More

    ಮೂಡಿಗೆರೆಗೆ ರಾಜ್ಯಪಾಲರ ದಿಢೀರ್ ಭೇಟಿ

    ಮೂಡಿಗೆರೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಕುಕ್ಕೆಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮೂಡಿಗೆರೆಗೆ ಭೇಟಿ ನೀಡಿ ಕೆಲಹೊತ್ತು ವಿಶ್ರಾಂತಿ ಪಡೆದು ಮಧ್ಯಾಹ್ನ ಊಟದ ನಂತರ ಪ್ರಯಾಣ ಮುಂದುವರಿಸಿದರು.

    ಶಿರಾಡಿ ಘಾಟ್ ರಸ್ತೆಯಲ್ಲಿ ವಿಪರೀತ ಗುಂಡಿಗಳಿರುವುದರಿಂದ ಅಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ ಲಘು ವಾಹನಗಳು ಮೂಡಿಗೆರೆ ಮೂಲಕ ಚಾರ್ವಡಿ ಘಾಟ್​ನಲ್ಲಿ ಧರ್ಮಸ್ಥಳ, ಮಂಗಳೂರು ಭಾಗಕ್ಕೆ ಸಂಚರಿಸುತ್ತವೆ. ರಾಜ್ಯಪಾಲರು ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದರಿಂದ ಚಾರ್ವಡಿ ಘಾಟ್ ಮೂಲಕ ತೆರಳುತ್ತಿದ್ದಾಗ ಮೂಡಿಗೆರೆಗೆ ಭೇಟಿ ನೀಡಿದರು. ಅವರು ಭೇಟಿ ನೀಡುವ ವಿಚಾರ ತಾಲೂಕು ಆಡಳಿತಕ್ಕೆ ರವಾನೆಯಾಗುತ್ತಿದ್ದಂತೆ ಅಧಿಕಾರಿಗಳು ಅವಸರವಾಗಿ ರಾಜ್ಯಪಾಲರ ವಿಶ್ರಾಂತಿಗಾಗಿ ಕಟ್ಟಡ ಹುಡುಕಾಡಿದರು. ಪ್ರವಾಸಿ ಮಂದಿರ, ಮೂಡಿಗೆರೆ ಕ್ಲಬ್ ಕಟ್ಟಡಗಳೆಲ್ಲವೂ ಚಿಕ್ಕದಾಗಿವೆ. ಭದ್ರತೆಗೂ ಕಷ್ಟವಾಗಬಹುದೆಂದು ಹಳಸೆ ಗ್ರಾಮದ ಕಾಫಿ ಕೋರ್ಟ್ ಸೂಕ್ತ ಜಾಗವೆಂದು ಅಲ್ಲಿಗೆ ರಾಜ್ಯಪಾಲರನ್ನು ಕರೆದೊಯ್ಯಲಾಯಿತು. ರಾಜಭವನದಿಂದ ಬಂದಿದ್ದ ಬಾಣಸಿಗರು ಮಧ್ಯಾಹ್ನದ ಊಟ ತಯಾರಿಸಿದರು. ಊಟದ ನಂತರ ಮಧ್ಯಾಹ್ನ 2.30ಕ್ಕೆ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದತ್ತ ಪ್ರಯಾಣ ಮುಂದುವರಿಸಿದರು. ರಾಜ್ಯಪಾಲರೊಂದಿಗೆ ರಾಜಭವನದ 42 ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts