More

    ಮೊಬೈಲ್ ಬಳಕೆ ಹಿತಮಿತವಾಗಿರಲಿ

    ತೆಲಸಂಗ, ಬೆಳಗಾವಿ: ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರುವುದನ್ನು ರೂಢಿಸಿಕೊಳ್ಳಬೇಕು ಎಂದು ಬೆಳಗಾವಿ ಡಿಸಿಪಿ ರವೀದ್ರ ಗಡಾದಿ ಹೇಳಿದರು. ಗ್ರಾಮದ ಬಸವೇಶ್ವರ ವಿದ್ಯಾವರ್ಧಕ ಸಂಘದ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಬಳಕೆ ಅತಿಯಾದರೆ ವಿದ್ಯಾರ್ಥಿಗಳು ದಾರಿ ತಪ್ಪುತ್ತಾರೆ. ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಿದರೆ ತೊಂದರೆಯಾಗುವುದಿಲ್ಲ. ಆದರೆ ಮೊಬೈಲ್ ಹಿತಮಿತವಾಗಿ ಬಳಸಬೇಕು ಎಂದರು.

    ಓದುವುದೇ ವಿದ್ಯಾರ್ಥಿಗಳ ಕಾಯಕ. ಜ್ಞಾನ ಸಂಪಾದನೆ ನೌಕರಿಗಾಗಿ ಮಾತ್ರ ಎನ್ನುವ ಭ್ರಮೆಯಿಂದ ಹೊರಬರಬೇಕು. ಸರ್.ಎಂ. ವಿಶ್ವೇಶ್ವರಯ್ಯ ಪಟ್ಟ ಕಷ್ಟ ಯಾರಿಗೂ ಇಲ್ಲ. ದಲಿತರಿಗೆ ಶಿಕ್ಷಣ ಹಕ್ಕಿನಿಂದ ದೂರವಿಟ್ಟಿದ್ದ ಕಾಲವೊಂದಿತ್ತು. ಅಂತಹ ಕಷ್ಟಕರ ಸನ್ನಿವೇಶದಲ್ಲಿಯೇ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಪಡೆದರು. ಅವರು ಕಷ್ಟಪಟ್ಟು ಗಳಿಸಿದ ಜ್ಞಾನವನ್ನು ಜಗತ್ತಿನ ಅನೇಕ ದೇಶಗಳು ಆಧಾರವಾಗಿ ಬಳಸಿಕೊಳ್ಳುತ್ತವೆ. ಓದುವ ಹುಚ್ಚನ್ನು ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿಯಾಗಿ ಪಡೆಯಬೇಕು. ಆಗ ವಿದ್ಯಾರ್ಥಿ ಜೀವನ ಬಂಗಾರದಂತೆ ಆಗುತ್ತದೆ ಎಂದರು. ಹಿರೇಮಠದ ವೀರೇಶ್ವರ ಶ್ರೀಗಳು ಮಾತನಾಡಿ, ಸಾಧಕರ ಜೀವನ ಚರಿತ್ರೆ ಓದಬೇಕು. ಕಣ್ಮುಂದೆ ಕಾಣುವ ಸಾಧಕರ ಮಾತುಗಳನ್ನು ಕೇಳಬೇಕು. ಎಷ್ಟೇ ಬಾರಿ ಸೋತರೂ ಗೆದ್ದೇ ಗೆಲ್ಲುವೆ ಎನ್ನುವ ಛಲ ಬಿಡಬಾರದು. ಅಂತಹ ಗಟ್ಟಿಯಾದ ವ್ಯಕ್ತಿತ್ವ ರೂಪುಗೊಂಡಾಗ ಜೀವನಕ್ಕೆ ಅರ್ಥ ಬರುತ್ತದೆ ಎಂದರು. ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ಸುರೇಶ ಸನಗೊಂಡ, ಮಹಾಂತೇಶ ಕಾಂಬಳೆ, ಮಲ್ಲಿಕಾರ್ಜುನ ಹತ್ತಿ ಇತರರಿದ್ದರು. ಬಿ.ಜಿ.ಸಾರ್ವಾಡ ನಿರೂಪಿಸಿದರು. ಪ್ರಾಚಾರ್ಯ ಡಿ.ಎಂ.ಘೋರ್ಪಡೆ ಸ್ವಾಗತಿಸಿದರು. ಎಸ್. ಎ.ಅರ್ಧಾವೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts