More

    ಮೆಣಸಿನಕಾಯಿ ಗಿಡ ಹರಗಿದ ರೈತ

    ಹುಬ್ಬಳ್ಳಿ: ಬೆಳೆದ ಬೆಳೆ ಅತಿವೃಷ್ಟಿಯಿಂದಾಗಿ ಕೈಗೆ ಬಾರದಂ ತಾಗಿದೆ. ಸಾಲ ಮಾಡಿ ಬಿತ್ತಿದ್ದ ಬೀಜ, ಹೊಲಕ್ಕೆ ಹಾಕಿದ ಗೊಬ್ಬರ, ಸಿಂಪಡಿಸಿದ ರಾಸಾಯನಿಕದಿಂದ ಈ ಬಾರಿಯಾದರೂ ಉತ್ತಮ ಬೆಳೆ ಬರಬಹುದೆಂಬ ರೈತನ ಕನಸನ್ನು ಇತ್ತೀಚೆಗೆ ಸುರಿದ ಧಾರಾಕಾರ ಮಳೆ ನುಚ್ಚುನೂರು ಮಾಡಿದೆ.

    ಮೆಣಸಿನಕಾಯಿ ಬೆಳೆಗೆ ಹೆಸರಾಗಿದ್ದ ಕುಂದಗೋಳ ತಾಲೂಕಿನ ರೈತರದ್ದೂ ಇಂತಹದ್ದೇ ಪರಿಸ್ಥಿತಿ. ಹಗಲಿರುಳು ದುಡಿದು ಭೂಮಿ ಹದಗೊಳಿಸಿ, ಸಾವಿರಾರು ರೂ. ಸಾಲ ಮಾಡಿ ತಂದು ಬಿತ್ತನೆ ಮಾಡಿ ಬೆಳೆದಿದ್ದ ಮೆಣಸಿನಕಾಯಿ ಆಳೆತ್ತರಕ್ಕೆ ಬೆಳೆದಿದ್ದರೂ ಧಾರಾಕಾರ ಮಳೆಯಿಂದಾಗಿ ಕಾಯಿ ಬಿಟ್ಟಿಲ್ಲ. ಮೆಣಸಿನಗಿಡಗಳನ್ನು ಕಂಡು ಬೇಸತ್ತ ರೈತ ಅದನ್ನು ಹರಗದೇ ಬೇರೆ ದಾರಿ ಇಲ್ಲ ಎಂಬ ಸ್ಥಿತಿಯಲ್ಲಿದ್ದಾನೆ.

    ಕುಂದಗೋಳ ತಾಲೂಕು ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ ಯೋಗಪ್ಪನವರ ತನ್ನ 4 ಎಕರೆ ಹೊಲದಲ್ಲಿ ಬೆಳೆದ ಮೆಣಸಿನಕಾಯಿಯನ್ನು ಹರಗಿ, ನಾಶಗೊಳಿಸಿದ್ದಾನೆ. ಸತತ ಮಳೆಯಿಂದ ಮೆಣಸಿನಗಿಡ ಕೊಳೆಯುವಂತಾಗಿದೆ. ಒಂದೇ ಒಂದು ಗಿಡದಲ್ಲಿ ಕಾಯಿ ಇಲ್ಲ. ಜತೆಗೆ ಹೊಲದ ಉದ್ದಗಲಕ್ಕೂ ಹುಲ್ಲು ಬೆಳೆದು ನಿಂತಿದೆ.

    ಮಳೆಯಿಂದಾಗಿ ಹೊಲ ಪೂರ್ತಿ ಕೆಸರುಮಯವಾಗಿದೆ. ಟ್ರ್ಯಾಕ್ಟರ್​ನ ರೋಟಾವೇಟರ್​ನಿಂದ ಹೊಲ ಹರಗಿದರೂ ಕೆಸರು ಗಾಲಿಯಲ್ಲಿ ಸಿಲುಕುತ್ತಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಹರಗಲೂ ಕಷ್ಟಪಡುವಂತ ಸ್ಥಿತಿ ರೈತನದ್ದು.

    ಸತತ 2 ವರ್ಷಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತ ಈಗಾಗಲೇ ಶೇಂಗಾ, ಹತ್ತಿ ಬೆಳೆ ಕಳೆದುಕೊಂಡಿದ್ದಾನೆ. ಈ ಬಾರಿಯಾದರೂ ಮೆಣಸಿನಕಾಯಿ ಕೈ ಹಿಡಿದು, ಕಳೆದ ಬಾರಿ ಮಾಡಿದ್ದ ಸಾಲ ತೀರಬಹುದೆಂಬ ರೈತನ ನಿರೀಕ್ಷೆ ಹುಸಿಯಾಗಿದೆ.

    ಮಳೆ ಹೆಚ್ಚಾಗಿ ದ್ದರಿಂದ ಮೆಣಸಿ ನಕಾಯಿ ಬೆಳೆ ಬಾರದಂತಾಗಿದೆ. ಬೆಳೆ ಪರಿಹಾರವನ್ನೂ ಸರ್ಕಾರ ನೀಡುತ್ತಿಲ್ಲ. ಬೆಳೆ ವಿಮೆಯನ್ನಾದರೂ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ಕಾಯ್ದು ಕುಳಿತಿದ್ದೇವೆ. ಸರ್ಕಾರ ತಕ್ಷಣ ಬೆಳೆ ವಿಮೆಪರಿಹಾರ ಬಿಡುಗಡೆ ಮಾಡುವ ಜತೆಗೆ ಅತಿವೃಷ್ಟಿಯಿಂದ ಹಾಳಾಗಿರುವ ಬೆಳೆಗೂ ಪರಿಹಾರ ನೀಡಬೇಕು.
    |ಬಸವರಾಜ ಯೋಗಪ್ಪನವರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts