More

    ಮೈ ರೋಮಾಂಚನಗೊಳಿಸಿದ ಸರ್ಜಿಕಲ್ ಸ್ಟ್ರೈಕ್…!

    ವಿಜಯಪುರ: ಯುದ್ಧದ ಸಮಯದಲ್ಲಿ ಸೈನಿಕರ ಶೌರ್ಯ, ಹೋರಾಟ, ಕುಟುಂಬದವರ ರೋದನದ ಕಥನವನ್ನು ದೃಶ್ಯ ರೂಪಕದಲ್ಲಿ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದರೇ ಅದನ್ನು ನೋಡುತ್ತಿದ್ದವರ ನೇತ್ರಗಳು ತುಂಬಿ ಬಂದಿದ್ದವು….!

    ಇಂತಹ ಮನಮೋಹಕವಾದ ನೃತ್ಯ ರೂಪಕವನ್ನು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಯ ಸಹಯೋಗದಲ್ಲಿ ಸೈನಿಕರ ಕಲ್ಯಾಣ ಸಂಘದಿಂದ ಹಮ್ಮಿಕೊಂಡಿದ್ದ 24ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಎ.ಆರ್.ಜೆ ಇಂಟರ್‌ನ್ಯಾಷನಲ್ ಶಾಲೆ ಮಕ್ಕಳು ನಡೆಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

    ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ರೂಪಕವನ್ನು ಕಣ್ಣೆದುರು ಬೆಳ್ಳಿಯ ಪರದೆಯಲ್ಲಿ ನಡೆಯುವಂತೆ ಅಭಿನಯಿಸಿದರು. ಅಂದು ಭಾರತ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಯಾವ ರೀತಿ ನಡೆಯಿತು. ಅದರ ರೂಪರೇಷೆಗಳು ಯಾವ ರೀತಿ ಇದ್ದವು. ಶತ್ರು ರಾಷ್ಟ್ರ ಭಾರತ ದೇಶದ ಒಳಗೆ ನುಗ್ಗಿದಾಗ ನಮ್ಮ ಸೈನಿಕರು ತೆಗೆದುಕೊಂಡ ನಿರ್ಧಾರಗಳು ಹೇಗಿದ್ದವು. ಯಾವ ರೀತಿ ಪಾಕಿಸ್ತಾನ ಸೈನಿಕರನ್ನು ಎದುರಿಸಿದರು ಎನ್ನುವುದನ್ನು ಎಳೆಎಳೆಯಾಗಿ ರೂಪಕದಲ್ಲಿ ಕಟ್ಟಿಕೊಟ್ಟರು. ವಿದ್ಯಾರ್ಥಿಗಳ ನೈಜ ಅಭಿನಯ ಕಂಡ ಸಭಿಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

    ಸದಾ ಶಾಂತಿ ಬಯಸುವ ಭಾರತದ ಗಡಿಯೊಳಗೆ ನುಗ್ಗಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಿ ವಿಜಯೋತ್ಸವ ಆಚರಿಸಿದ್ದು, ಈ ಸಮಯದಲ್ಲಿ ನಮ್ಮ ವೀರಯೋಧರು ಹುತಾತ್ಮರಾಗಿದ್ದ ಸಮಯದಲ್ಲಿ ಅವರ ಕುಟುಂಬದವರ ಕಣ್ಣೀರಿನ ದೃಶ್ಯಗಳು ನೆರೆ ಪ್ರೇಕ್ಷಕರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿದ್ದವು.

    ಜನಮನ ರಂಜಿಸಿದ ಕಾರ್ಯಕ್ರಮ

    ಮಾಜಿ ಸೈನಿಕರು ಹಾಗೂ ಕುಟುಂಬದವರನ್ನು ಜಿಲ್ಲೆಯ ಖ್ಯಾತ ಕಲಾವಿದ ಪ್ರಶಾಂತ ಚೌಧರಿ ಹಾಸ್ಯದ ಹೊನಲು ಹರಿಸಿದರು. ಜ್ಯೂನಿಯರ್ ವಿಷ್ಣುವರ್ಧನ್ ಖ್ಯಾತಿಯ ರವಿ ಕೋರಿ ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡರು. ಜ್ಯೂನಿಯರ್ ಎಸ್‌ಪಿ ಬಾಲಸುಬ್ರಹ್ಮಣ್ಯಂ ಖ್ಯಾತಿಯ ಪಾಂಡುರಂಗ ಕುಲಕರ್ಣಿ, ಜ್ಯೂನಿಯರ್ ಲತಾ ಮಂಗೇಶ್ಕರ್ ಖ್ಯಾತಿಯ ಅಕ್ಕಮಹಾದೇವಿ, ಶಿವಣ್ಯ ಪವಾರ್, ವಿಜಯಲಕ್ಷ್ಮಿ ಕೋರಿ, ಕಿರಣಕುಮಾರ ಪೂಜಾರಿ, ನಾಸಿರ್ ಹುಸೇನ್, ಮೊಹಮ್ಮದ್ ಉಮೇರ್ ಪ್ರೇಕ್ಷಕರ ಮನರಂಜಿಸಿದರು. ಹೊಯ್ಸಳ ಅಕಾಡೆಮಿ ವಿದ್ಯಾರ್ಥಿನಿ ರಾಧಿಕಾ ಮಾದರ ಭರತನಾಟ್ಯ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts