More

    ಮುನ್ನಡೆ ಸಾಧಿಸಿದ ಆರು ತಂಡಗಳು

    ನಾಪೋಕ್ಲು : ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ಆರು ತಂಡ ಮುನ್ನಡೆ ಸಾಧಿಸಿದವು.
    ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಕಾಂಡೆರ ತಂಡವು ಎರಡು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. ಇದಕ್ಕೆ ಉತ್ತರ ನೀಡಿದ ಕರಿನೆರವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಗೆಲುವು ಸಾಧಿಸಿತು. ಪಟ್ರಪಂಡ ವಿರುದ್ಧ ಅಲೆಮಾಡ ಭರ್ಜರಿ ಜಯ ಸಾಧಿಸಿತು. ಪಟ್ರಪಂಡ ಒಂದು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದರೆ, ಅಲೆಮಾಡ ಏಳು ವಿಕೆಟ್ ನಷ್ಟಕ್ಕೆ 38 ರನ್‌ಗಳಿಸಿ ಸೋಲು ಅನುಭವಿಸಿತು.
    ಮಂಡುವಂಡ ಚೆನ್ನಪಂಡ ವಿರುದ್ಧ ಗೆಲುವು ಸಾಧಿಸಿತು. ಮಂಡುವಂಡ ತಂಡ ಒಂದು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದರೆ, ಚನ್ನಪಂಡ ನಾಲ್ಕು ವಿಕೆಟ್ ನಷ್ಟಕ್ಕೆ 42 ಗಳಿಸಿ ಸೋಲು ಅನುಭವಿಸಿತು. ನಾಲ್ಕನೇ ಪಂದ್ಯದಲ್ಲಿ ಮುಕ್ಕಾಟಿರ (ಪುಲಿಕೋಟು) ವಿರುದ್ಧ ಪಾರುವಂಗಡ ಸೋಲು ಅನುಭವಿಸಿತು. ಪಾರುವಂಗಡ ಆರು ವಿಕೆಟ್ ನಷ್ಟಕ್ಕೆ 28 ರನ್ ಮಾಡಿತು. ಇದಕ್ಕೆ ಉತ್ತರ ನೀಡಿದ ಮುಕ್ಕಾಟಿರ (ಪುಲಿಕೋಟು) ತಂಡ ಆರು ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ ಗೆಲುವು ಸಾಧಿಸಿತು.
    ಮುಂದಿನ ಪಂದ್ಯದಲ್ಲಿ ಮುಂಡಚಾಡಿರ ಒಂದು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತು. ಉತ್ತರವಾಗಿ ಆಡಿದ ಕೋಚೆರ ತಂಡ ಎಂಟು ವಿಕೆಟ್ ನಷ್ಟಕ್ಕೆ 41 ರನ್‌ಗಳಿಸಿ ಸೋಲನ್ನು ಅನುಭವಿಸಿತು. ತೀತೀರ ತಂಡದ ವಿರುದ್ಧ ಓಡಿಯಂಡ ತಂಡ ಐದು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿ ಗೆಲುವು ಸಾಧಿಸಿತು. ತೀತಿರ ಐದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ ಪಂದ್ಯಾವಳಿಯಿಂದ ನಿರ್ಗಮಿಸಿತು. ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಪಂದ್ಯಗಳು ನಡೆಯುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts