More

    ಮೋಸದ ಸಂಸ್ಥೆಗಳು ತಲೆ ಎತ್ತದಿರಲಿ, ಸಂಯುಕ್ತ ಸಹಕಾರಿ ಅಧ್ಯಕ್ಷ ನಂಜನಗೌಡ ಸಲಹೆ

    ಹುಬ್ಬಳ್ಳಿ: ಸೌಹಾರ್ದ ಸಹಕಾರಿ ರಂಗದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಹಾಗೂ ಹಾನಿಯನ್ನುಂಟು ಮಾಡುವ ಸಂಸ್ಥೆಗಳು ತಲೆ ಎತ್ತದಂತೆ ನೋಡಿಕೊಳ್ಳುವದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಮುಂದಿರುವ ಸವಾಲಾಗಿದೆ ಎಂದು ಸಂಯುಕ್ತ ಸಹಕಾರಿಯ ನೂತನ ಅಧ್ಯಕ್ಷ ನಂಜನಗೌಡ ಅವರು ಹೇಳಿದರು.

    ನಗರದಲ್ಲಿ ಗುರುವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಪ್ರತಿನಿಧಿಗಳ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಸಹಕಾರಿ ರಂಗ ಈಗ ಪ್ರೌಢಾವಸ್ಥೆಯಲ್ಲಿದೆ. ಈ ಸಮಯದಲ್ಲಿ ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸಹಕಾರಿ ರಂಗದ ಬೆಳವಣಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆ ಮಾಡುವ ಉದ್ದೇಶದಿಂದ ಸೌಹಾರ್ದ ಸಹಕಾರಿ ಜನ್ಮ ತಾಳಿದೆ ಎಂದರು.

    ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಪ್ರಸನ್ನಕುಮಾರ, ಹಿರಿಯ ಸಹಕಾರಿ ರವೀಂದ್ರ ಯಲಿಗಾರ, ಧಾರವಾಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಲೋಚನೇಶ ಹೂಗಾರ, ಭಾಸ್ಕರ ಹೆಗಡೆ ಕಾಗೇರಿ ಅವರು ಮಾತನಾಡಿದರು.

    ಸಂಯುಕ್ತ ಸಹಕಾರಿಯ ಧಾರವಾಡ ಜಿಲ್ಲಾ ಪ್ರತಿನಿಧಿ ಹಾಗೂ ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು.

    ಧಾರವಾಡ ಜಿಲ್ಲಾ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ಕಲ್ಮೇಶ ಸ್ವಾಗತಿಸಿದರು. ಬೆಳಗಾವಿ ವಿಭಾಗಿಯ ಸಂಯೋಜಕ ಬಸವರಾಜ ಹೊಂಗಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts