More

    ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು

    ರಾಯಬಾಗ, ಬೆಳಗಾವಿ: ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ ಸೇರಿ ಎಲ್ಲ ಮೂಲಭೂತ ಸೌಲಭ್ಯ ದೊರಕಿಸಿಕೊಡಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

    ತಾಲೂಕಿನ ಕೆಂಪಟ್ಟಿ ಗ್ರಾಮದ ಮೊಸುಬಾ ತೋಟದಲ್ಲಿ ಜಿಪಂನಿಂದ ಮಂಜೂರಾದ 50 ಲಕ್ಷ ರೂ. ಅನುದಾನದಲ್ಲಿ ಕೆಂಪಟ್ಟಿ-ಕಾಡಾಪುರ ರಸ್ತೆಯಿಂದ ಮೊಸುಬಾ ತೋಟದವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಮಂಜೂರಾದ 41 ಲಕ್ಷ ರೂ. ಅನುದಾನದಲ್ಲಿ 138 ಮನೆಗಳಿಗೆ ನಳ ಸಂಪರ್ಕ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ರಸ್ತೆ ಅಗಲೀಕರಣಕ್ಕೆ ರೈತರು ಸಹಕರಿಸಬೇಕು ಎಂದರು.

    ಅಭಿಯಂತ ಆರ್.ಬಿ.ಮನವಡ್ಡರ, ಗ್ರಾಪಂ ಅಧ್ಯಕ್ಷೆ ಅಕ್ಕವ್ವ ಕಾಂಬಳೆ, ಮಹಾದೇವ ನಾಯಿಕ, ಶಿವಪ್ಪ ನಾಯಿಕ, ಧೋಂಡಿ ಸಬಕಾಳೆ, ಲಕ್ಷ್ಮಣ ನಾಯಿಕ, ಹನುಮಂತ ಪವಾಡಿ, ಸುಭಾಷ ನಾಯಿಕ, ವಿರೂಪಾಕ್ಷ ನಾಯಿಕ, ಕಲ್ಲಪ್ಪ ನಾಯಿಕ, ಬಸು ಮಗದುಮ್ಮ, ರಮೇಶ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts