More

    ಮೂಲಸೌಕರ್ಯ ಅಭಿವೃದ್ಧಿಗೆ 9.52 ಕೋಟಿ ರೂ.

    ಕಾಗವಾಡ: ತಾಲೂಕಿನ ಮೋಳೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೆ 9.52 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು. ತಾಲೂಕಿನ ಮೋಳೆ ಗ್ರಾಮದಲ್ಲಿ ಬುಧವಾರ 2.50 ಕೋಟಿ ರೂ. ವೆಚ್ಚದಲ್ಲಿ ಗ್ರಾಮದಿಂದ ಮುರಗುಂಡಿವರೆಗೆ ರಸ್ತೆ ಕಾಮಗಾರಿ, 1.50 ಕೋಟಿ ರೂ. ವೆಚ್ಚದಲ್ಲಿ ಮೋಳೆ-ಕಾತ್ರಾಳ ರಸ್ತೆ, 4.14 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಸೇರಿ ಒಟ್ಟು 9.52 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದ ತೋಟಪಟ್ಟಿ ರಸ್ತೆಗಳು ಹಾಳಾಗಿದ್ದು, ಕಾರ್ಖಾನೆಗೆ ಕಬ್ಬು ಕಳಿಸಲು ತೊಂದರೆಯಾಗುತ್ತಿದೆ ಎಂದು ರೈತರು ಮನವಿ ಮಾಡಿಕೊಂಡಿದ್ದರು. ಅವರಿಗೆ ಅನುಕೂಲ ಕಲ್ಪಿಸಲು 9.52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಗ್ರಾಮಸ್ಥರು ಶಾಸಕರನ್ನು ಪೇಟಾ ತೊಡಿಸಿ ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷ ಭೂತಾಳಿ ಥರಥರೆ, ಮುಖಂಡರಾದ ಗೋರಖನಾಥ ಕೊಳೆಕರ, ಸಂಜಯ ತೆಲಸಂಗ, ಎ.ಜಿ.ಹಳ್ಳಿ, ಆರ್.ಎಂ.ಪಾಟೀಲ, ನಾನಾಸಾಹೇಬ ಅವತಾಡೆ, ಲಕ್ಷ್ಮಣ ಹಳಮನಿ, ನಿಖಿತ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts