More

    ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

    ಬೈಲಹೊಂಗಲ, ಬೆಳಗಾವಿ: ಸಮೀಪದ ಇಂಚಲ ಗ್ರಾಮದ ರೇವಣಸಿದ್ಧೇಶ್ವರ ಬಡಾವಣೆಯ 5ಕ್ಕೂ ಹೆಚ್ಚು ರಸ್ತೆ ಕಾಮಗಾರಿ ಹದಗೆಟ್ಟ ಪರಿಣಾಮ ಅಲ್ಲಿನ ನಿವಾಸಿಗಳು ಮಂಗಳವಾರ ದಿಢೀರ್ ರಸ್ತೆಗಿಳಿದು ಪ್ರತಿಭಟಿಸಿದರು.

    ಕಳೆದ 15ವರ್ಷಗಳಿಂದ ಯಾವುದೇ ಸೌಕರ್ಯ ಸಿಕ್ಕಿಲ್ಲ. ಸ್ವಂತ ಹಣದಿಂದ ನೀರಿನ ಸೌಕರ್ಯ, ಡ್ರೆನೇಜ್, ಬೀದಿದೀಪ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಗ್ರಾಪಂ ಸದಸ್ಯರು ಮತ್ತು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬಡಾವಣೆಯ ಸಮಸ್ಯೆ ಪರಿಶೀಲಿಸಿ ಮಾತನಾಡಿದ ಶಂಕರ ಮಾಡಲಗಿ, ಶಾಸಕರು ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆ ಆಲಿಸಿ ರಸ್ತೆ ಸೇರಿ ಎಲ್ಲ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಣ್ಣಗೌಡ ಸಂಗನಗೌಡರ, ಆನಂದ ಬೆಳವಡಿ, ಮಂಜುನಾಥ ಮುರಕಿಬಾವಿ, ಅಡಿಯಪ್ಪ ಶಿಂತ್ರಿ, ಶಿವಾನಂದ ಶೆಟ್ಟೆನ್ನವರ, ಸುರೇಶ ಪಾಟೀಲ, ಈರಣ್ಣ ಹೊಂಗಲ, ಲಿಂಗನಾಯಕ ಚೆನ್ನಿನಾಯ್ಕರ, ಹಲೀಮಸಾಹೇಬ್ ಮಿರ್ಜನ್ನವರ, ಕುಮಾರ ದಳವಾಯಿ, ವಿನಾಯಕ ಎಮ್ಮಿ, ಶಿವರಾಜ ಅಂಗಡಿ, ಶಿವಾನಂದ ಅಬ್ಬಾಯಿ, ಪ್ರಸನ್ನ ಪೂಜಾರ, ಸಿದ್ದರಾಮ ಮುರಕಿಬಾವಿ, ಶಿವಾನಂದ ನೀಲನ್ನವರ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts