More

    ಮೋದಿ ಪದಚ್ಯುತಿ ಸಂಚಿನ ವಿರುದ್ಧ ಒಗ್ಗಟ್ಟು ಅಗತ್ಯ-ವಾಗ್ಮಿ ಚಕ್ರವರ್ತಿ ಸೂಲಿಬೆಲೆ

    ದಾವಣಗೆರೆ: ನರೇಂದ್ರ ಮೋದಿ ಅವರನ್ನು ಪದಚ್ಯುತಗೊಳಿಸಲು ವಿದೇಶಿ ಶಕ್ತಿಗಳು ಸಂಚು ನಡೆಸುತ್ತಿವೆ. ಇಂಥ ಸಂದರ್ಭದಲ್ಲಿ ಜಾತಿ ಭೇದ ಬದಿಗಿಟ್ಟು ಭಾರತೀಯರು ಒಂದಾಗುವ ಅಗತ್ಯವಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರತಿಪಾದಿಸಿದರು.
    ಅನ್‌ಸ್ಟಾಪೆಬಲ್ ಯುವಾ-ದೇಶಭಕ್ತಿಯ ಕಾಡ್ಗಿಚ್ಚು ಶೀರ್ಷಿಕೆಯಡಿ ರಾಜ್ಯದ ಎರಡು ಕಡೆಗಳಿಂದ ಆಗಮಿಸಿದ ಬೈಕ್ ರ‌್ಯಾಲಿ ಸೋಮವಾರ ದಾವಣಗೆರೆಯಲ್ಲಿ ಮುಕ್ತಾಯಗೊಂಡಿದ್ದು, ಇಲ್ಲಿನ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರೋಪದಲ್ಲಿ ಮಾತನಾಡಿದರು.
    ಮೋದಿ ವಿರುದ್ಧ ಇಂದು ಇಡೀ ಜಗತ್ತಿನ ಕಳ್ಳರು ಒಂದಾಗಿದ್ದಾರೆ. ಅಮೇರಿಕದ ಒಂದು ತಂಡ, ಯಾರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕು. ಕೂರಿಸಬೇಕು ಎಂಬುದರಾಚೆಗೆ ಕೊಲ್ಲಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸುತ್ತದೆ. ಇದರಲ್ಲಿ ಮಾದಕ ವಸ್ತು ಮಾಫಿಯಾದವರು, ಔಷಧ ವರ್ತಕರು, ಸಿನಿಮಾದವರು ಹಾಗೂ ವ್ಯಾಪಾರಿಗಳೂ ಇದ್ದಾರೆ ಎಂದರು.
    ಮೋದಿ ವಿರುದ್ಧ ಅಮೇರಿಕದ ಡೀಪ್‌ಸ್ಟೇಟ್‌ನ ಮುಖ್ಯಸ್ಥ ಜಾರ್ಜ್ ಸೋರೋಸ್ ದಾರ್ಷ್ಟ್ಯದ ಮಾತುಗಳನ್ನು ಪುನರುಚ್ಚರಿಸಿದ್ದಾನೆ. ಭಾರತದಲ್ಲಿ ಅವನ ಆಣತಿಯಂತೆ ಇಲ್ಲಿ ಕೆಲಸ ಮಾಡುವವರ ಬಗ್ಗೆಯೂ ಎಚ್ಚರ ವಹಿಸಬೇಕಿದೆ.
    ಮನಮೋಹನಸಿಂಗ್ ಪುತ್ರಿ ಅಮೃತಾ ಸಿಂಗ್ ಇದೇ ಜಾರ್ಜ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುಪಿಎ ಸರ್ಕಾರವಿದ್ದಾಗ ಸೋನಿಯಾಗಾಂಧಿ ಅವರಿಗೆ ಕೈಗೊಳ್ಳಬೇಕಾದ ನಿರ್ಣಯಗಳನ್ನು ನಿರ್ಧರಿಸುತ್ತಿದ್ದ ತಂಡದಲ್ಲಿದ್ದ ಹರ್ಷ್ ಮಂದಾರ್ ಹಾಗೂ ರಾಹುಲ್‌ಗಾಂಧಿ ಜತೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಸಲೀಂ ಶೆಟ್ಟಿ ಕೂಡ ಇದೇ ಜಾರ್ಜ್ ಕಂಪನಿಗಳಲ್ಲಿ ಭಾಗಿಯಾಗಿದ್ದವರು ಎಂದು ಆತಂಕ ವ್ಯಕ್ತಪಡಿಸಿದರು.
    * ಶಕ್ತಿಶಾಲಿಯಾಗಿದೆ ಭಾರತ
    ಇಂದು ಭಾರತ ಶಕ್ತಿಶಾಲಿಯಾಗಿದ್ದು ಇದನ್ನು ನಿಂದಿಸಿ ಬದುಕುವ ಶಕ್ತಿ ಯಾವ ರಾಷ್ಟ್ರಕ್ಕೂ ಇಲ್ಲ. ಯುನೈಟೆಡ್ ಸ್ಟೇಟ್ ಸಭೆಯಲ್ಲಿ ಜಗತ್ತಿನ ಹತ್ತು ರಾಷ್ಟ್ರಗಳು, ಕರೊನಾ ಸಂದರ್ಭದಲ್ಲಿ ಭಾರತ ಹಣಕಾಸು ಲೆಕ್ಕಿಸದೆ ಲಸಿಕೆಗಳನ್ನು ನೀಡಿದ್ದನ್ನು ಸ್ಮರಿಸಿದವು.
    ಆದರೆ ಬೈದಿದ್ದ ಒಂದು ರಾಷ್ಟ್ರ ಪಾಕಿಸ್ತಾನ ಇಂದು ದೈನೇಸಿ ಸ್ಥಿತಿಗೆ ತಲುಪಿದೆ. ಮತ್ತೊಂದು ದೇಶ ಟರ್ಕಿಯಲ್ಲಿ ಭೂಕಂಪವಾಗಿ ಸಾವಿರಾರು ಮಂದಿ ಮರಣ ಹೊಂದಿದ್ದಾರೆ. ಇಂಥ ಸಂದರ್ಭದಲ್ಲೂ ವೈದ್ಯರನ್ನು ಕಳಿಸಿ ಮಾನವೀಯತೆ ಮೆರೆದ ದೇಶವೇ ಭಾರತ ಎಂದು ಅಭಿಮಾನ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ಹಡಗಲಿಯ ಅಭಿನವ ಹಾಲಸ್ವಾಮೀಜಿ, ಯುವಾ ಬ್ರಿಗೇಡ್‌ನ ದಕ್ಷಿಣ ವಿಭಾಗ ಸಂಚಾಲಕ ಧರ್ಮ ಹೊನ್ನಾರಿ, ಉತ್ತರ ವಿಭಾಗದ ಸಂಚಾಲಕ ವರ್ಧಮಾನ್ ತ್ಯಾಗಿ, ಕಿರಣ್‌ರಾಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts