More

    ಮುಂದುವರಿದ ಕಾಡಾನೆ ದಾಂಧಲೆ

    ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಸಹ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಗ್ರಾಮಸ್ಥರು ಹಾಗೂ ಜನರು ಆತಂಕದಿಂದ ಭಯಭೀತರಾಗಿದ್ದಾರೆ.
    ತಾಲೂಕಿನ ಗಡಿಗ್ರಾಮ ಗಾಮನಹಳ್ಳಿಯಲ್ಲಿ ಬುಧವಾರ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಬುಧವಾರ ರಾತ್ರಿಯಿಂದೀಚೆಗೆ ಮುಡುಂಗದೊರೆ, ನೀಲನಕೊಪ್ಪಲು, ಟಿ.ಎಂ.ಹೊಸೂರು, ಹಂಗರಹಳ್ಳಿ ಗ್ರಾಮಗಳ ಹೊರವಲಯದ ಅರಣ್ಯ ಪ್ರದೇಶ ಸೇರಿದಂತೆ ಗ್ರಾಮಸ್ಥರ ಜಮೀನುಗಳಲ್ಲಿ ಸಂಚರಿಸಿವೆ. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಹಾಗೂ ಹುಣಸೂರು ವಲಯಗಳ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್‌ನ ಸಿಬ್ಬಂದಿ ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ. ಪ್ರಸ್ತುತ 3 ಮರಿಗಳೊಂದಿಗೆ ಒಟ್ಟು 11 ಕಾಡಾನೆಗಳ ಹಿಂಡು ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಬೀಡು ಬಿಟ್ಟಿವೆ.

    ಕಾಡಾನೆಗಳು ಇರುವ ಪ್ರದೇಶದಲ್ಲಿ ಜನರು ಗಾಬರಿ ಉಂಟು ಮಾಡಿ ಹತ್ತಿರ ಹೋಗದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಎಚ್ಚರ ವಹಿಸಿ ಜಾಗೃತಿ ಮೂಡಿಸಿದ್ದು, ಸಂಜೆ ವೇಳೆಗೆ ಮತ್ತೆ ಕಾರ್ಯಾಚರಣೆ ಕೈಗೊಂಡು ಟಿ.ನರಸೀಪುರ ಮಾರ್ಗವಾಗಿ ಕಾವೇರಿ ವನ್ಯಜೀವಿ ಧಾಮದ ಕಡೆಗೆ ಕಾಡಾನೆಗಳನ್ನು ಓಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts