More

    ಮೂರು ಪಟ್ಟು ಹೆಚ್ಚಳಕ್ಕೆ ಬಿಡ್

    ಕೊಪ್ಪ: ವೈಯಕ್ತಿಕ ಪ್ರತಿಷ್ಠೆ, ಹಠ, ಜಿದ್ದು, ರಾಜಕಾರಣ ಇನ್ನಿತರ ಕಾರಣಗಳಿಂದ ಈ ಬಾರಿಯೂ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಪಟ್ಟಣ ಪಂಚಾಯಿತಿಯ 19 ಮಳಿಗೆಗಳಲ್ಲಿ ಕೆಲವು ಮೂರು ಪಟ್ಟು ಹೆಚ್ಚಳಕ್ಕೆ ಬಾಡಿಗೆಗೆ ಹರಾಜುಗೊಂಡಿವೆ. ಬಸ್ ನಿಲ್ದಾಣದ ಎದುರಿರುವ 34 ಮಳಿಗೆಗಳ ಪೈಕಿ ಅವಧಿ ಮುಗಿದಿದ್ದ 19 ಮಳಿಗೆಗಳ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು. ಮಳಿಗೆ ಸಂಖ್ಯೆ 2ಕ್ಕೆ 13 ಜನ ಬಿಡ್ಡಿಂಗ್​ಗೆ ಕೂತಿದ್ದರು. ಈ ವೇಳೆ ಇಬ್ಬರು ಬಿಡ್​ದಾರರು ಪ್ರತಿಷ್ಠೆಗೆ ಬಿದ್ದ ಪರಿಣಾಮ 17,600 ರೂ.ಗೆ ಹರಾಜುಗೊಂಡಿತು. ಇದರ ಜತೆಗೆ ಶೇ.18 ಜಿಎಸ್​ಟಿ ಸೇರಿಸಿ ತಿಂಗಳ ಬಾಡಿಗೆ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ 5ರಿಂದ 6 ಸಾವಿರ ರೂ.ಗೆ ಹರಾಜು ನಡೆಯುತ್ತಿತ್ತು.

    ಮಳಿಗೆ ಸಂಖ್ಯೆ 14 ಅಂಗವಿಕಲರಿಗೆ ಮೀಸಲು ಆಗಿತ್ತು. ಈ ಮಳಿಗೆ 4800 ರೂ.ಗೆ ಹರಾಜುಗೊಂಡಿದ್ದು ಕಡಿಮೆ ಬೆಲೆಗೆ ಹರಾಜಾದಂತಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ನಡೆಯುವ ಹರಾಜುಗಳು ಕುತೂಹಲದಿಂದ ಕೂಡಿರುತ್ತವೆ. ಸೇಡು, ಪ್ರತಿಷ್ಠೆ, ರಾಜಕೀಯ ಕಾರಣಗಳಿಗೆ ಹೆಚ್ಚು ಬಾಡಿಗೆಗೆ ಪಪಂ ಮಳಿಗೆಗಳು ಹರಾಜುಗೊಂಡು ಪಟ್ಟಣ ಪಂಚಾಯಿತಿಗೆ ನಿರೀಕ್ಷೆಗೂ ಮೀರಿ ಹೆಚ್ಚು ಆದಾಯ ತಂದುಕೊಡುತ್ತವೆ.

    2018ರಲ್ಲಿ ಪಪಂನ 10 ಮಳಿಗೆಗಳಿಗೆ ನಡೆದಿದ್ದ ಹರಾಜಿನಲ್ಲಿ 50 ಸಾವಿರಕ್ಕೂ ಹೆಚ್ಚು ಹಣಕ್ಕೆ ಹರಾಜುಗೊಂಡಿದ್ದವು. ಆಗಲೂ ರಾಜಕೀಯ ಕಾರಣಕ್ಕೆ, ಇನ್ನೊಬ್ಬರನ್ನು ಹಣಿಯಲು ಬೇಕಾಬಿಟ್ಟಿ ಹರಾಜು ಕೂಗಲಾಗಿತ್ತು. ಬಿಡ್ ಕೂಗದಂತೆ ಮಳಿಗೆಗಳ ಅಂಗಡಿ ಮಾಲೀಕರು ಕಾಲಿಗೆ ಬಿದ್ದು, ಕೈಮುಗಿದು ಕೇಳಿಕೊಂಡ ಮನಕಲಕುವ ಘಟನೆ ನಡೆಯಿತು. ನನ್ನ ಅಂಗಡಿ ಬಿಡ್ ಕೂಗಬೇಡಿ ಎಂದು ಮಾಲೀಕ ಬಿಡ್​ದಾರರೊಬ್ಬರ ಕಾಲಿಗೆ ಬಿದ್ದರು. ಇದರಿಂದ ಬಿಡ್ ಕೂಗದೆ ಬಿಟ್ಟುಕೊಟ್ಟರು. ಮತ್ತೊಬ್ಬರು ನನಗೆ ಹೊಟ್ಟೆಪಾಡಿಗೆ ಇರುವುದೊಂದೇ ಅಂಗಡಿ. ಅದನ್ನು ಹರಾಜು ಕೂಗದೆ ನನಗೆ ಸಹಕಾರ ನೀಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದು ಮನಕಲುಕುವಂತಿತ್ತು. ಆದರೂ ಬಿಡ್ ಕೂಗಿದರು. ಇನ್ನೊಂದು ಮಳಿಗೆ ಮೂವರು ಬಿಡ್ಡಿಂಗ್ ಮಾಡಲು ಸಿದ್ಧರಾಗಿದ್ದರು. ಆಗ ಹೊಂದಾಣಿಕೆ ಮಾಡಿಕೊಂಡು ಒಬ್ಬರಿಗೆ 50 ಸಾವಿರ ರೂ. ನೀಡಿ ಹರಾಜು ಪ್ರಕ್ರಿಯಲ್ಲಿ ಭಾಗಿಯಾಗದಂತೆ ನೋಡಿಕೊಂಡರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts