More

    ಮೂಢನಂಬಿಕೆ, ವಿರುದ್ಧ, ಹೋರಾಟ, ಶಕ್ತಿ, ವಿಜ್ಞಾನ

    ಚಿಕ್ಕಮಗಳೂರು: ವಿಜ್ಞಾನ ಎಂಬುದು ಮೂಢನಂಬಿಕೆ ವಿರುದ್ಧ ಹೋರಾಡುವ ದೊಡ್ಡ ಶಕ್ತಿ ಎಂದು ಎಂಇಎಸ್ ಸಂಸ್ಥೆ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್ಕುಮಾರ್ ಹೇಳಿದರು. ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಬುಧವಾರ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಶಿವಮೊಗ್ಗ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮೂಢನಂಬಿಕೆಯಿಂದ ಜನರನ್ನು ಹೊರತರುವ ಸಾಧನವೇ ವಿಜ್ಞಾನ. ಪ್ರತಿಯೊಬ್ಬರೂ ವಿಜ್ಞಾನವನ್ನು ಸಮಾಜಕ್ಕೆ ಪೂರಕವಾಗಿ ಬಳಸಬೇಕೇ ಹೊರತು ಮಾರಕವಾಗಿ ಅಲ್ಲ. ಇದನ್ನರಿತು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ದೇಶ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದರು.

    ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್.ಮಹೇಶ್ ಮಾತನಾಡಿ, ಮಾನವ ವಿಜ್ಞಾನವನ್ನು ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಬೇಕು. ತರಂಗಗಳ ಮೂಲಕ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು ಬಳಕೆಯಾಗುತ್ತಿವೆ. ಅಷ್ಟೇ ಮನುಷ್ಯನಿಗೂ ನಷ್ಟವಾಗುತ್ತಿದೆ. ವಿಜ್ಞಾನವನ್ನು ಉಗ್ರವಾದಿ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ವಿಜ್ಞಾನದಿಂದಲೇ ಅವರನ್ನು ಬಂಧಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ದಾವಣಗೆರೆ ಡಿಆರ್​ಎಂ ವಿಜ್ಞಾನ ಕಾಲೇಜಿನ ಆರ್. ಪ್ರಜ್ವಲ್ ಮತ್ತು ಆರ್.ದೀಪಕ್ ಪ್ರಥಮ, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೃಷ್ಟಿ ಮತ್ತು ಗಾನವಿ ದ್ವಿತೀಯ, ಭದ್ರಾವತಿ ಸರ್ ಎಂ.ವಿ.ಸರ್ಕಾರಿ ಕಾಲೇಜಿನ ಎ.ಅಂಜಲಿ ಮತ್ತು ಎಂ.ಪ್ರಜ್ಞಾ ತೃತೀಯ, ಸಾಗರ ಇಂದಿರಾಗಾಂಧಿ ಮಹಿಳಾ ಸರ್ಕಾರಿ ಕಾಲೇಜಿನ ಅನುಷಾ ಮತ್ತು ಅರ್ಚನಾ, ದಾವಣಗೆರೆ ಡಿಆರ್​ಎಂ ವಿಜ್ಞಾನ ಕಾಲೇಜಿನ ಅನನ್ಯಾ ಮತ್ತು ಪ್ರತಿಭಾ ಸಮಾಧಾನಕರ ಬಹುಮಾನ ಪಡೆದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts