More

    ಮೊಳಕೆಯೊಡೆಯದ ಭತ್ತದ ಬಿತ್ತನೆ ಬೀಜ

    ಮುಂಡಗೋಡ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆಯಾಗಿರುವ ಭತ್ತದ ಬಿತ್ತನೆ ಬೀಜಗಳ ವಿತರಣೆ ಮಾಡಿದ್ದು, ಆ ಬೀಜಗಳು ಮೊಳಕೆಯೊಡೆದಿಲ್ಲ ಎಂದು ತಾಲೂಕಿನ ಇಂದೂರ ಗ್ರಾಮದ ಕೆಲ ರೈತರು ಬುಧವಾರ ಆರೋಪಿಸಿದ್ದಾರೆ.

    ತಾಲೂಕಿನ ಇಂದೂರ ಗ್ರಾಮದ ಕೆಲ ರೈತರಾದ ನಜೀರ್​ಅಹ್ಮದ್ ಗುರನಳ್ಳಿ, ಬಶೀರ್​ಅಹ್ಮದ್ ಗುರನಳ್ಳಿ, ಇಸ್ಮಾಯಿಲ್ ಗುರನಳ್ಳಿ, ಲಕ್ಷಪ್ಪ ನಾಣಪುರ ಹಾಗೂ ಮುದಕಪ್ಪ ನಡಿಗೇರ ಅವರು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ರೈತ ಸಂಪರ್ಕ ಕೇಂದ್ರದಿಂದ ಬೀಜ ತಂದು ತಮ್ಮ ಹೊಲಗಳಲ್ಲಿ ನಾಟಿ ಮಾಡಿದ್ದರು. ಆದರೆ, ಅವು ಮೊಳಕೆ ಒಡೆದಿಲ್ಲ. ಪಕ್ಕದಲ್ಲಿಯೇ ಮೊಳಕೆಯೊಡೆಯಲು ಹಾಕಿದ ಸ್ಥಳೀಯ ಬೀಜಗಳು ಮೊಳಕೆಯೊಡೆದಿವೆ.

    ರಿಯಾಯಿತಿ ದರದಲ್ಲಿ 25 ಕೆ.ಜಿ.ಯ ಒಂದು ಪ್ಯಾಕೇಟ್​ಗೆ 550 ರೂ.ನಂತೆ ಅಭಿಲಾಷ ತಳಿಯ ಭತ್ತದ ಬೀಜಗಳನ್ನು ಖರೀದಿಸಿದ ಬಳಿಕ ಬ್ಯಾರೆಲ್​ನಲ್ಲಿ 24 ಗಂಟೆ ನೀರಿನಲ್ಲಿ ಹಾಕಿ ಇಟ್ಟಿದ್ದಾರೆ. ನಂತರ ಮೊಳಕೆಯೊಡೆಯಲು ಗಾಳಿ ತಾಗದಂತೆ ಬೀಜಗಳನ್ನು ಗಂಟಿನಲ್ಲಿ ಕಟ್ಟಿಟ್ಟು ಕಾವು ಆದ ಮೇಲೆ ಮತ್ತೆ 2 ತಾಸು ಗಾಳಿಗೆ ಇಟ್ಟಿದ್ದಾರೆ. ಬಳಿಕ ಮಾಡಿ ನಾಟಿ ಮಾಡಲು ಭತ್ತದ ಬೀಜಗಳನ್ನು ತೆಗೆದುಕೊಂಡು ಹೋಗಿ ಮೊಳಕೆಯೊಡೆಯಲು ಹಾಕಿದ್ದಾರೆ. ಆದರೆ ಅಲ್ಲೊಂದು ಇಲ್ಲೊಂದು ಬೀಜಗಳು ಮೊಳಕೆಯೊಡೆದಿವೆ. ಬಾಕಿ ಎಲ್ಲ ಬೀಜಗಳು ಹುಸಿ ಹೋಗಿವೆ ಎಂದು ರೈತರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts