More

    ಮೂಲಸೌಲಭ್ಯ ಒದಗಿಸಿ ತೆರಿಗೆ ಆಕರಿಸಿ

    ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿಯೇ ಗದಗ ಜಿಲ್ಲೆಯಿಂದ ಹೆಚ್ಚು ಆಸ್ತಿ ತೆರಿಗೆ ಆಕರಣೆ ಮಾಡಲಾಗುತ್ತಿದೆ. ಎಪಿಎಂಸಿ ಹಾಗೂ ಕೈಗಾರಿಕಾ ವಸಾಹತು ಪ್ರದೇಶವು ನಗರಸಭೆಗೆ ಹಸ್ತಾಂತರವಾದ ನಂತರ ನಗರಸಭೆಯವರು ಮೂಲಸೌಲಭ್ಯ ಒದಗಿಸಿದ ನಂತರ ತೆರಿಗೆ ಆಕರಣೆ ಮಾಡಬೇಕು. ಕೈಗಾರಿಕಾ ವಸಾಹತು ಮತ್ತು ವಾಣಿಜ್ಯ ಪ್ರದೇಶಕ್ಕೆ ಒಂದೇ ದರ ನಿಗದಿಯಾಗಿದೆ. ಇದರಿಂದ ಕೈಗಾರಿಕಾ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಉದ್ಯಮಗಳಿಗೆ ಹೆಚ್ಚಿನ ಹೊರೆಯಾಗಿದೆ. ಆದ್ದರಿಂದ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಪ್ರತ್ಯೇಕವಾಗಿ ಕರ ನಿಗದಿ ಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ನಗರಸಭೆಯವರು ನಗರದ ಎಲ್ಲ ಆಸ್ತಿಗಳ ಕರವನ್ನು ಮನಬಂದಂತೆ ನಿಗದಿಪಡಿಸಿದ್ದಾರೆ. ಯಾವುದೇ ಒಂದು ಆಸ್ತಿಯ ಕರವನ್ನು ಹೆಚ್ಚಿಸಬೇಕಾದಲ್ಲಿ ಆಸ್ತಿಯ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ ಮೇಲೆ ಅವರಿಂದ ಉತ್ತರ ಪಡೆದು ಕಾನೂನು ಚೌಕಟ್ಟಿನಲ್ಲಿ ಆದೇಶಿಸಬೇಕು. ಈ ಆದೇಶವನ್ನು ಜಾರಿ ಮಾಡಿದ ಮೇಲೆ ಕರ ನಿರ್ಧಾರಣ ನೋಟಿಸ್ ಜಾರಿಗೊಳಿಸಬೇಕು. ಮಾಲೀಕರಿಗೆ ಅವಕಾಶ ಕೊಟ್ಟು ದಂಡ ವಿಧಿಸಬೇಕೆ ಹೊರತು ಏಕಗವಾಕ್ಷಿಯಾಗಿ ದಂಡ ವಿಧಿಸುವ ಅವಕಾಶವಿಲ್ಲ. ಹೀಗಾಗಿ ಸದ್ಯ ಜಾರಿ ಮಾಡಿರುವ ಎಲ್ಲ ನೋಟಿಸ್​ಗಳನ್ನು ಹಿಂಪಡೆಯಬೇಕು. ಆದರೆ, ನಗರಸಭೆಯವರು ನೇರವಾಗಿ ಡಿಮಾಂಡ್ ನೋಟಿಸ್ ಜಾರಿ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದಿದ್ದಾರೆ.

    ಗದಗ ನಗರದಲ್ಲಿ ನಗರಸಭೆ ಅಧಿಕಾರಿಗಳು ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಿ ಕರವನ್ನು ಆಕರಣೆ ಮಾಡಲಾಗಿದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ಕಲಂ 94, ವಿವರಣೆ (1-ಎ)(ಎ) ಹಾಗೂ (ಬಿ) ಅಡಿಯಲ್ಲಿ ಪೂಜಾ ಸ್ಥಾನವಾಗಿ ತೆಗೆದಿರಿಸಿದ ಸ್ಥಳ. ಬಾಡಿಗೆಯನ್ನು ಧರ್ವರ್ಥ ಉದ್ದೇಶಕ್ಕಾಗಿ ಮಾತ್ರ ಬಳಸುವ ಛತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಆದರೂ, ನಗರ ಸಭೆಯವರು ದೊಡ್ಡ ಮೊತ್ತದ ಕರ ಹಾಗೂ ದಂಡ ಆಕರಿಸಿದ್ದಾರೆ. ಧಾರ್ವಿುಕ ಕೇಂದ್ರಗಳಿಗೆ ನೀಡಿದ ನೋಟಿಸ್ ಹಿಂಪಡೆಯಬೇಕು. ಅಲ್ಲದೆ, ಇದೇ ರೀತಿ ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್​ಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಕಾನೂನಿನಲ್ಲಿ ಇವುಗಳು ತೆರಿಗೆಯಿಂದ ವಿನಾಯಿತಿಗೆ ಒಳಪಟ್ಟಿವೆ. ಆದ್ದರಿಂದ ಇಂತಹ ನೋಟಿಸ್​ಗಳನ್ನು ತಕ್ಷಣ ಹಿಂಪಡೆಯಲು ಆದೇಶಿಸಬೇಕು. ನಗರದಲ್ಲಿ ಎಪಿಎಂಸಿಯಲ್ಲಿ ಒಂದಿಷ್ಟೂ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದರೂ ಅಲ್ಲಿರುವ ಖಾಲಿ ಜಾಗ ಮತ್ತು ಕಟ್ಟಡಗಳಿಗೆ ಕರ ವಿಧಿಸಲಾಗಿದೆ. ಆಸ್ತಿ ಕರ ಏರಿಕೆ ಮಾಡಿರುವುದು ಏಕಪಕ್ಷೀಯವಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಸಂಸ್ಥೆ ಅಧ್ಯಕ್ಷ ಆನಂದ ಪೊತ್ನೀಸ್, ಉಪಾಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ, ಗೌರವ ಕಾರ್ಯದರ್ಶಿ ವೀರೇಶ ಕೂಗು ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts