More

    ಮುರ್ನಾಲ್ಕು ದಿನದೊಳಗೆ ಮನೆ ಮನೆಗೆ ನೀರು

    ಗೋಕರ್ಣ: ಮೇ 31ರ ಒಳಗೆ ತೊರ್ಕೆ ಗ್ರಾಮ ಪಂಚಾಯತಿಯ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ವ್ಯವಸ್ಥೆಯಾಗಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ. ಸೂಚಿಸಿದರು.

    ತೊರ್ಕೆ ಗ್ರಾಪಂನಲ್ಲಿ ಮಂಗಳವಾರ ಕುಡಿಯುವ ನೀರಿನ ಪೂರೈಕೆ ಬಗ್ಗೆ ನಡೆಸಲಾದ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು.

    ಈ ಬಗ್ಗೆ ಯಾವುದೇ ಸಬೂಬು ಹೇಳದೆ ಪೈಪ್​ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹಣಕಾಸು ಸೇರಿದಂತೆ ಯಾವುದೇ ಸಹಾಯ ಸಹಕಾರವನ್ನು ಜಿಲ್ಲಾ ಪಂಚಾಯಿತಿ ಒದಗಿಸಲಿದೆ ಎಂದು ಅವರು ತಿಳಿಸಿದರು. ಅಧ್ಯಕ್ಷರ ಬಗ್ಗೆ ಮೆಚ್ಚುಗೆ: ಆಯ್ಕೆಯಾದ ಮೂರು ತಿಂಗಳೊಳಗೆ ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ ನೀರಿನ ಪೂರೈಕೆ ಬಗ್ಗೆ ವಿಶೇಷ ಶ್ರಮ ವಹಿಸಿ ಗ್ರಾಪಂನ ಗರಿಷ್ಠ ಭಾಗಕ್ಕೆ ಪೈಪ್​ಲೈನ್ ಹಾಕುವ ಕೆಲಸ ಪೂರೈಸಿದ್ದಾರೆ. ಈ ಯೋಜನೆಗೆ ಸಂಬಂಧಿಸಿದಂತೆ ತೊರ್ಕೆ ಗ್ರಾಪಂ ಪ್ರತಿ ಮನೆಯಿಂದ ತಾಲೂಕಿನಲ್ಲಿ ಅತಿ ಹೆಚ್ಚಿನ ವಂತಿಗೆ ಸಂಗ್ರಹಿಸಿ ದಾಖಲೆಗೆ ಕಾರಣವಾಗಿದೆ. ಇದರ ಜತೆಗೆ ಇದೇ ಮೊದಲ ಬಾರಿಗೆ ಜಲಸಂರಕ್ಷಣೆಗಾಗಿ ಹೊಸದಾದ ಕೆರೆ ನಿರ್ವಿುಸಿ ಉತ್ತಮ ಕಾರ್ಯ ಮಾಡಿದೆ ಎಂದು ಜಿಪಂ ಸಿಇಒ ಮೆಚ್ಚುಗೆ ವ್ಯಕ್ತಪಡಿಸಿದರು.

    ಆನಂದ ಕವರಿ ಮಾತನಾಡಿ, ತೊರ್ಕೆ ಗ್ರಾಪಂನ ಮಾದನಗೇರಿ, ಮೂಲೇಕೇರಿ, ಮಳಲಿ, ಗೊನೆಹಳ್ಳಿ, ಹಿತ್ತಲಮಕ್ಕಿ, ದೇವರಬಾವಿ, ಹೊಸ್ಕಟ್ಟ, ತೊರೆಗಜನಿ ಮುಂತಾದ ಗ್ರಾಪಂ ವ್ಯಾಪ್ತಿಯಲ್ಲಿರುವ ಎಲ್ಲ 754 ಮನೆಗಳಿಗೆ ನೀರು ಮುಟ್ಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಗೌಡ, ತಾಪಂ ಇಒ ಸಿ.ಟಿ.ನಾಯ್ಕ, ಇಂಜನಿಯರಿಂಗ್ ವಿಭಾಗದ ಆರ್.ಜಿ. ಗುನಗಿ, ನೋಡೆಲ್ ಅಧಿಕಾರಿ ರಶ್ಮಿ, ಗುತ್ತಿಗೆದಾರ ರಾಮು ಕೆಂಚನ್ ಮತ್ತು ಎಲ್ಲ ಸದಸ್ಯರು ಹಾಜರಿದ್ದರು. ಪಿಡಿಒ ಮುಮ್ತಾಜ್ ಕಾರ್ಯದರ್ಶಿ ವಿನಾಯಕ ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts