More

    ಮೂಲಸೌಲಭ್ಯಕ್ಕೆ ಒತ್ತು ನೀಡಲು ಕ್ರಮ

    ಕಿಕ್ಕೇರಿ: ಗ್ರಾಮಗಳಿಗೆ ಮೊದಲು ಮೂಲಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ಜೆ. ಅಶೋಕ್‌ಕುಮಾರ್ ತಿಳಿಸಿದರು.
    ಹೋಬಳಿಯ ಲಕ್ಷ್ಮೀಪುರ ಗ್ರಾಪಂನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಬಹುತೇಕ ಬೀದಿದೀಪಗಳ ಸಮಸ್ಯೆ ಇದೆ. ಮನೆ, ವಾಣಿಜ್ಯ ಮಳಿಗೆಗಳ ಲೈಸೆನ್ಸ್, ಅಭಿವೃದ್ಧಿ ಶುಲ್ಕ ಬಹಳ ವರ್ಷದಿಂದ ಪರಿಷ್ಕರಣೆಯಾಗಿಲ್ಲ. ಕನಿಷ್ಠ 1 ಸಾವಿರ ರೂ. ಗೆ ಏರಿಕೆಯಾದಲ್ಲಿ ಗ್ರಾ.ಪಂ. ಆದಾಯ ಹೆಚ್ಚಲಿದೆ ಎಂದರು.
    ತುಳಸಿಗೇಟ್ ಬಳಿ ಸಾಕಷ್ಟು ವಾಣಿಜ್ಯ ಮಳಿಗೆ, ಮಾಂಸ, ಮೀನು, ಕೋಳಿ ಅಂಗಡಿಗಳು ತಲೆ ಎತ್ತಿವೆ. ಮಾಲೀಕರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳಿಗೆ ಇಲ್ಲ. ಸರ್ವೇ ನಂಬರ್ ಜಮೀನಿನಲ್ಲಿ ಮಳಿಗೆ ಇವೆ ಎನ್ನುತ್ತಿದ್ದು, ಲೈಸೆನ್ಸ್, ಕಂದಾಯ ಕಟ್ಟುತ್ತಿಲ್ಲ. ಕೋಳಿ, ಮಾಂಸ, ಹೋಟೆಲ್‌ಗಳ ತ್ಯಾಜ್ಯದಿಂದ ಅಶುಚಿತ್ವ ಮನೆ ಮಾಡಿದೆ. ಶುಚಿ ಮಾಡಲು ಗ್ರಾ.ಪಂ. ಬೇಕು, ಕಂದಾಯ ಕಟ್ಟುವುದು ಬೇಡ ಎಂದರೆ ಸರಿಯಲ್ಲ. ಮೊದಲು ಕಂದಾಯ ಪಾವತಿಸಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.
    ಅಕ್ರಮವಾಗಿ ದಾಖಲೆ ಇಲ್ಲದೆ ಹಲವರಿಗೆ ಇ-ಸ್ವತ್ತು ಮಾಡಿರುವ ಪ್ರಕರಣ ಇದ್ದು, ಇವುಗಳನ್ನು ಪರಿಶೀಲಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

    ಸದಸ್ಯರಾದ ಉಮೇಶ್, ಸ್ವಾಮಿ, ರಾಜಶೇಖರ್, ರಘು, ರಮೇಶ್, ಶ್ರೀಧರ್, ಕನಕಾ, ಅನಿತಾ, ಪಿಡಿಒ ಸುರೇಶ್‌ಬಾಬು, ಕಾರ್ಯದರ್ಶಿ ಯೋಗೇಶ್, ಬಿಲ್‌ಕಲೆಕ್ಟರ್ ಶ್ರೀಧರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts