More

    ಮೊಮ್ಮಗಳ ಖಾತೆಯಲ್ಲಿನ ಹಣಕ್ಕೆ ಅಜ್ಜಿ ಪಟ್ಟು

    ಆಯನೂರು: ಮೃತ ಮೊಮ್ಮಗಳ ಉಳಿತಾಯ ಖಾತೆಯಲ್ಲಿರುವ ಹಣವನ್ನು ತನಗೆ ಕೊಡಿ ಎಂದು ವೃದ್ಧೆಯೊಬ್ಬರು ಪಟ್ಟು ಹಿಡಿದು ವಿಷ ಕುಡಿಯುವ ಬೆದರಿಕೆ ಹಾಕಿದ್ದು, ಬ್ಯಾಂಕ್ ಅಧಿಕಾರಿಗಳಿಗೆ ಪೀಕಲಾಟ ಆರಂಭವಾಗಿದೆ.

    ಸುಮಾ ಎಂಬ ಮಹಿಳೆ ರಾಷ್ಟ್ರೀಯ ಬ್ಯಾಂಕ್​ನ ಆಯನೂರು ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಅವರ ತಾಯಿಯನ್ನು ನಾಮಿನಿ ಮಾಡಿದ್ದರು. ಸುಮಾ ಅವರ ತಾಯಿ ತೀರಿಕೊಂಡಿದ್ದು, ನಾಮಿನಿ ಬದಲಾವಣೆ ಮಾಡಿರಲಿಲ್ಲ. ಮಂಗಳೂರಲ್ಲಿ ನರ್ಸಿಂಗ್ ಮಾಡುತ್ತಿದ್ದ ಈಗ ಸುಮಾ ಕೂಡ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು, ಅವರಿಗೆ ಮದುವೆಯಾಗಿರಲಿಲ್ಲ.

    ಸುಮಾ ಅವರ ಅಜ್ಜಿ, ಈಗ ಮೊಮ್ಮಗಳ ಖಾತೆಯಲ್ಲಿರುವ ಹಣವನ್ನು ನನಗೆ ಕೊಡಿ ಎಂದು ಪಟ್ಟು ಹಿಡಿದಿದ್ದು, ಹಣ ನೀಡದೇ ಹೋದರೆ ಬ್ಯಾಂಕಿನ ಎದುರೇ ವಿಷ ಕುಡಿಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

    ಕಾನೂನು ಪ್ರಕಾರ ಮೃತಳ ಖಾತೆಯಲ್ಲಿನ ಹಣವನ್ನು ಅವರ ತಂದೆಗೆ ಹಣ ನೀಡಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಸುಮಾ ಅವರ ತಂದೆ ಬೇರೆ ಊರಿನಲ್ಲಿ ವಾಸವಾಗಿದ್ದು, ಸುಮಾ ಖಾತೆಯಲ್ಲಿರುವ ಹಣವನ್ನು ನೀನೇ ತೆಗೆದುಕೋ ಎಂದು ತನ್ನ ತಾಯಿಗೆ (ಸುಮಾಳ ಅಜ್ಜಿ) ಹೇಳಿದ್ದಾರೆ.

    ಸುಮಾ ಮರಣಪತ್ರ, ಮಂಜುಳಾ ಮರಣಪತ್ರ ಹಾಗೂ ಇದರ ಜತೆಗೆ ಸುಮಾ ತಂದೆ ಬರೆದುಕೊಟ್ಟಿರುವ ಪತ್ರವನ್ನು ಬ್ಯಾಂಕಿಗೆ ಸಲ್ಲಿಸಿರುವ ಅಜ್ಜಿ, ನಾನು ಬಡವಿ. ನನಗೆ ಬ್ಯಾಂಕಿಗೆ ಅಲೆಯಲು ಸಾಧ್ಯವಿಲ್ಲ. ಲಾಕ್​ಡೌನ್ ಇರುವುದರಿಂದ ದೊಡ್ಡಮಟ್ಟಿಯಿಂದ ಆಯನೂರಿಗೆ ಬರಲು ಬಸ್ಸಿನ ಸೌಕರ್ಯವಿಲ್ಲದೇ ನಡೆದುಕೊಂಡು ಬರುತ್ತಿದ್ದೇನೆ. ವಾರದಲ್ಲಿ 3 ಬಾರಿ ನಡೆದೇ ಬಂದಿದ್ದೇನೆ. ನನ್ನ ಗ್ರಾಮದಿಂದ ಆಯನೂರಿಗೆ ಬಂದು ಹೋಗಲು 30 ಕಿಮೀ ಆಗುತ್ತದೆ. ದಯಮಾಡಿ ನನಗೆ ಹಣ ಕೊಡಿಸಿ ಎಂದು ಗೌರಮ್ಮ ಅಂಗಲಾಚುತ್ತಿದ್ದಾರೆ.

    ನಾವು ಹಣ ಕೊಡುವುದಿಲ್ಲ ಎಂದು ಹೇಳಿಲ್ಲ. ನಾಮಿನಿ ಮರಣ ಪ್ರಮಾಣ ಪತ್ರ ಕೇಳಿದ್ದೇವೆ. ನಾಮಿನಿ ಇಲ್ಲದೇ ಹೋದರೆ ಖಾತೆಯಲ್ಲಿರುವ ಹಣ ಆಕೆಯ ಗಂಡನಿಗೆ ಕೊಡಲಾಗುವುದು. ಮಂಜುಳಾ ಮರಣ ಹೊಂದಿರುವುದಕ್ಕೆ ಮರಣ ಪ್ರಮಾಣ ಪತ್ರ ಕೊಟ್ಟಿಲ್ಲ. ಮರಣಪತ್ರ ಅಥವಾ ಗ್ರಾಪಂ ಪತ್ರ ಇವೆರಡರಲ್ಲಿ ಯಾವುದಾದರನ್ನೂ ಕೊಟ್ಟು ಉಳಿತಾಯ ಖಾತೆಯಲ್ಲಿರುವ ಹಣ ಪಡೆದುಕೊಳ್ಳಬಹುದು ಎನ್ನುತ್ತಾರೆ ಆಯನೂರು ಶಾಖೆ ಬ್ಯಾಂಕ್ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts