More

    ಮೊದಲು ಅರೆಸ್ಟ್ ಆಗಿದ್ದವನೇ ಕಳ್ಳ

    ಕಮಲಾಪುರ: ಮಹಾಗಾಂವ್ ಕ್ರಾಸ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಿ ಕದ್ದಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಉಮೇಶ ಚಿಕ್ಕಮಠ ತಿಳಿಸಿದರು.

    ಮಹಾಗಾಂವ್ ಠಾಣೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜ.೨೮ರಂದು ಮಹಾಗಾಂವ್ ಕ್ರಾಸ್‌ನ ಸಂಗೀತಾ ಗುಂಡೇರಾವ್ ರಾಮಶೆಟ್ಟಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಕಳ್ಳ ಮನೆಯಲ್ಲಿದ್ದ ೧೭ ಗ್ರಾಂ ಚಿನ್ನದ ಗೋಧಿಕಾಳ ಮಣಿಗಳ ಸರ, ೧೨ ಗ್ರಾಂ ಬಂಗಾರದ ಲಾಕೆಟ್, ೧೦ ಗ್ರಾಂ ಬಂಗಾರದ ಒಂದು ಜತೆ ಕಿವಿಯೊಲೆ, ೨೫ ತೊಲ ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ಎಂದು ಹೇಳಿದರು.

    ಮಹಾಗಾಂವ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರ ಪರಿಗಣಿಸಿ ಎಸ್‌ಪಿ ಇಶಾ ಪಂತ್, ಎಎಸ್‌ಪಿ ಶ್ರೀನಿಧಿ, ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ಶಿವಶಂಕರ ಸಾಹು ಮಾರ್ಗದರ್ಶನದಲ್ಲಿ ಮಹಾಗಾಂವ್ ಪಿಎಸ್‌ಐ ಆಶಾ, ಸಿಬ್ಬಂದಿ ಅಮರನಾಥ, ರಾಮಲಿಂಗ, ಶ್ರವಣಕುಮಾರ, ಸಿದ್ದರಾಮ, ಸಿದ್ದಲಿಂಗ, ಸೋಮನಾಥ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದು ಮಾಹಿತಿ ನೀಡಿದರು.

    ಆರೋಪಿಗಾಗಿ ಸಾಕಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ. ೧೫ ದಿನ ಹಿಂದೆ ಗ್ರಾಮೀಣ ಸಬ್ ಅರ್ಬನ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಲವಂತ ಕಾಳೆ ಎಂಬಾತನನ್ನು ಬಂಧಿಸಲಾಗಿತ್ತು. ಈತನೇ ಮಹಾಗಾಂವ್ ಕ್ರಾಸ್ ಮನೆಯಲ್ಲೂ ಕಳ್ಳತನ ಮಾಡಿರಬಹುದು ಅನುಮಾನದಿಂದ ಜು.೨೦ರಂದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ ೧೭ ಗ್ರಾಂ ಬಂಗಾರದ ಗೋಧಿಕಾಳ ಮಣಿಗಳ ಸರ, ೧೨ ಗ್ರಾಂ ಬಂಗಾರದ ಲಾಕೆಟ್, ೨೫ ತೊಲ ಬೆಳ್ಳಿ ವಸ್ತುಗಳು ಸೇರಿ ೧.೬೦ ಲಕ್ಷದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

    ಪ್ರಭಾರಿ ಸಿಪಿಐ ಶಿವಶಂಕರ ಸಾಹು, ಪಿಎಸ್‌ಐ ಆಶಾ ರಾಠೋಡ್, ಸಿಬ್ಬಂದಿ ಅಮರನಾಥ, ರಾಮಲಿಂಗ, ಸಿದ್ದರಾಮ, ಸೋಮನಾಥ, ಸಿದ್ದಲಿಂಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts