ಪಕ್ಷದ ಕಾರ್ಯಕರ್ತರು ರಾಮಕೃಷ್ಣ ಹಗಡೆ ಅವರ ಪುತ್ಥಳಿಗೆ ಗೌರವ ಸೂಚಿಸಲು ನಿರ್ಧರಿಸಿ ತನ್ನ ಪಕ್ಷದ ಬ್ಯಾನರ್ ಹಾಗೂ ಬಾವುಟಗಳನ್ನು ಹಾಕಿತ್ತು. ಆದರೆ, ಇದೇ ವೆಳೆ ಅಲ್ಲಿಗೆ ಬಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ‘ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದರಿಂದ ಲೋಕಶಕ್ತಿ ಪಕ್ಷದ ಬ್ಯಾನರ್​ಗಳನ್ನು ತೆಗೆಯಬೇಕು’ ಎಂದು ಹೇಳಿದರು. ಆಗ ಸ್ಥಳದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಲೋಕಶಕ್ತಿ ಪಕ್ಷದ ಮುಖಂಡರು ಆಗಮಿಸಿ ತಮ್ಮ ಬ್ಯಾನರ್​ಗಳನ್ನು ತೆಗೆದರು. ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆಯ ಕಾರ್ಯಕ್ರಮಗಳು ಮುಗಿದ ನಂತರ ಲೋಕಶಕ್ತಿ ಪಕ್ಷದ ಕಾರ್ಯಕರ್ತರು ರಾಮಕೃಷ್ಣ ಹೆಗಡೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts