More

    ಮೇರಿ ಲೈಫ್, ಮೇರಾ ಸ್ವಚ್ಛ ಶಹರ್ ಕಾರ್ಯಕ್ರಮ

    ಸರಗೂರು: ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನಿರುಪಯುಕ್ತ ಸಾಮಗ್ರಿಗಳನ್ನು ಪ.ಪಂ ವಾಹನಗಳಿಗೆ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಮನವಿ ಮಾಡಿದರು.

    ಮೇರಿ ಲೈಫ್, ಮೇರಾ ಸ್ವಚ್ಛ ಶಹರ್ ಕಾರ್ಯಕ್ರಮದಡಿ ಶನಿವಾರ ಪಟ್ಟಣ ಸಂತೆ ಮೈದಾನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿರುಪಯುಕ್ತ ವಸ್ತು ಸಂಗ್ರಹ ಘಟಕ ಹಾಗೂ ವಾಹನ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪಟ್ಟಣದಲ್ಲಿ ಮೇ 25ರಿಂದ ಜೂನ್ 5ರತನಕ ಸ್ವಚ್ಛ ಭಾರತ್ ಅಭಿಯಾನದಡಿ ಮೇರಿ ಲೈಫ್ ಮೇರಾ ಸ್ವಚ್ಛ ನಗರ ಕಾರ್ಯಕ್ರಮ ನಡೆಯಲಿದೆ. 6 ಬಗೆಯ ನವೀಕರಿಸಿ ಮರುಬಳಕೆ ಮಾಡುವ ವಸ್ತು ಉತ್ಪಾದನೆ ಕಡಿತಗೊಳಿಸಲು ಹಾಗೂ ಸುಸ್ಥಿರ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದು ಎಂದರು.

    ತ್ಯಾಜ್ಯಗಳ ಮರುಬಳಕೆ, ಪುನರ್ ಬಳಕೆ ಉದ್ದೇಶದಿಂದ ಸಂತೆ ಮೈದಾನದಲ್ಲಿ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸುವ ಕೇಂದ್ರ ತೆರೆಯಲಾಗಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಆಟಿಕೆ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಬಳಸಿದ ಬಟ್ಟೆ, ದಿನಪತ್ರಿಕೆ, ಹಳೇ ಪುಸ್ತಕಗಳನ್ನು ಇತರ ವಸ್ತುಗಳನ್ನು ಪಟ್ಟಣದ ಸಾರ್ವಜನಿಕರು ಸಂಗ್ರಹ ಕೇಂದ್ರಗಳಿಗೆ ನೀಡಬಹುದು. ಅಲ್ಲದೆ ಮಾಹಿತಿಗಾಗಿ ಕೇಂದ್ರದ ಸಹಾಯವಾಣಿ ಮೊ. 9611066275, 9113264663 ಸಂಪರ್ಕಿಸಬಹುದು ಎಂದು ತಿಳಿಸಿದರು.

    ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು. ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಶ್ರೀನಿವಾಸ, ಎಸ್.ಎಲ್.ರಾಜಣ್ಣ, ಶಿವಕುಮಾರ್, ಹೇಮಾವತಿ ರಮೇಶ್, ಚೆಲುವ ಕೃಷ್ಣ, ಚೈತ್ರಾ ಸ್ವಾಮಿ, ಸಣ್ಣತಾಯಮ್ಮ, ನೂರಳಾಸ್ವಾಮಿ, ದಿವ್ಯಾ ನವೀನ್, ಸಿಬ್ಬಂದಿ ಪಳಿನಿಸ್ವಾಮಿ, ಶಿವಪ್ರಸಾದ್, ಕುಮಾರ್, ಅರುಣ್, ರಾಮು, ಅರ್ಜುನ್, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts