More

    ಮುದ್ರಣ ಮಾಧ್ಯಮಗಳಿಗೆ ಸೋಷಿಯಲ್ ಮೀಡಿಯಾ ಕಂಟಕ

    ಸೇಡಂ: ಜನರಲ್ಲಿ ಸಾಮಾಜಿಕ ಜಾಲತಾಣದ ಹುಚ್ಚು ಹೆಚ್ಚಾಗಿದ್ದರಿಂದ ನೈಜ ಸುದ್ದಿಗಳನ್ನು ಹೊತ್ತು ಬರುವ ಮುದ್ರಣ ಮಾಧ್ಯಮಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಭಿಪ್ರಾಯಪಟ್ಟರು.

    ಸರ್ಕಾರಿ ನೌಕರರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ಪುರಸ್ಕೃತ ಪರ್ತಕರ್ತರ ವಿಶೇಷ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಸಮೂಹ ದಿನಕ್ಕೆ ೫ ಗಂಟೆಗೂ ಅಧಿಕ ಸಮಯ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದೆ. ಇದು ಆರೋಗ್ಯ ಮತ್ತು ಸಮಾಜಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.

    ಈ ಹಿಂದೆ ಪತ್ರಿಕೆ ಓದುವವರ ಸಂಖ್ಯೆ ಹೆಚ್ಚಿತ್ತು. ಆದರೀಗ ಎಲ್ಲವೂ ಕ್ಷಣ-ಕ್ಷಣಕ್ಕೆ ಸಿಗುವಂತಾಗಿದ್ದರಿಂದ ಓದುವವರೇ ಕಾಣುತ್ತಿಲ್ಲ. ಜನರಲ್ಲಿ ಪತ್ರಿಕೆ ಬಗೆಗಿನ ಆಸಕ್ತಿಯೂ ಕಮ್ಮಿಯಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕ್ರಮೇಣ ಪತ್ರಿಕೆಯನ್ನೇ ಮರೆಯುವ ಸಾಧ್ಯತೆ ಇದೆ. ಹೀಗಾಗಿ ಮುದ್ರಣ ಮಾಧ್ಯಮ ಒಂದಿಷ್ಟು ಅಪ್‌ಡೇಟ್ ಆಗಬೇಕು, ಆನ್‌ಲೈನ್‌ನತ್ತ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

    ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ಜಿಲ್ಲೆಯ ಪತ್ರಕರ್ತರು ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಕರೊನಾ ನಂತರ ಪತ್ರಿಕೋದ್ಯಮ ನಡೆಸುವುದು ಸವಾಲಿನ ಕೆಲಸವಾಗಿತ್ತು. ಕ್ಲಿಷ್ಟಕರ ಸಂದರ್ಭದಲ್ಲೂ ತಾಲೂಕು ಕೇಂದ್ರದಲ್ಲಿ ಕೆಲವರು ಪತ್ರಿಕೆ ನಡೆಸಿದ್ದು ಶ್ಲಾಘನೀಯ. ಪತ್ರಿಕೆ ವಿತರಣೆ ಸಹ ದೊಡ್ಡ ಜವಾಬ್ದಾರಿಯಾಗಿದೆ ಎಂದರು.

    ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ ಮಾತನಾಡಿದರು.

    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯ ಸ್ವಾಮಿ ಇಮಡಾಪುರ, ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಕಸಾಪ ತಾಲೂಕು ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್, ಪ್ರಮುಖರಾದ ಮಹಿಪಾಲರೆಡ್ಡಿ ಮುನ್ನೂರ, ಆರತಿ ಕಡಗಂಚಿ, ಶಿವಶರಣರೆಡ್ಡಿ ಪಾಟೀಲ್, ಬಸವರಾಜ ಪಾಟೀಲ್ ಊಡಗಿ, ನಾಗೇಶ್ವರರಾವ ಮಾಲಿಪಾಟೀಲ್, ಡಾ.ವಾಸುದೇವ ಅಗ್ನಿಹೋತ್ರಿ, ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ, ಹಾಶರೆಡ್ಡಿ ಮನ್ನೆ, ಮುರುಗೆಪ್ಪ ಕೊಳಕೂರ, ನಾಗೇಂದ್ರಪ್ಪ ಡೊಳ್ಳಾ, ಓಂಪ್ರಕಾಶ ಪಾಟೀಲ್, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಮಹ್ಮದ್ ಮುನೀಬ್, ಅವಿನಾಶ ಬೋರಂಚಿ, ಶರಣಯ್ಯ ಸ್ವಾಮಿ ಬೊಮ್ನಳ್ಳಿ, ರಮೇಶ ಇಂಜಳ್ಳಿಕರ್, ರಾಧಾಕೃಷ್ಣ, ಶರಣಪ್ಪ ಎಳ್ಳಿ, ಸುನೀಲ್ ರಾಣೆವಾಲ್, ಮಹ್ಮದ್ ಶಫಿ, ವಿಜಯ ಭಾಸ್ಕರರೆಡ್ಡಿ ಇತರರಿದ್ದರು.

    ಅನುಷಾ ಬೋರಂಚಿ ಪ್ರಾರ್ಥಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಆಡಕಿ ಸ್ವಾಗತಿಸಿದರು. ಉಪಾಧ್ಯಕ್ಷ ಜಗನ್ನಾಥ ತರನಳ್ಳಿ ನಿರೂಪಣೆ ಮಾಡಿದರು. ಕಾರ್ಯದರ್ಶಿ ಸುಧೀರ ಬಿರಾದಾರ ವಂದಿಸಿದರು.


    ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ನಿವೇಶನ ಸೇರಿ ವಿವಿಧ ಬೇಡಿಕೆ ಇಟ್ಟಿದ್ದು, ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪಯತ್ನ ಮಾಡುತ್ತೇನೆ. ಅಲ್ಲದೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು.
    | ಡಾ.ಶರಣಪ್ರಕಾಶ ಪಾಟೀಲ್
    ವೈದ್ಯಕೀಯ ಶಿಕ್ಷಣ ಸಚಿವ


    ಪ್ರಶಸ್ತಿ ಪುರಸ್ಕೃತರು, ವಿತರಕರಿಗೆ ಸತ್ಕಾರ
    ಮಾಧ್ಯಮ ಅಕಾಡೆಮಿ ಹಾಗೂ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ ಯಡ್ರಾಮಿ, ದೇವಿಂದ್ರಪ್ಪ ಅವಂಟಿ, ಹಣಮಂತರಾವ ಭೈರಾಮಡಗಿ, ಶರಣಯ್ಯ ಹಿರೇಮಠ, ನಜೀರ್‌ಮಿಯಾ ಹಟ್ಟಿ, ಮಂಜುನಾಥ ಜೂಟಿ, ಪ್ರವೀಣ್ ಪಾರಾ, ಪತ್ರಿಕೆ ವಿತರಕ ಗಣೇಶ ನೀಲಹಳ್ಳಿ ಹಾಗೂ ಪಿಯುಸಿ ಸಾಧಕ ಓಂಶಕ್ತಿ ಬೊಮ್ನಳ್ಳಿ ಅವರನ್ನು ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts