More

    ಮುಂದುವರಿದ ಕರೊನಾ ನಾಗಾಲೋಟ

    ಗದಗ: ಜಿಲ್ಲೆಯಲ್ಲಿ ಹೆಮ್ಮಾರಿ ಕರೊನಾ ನಾಗಾಲೋಟ ಮುಂದುವರಿದಿದ್ದು, ಶನಿವಾರ 61 ಜನರಿಗೆ ಸೋಂಕು ದೃಢಪಟ್ಟಿದೆ. 10ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 943ಕ್ಕೇರಿದ್ದು, 595 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 328 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ.

    ಶನಿವಾರ ಗದಗ ತಾಲೂಕಿನಲ್ಲಿ 39, ಮುಂಡರಗಿ ತಾಲೂಕಿನಲ್ಲಿ 3, ಶಿರಹಟ್ಟಿ ತಾಲೂಕಿನಲ್ಲಿ 2, ರೋಣ ತಾಲೂಕಿನಲ್ಲಿ 5, ನರಗುಂದ ತಾಲೂಕಿನ 12 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 23 ಜನ ಮೃತಪಟ್ಟಿದ್ದಾರೆ.

    ಸೋಂಕು ವರದಿಯಾದ ಪ್ರದೇಶಗಳು:

    ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಎಎಸ್​ಎಚ್ ಕಾಲೇಜು ಹತ್ತಿರದ ವೆಲ್ಪೇರ್ ಟೌನ್​ಶಿಪ್, ಟಾಂಗಾ ಕೂಟ, ಬೆಟಗೇರಿ, ಚೇತನಾ ಕಾಂಪ್ಲೆಕ್ಸ್, ಎನ್.ಬಿ. ಪಾಟೀಲ ಆಸ್ಪತ್ರೆ, ಕೆ.ಸಿ. ರಾಣಿ ರಸ್ತೆ, ಅಗ್ನಿಶಾಮಕ ಕ್ವಾರ್ಟರ್ಸ್, ಪಂಚಾಕ್ಷರಿ ನಗರ, ಬ್ಯಾಂಕರ್ಸ್ ಕಾಲನಿ, ಜವಳ ಗಲ್ಲಿ, ಟ್ಯಾಗೋರ್ ರಸ್ತೆ, ಜೈನ ಸ್ಕೂಲ್ ಹತ್ತಿರದ ಕಾಮತ ಲೇಔಟ್, ಸಂಭಾಪೂರ ಪೊಲೀಸ್ ಕ್ವಾರ್ಟರ್ಸ್, ಜಿಲ್ಲಾ ಕ್ರೀಡಾಂಗಣದ ಎದುರಿಗೆ, ವೀರೇಶ್ವರ ನಗರ.

    ಗದಗ ತಾಲೂಕಿನ ಹರ್ತಿ, ಕಳಸಾಪುರ, ನಾಗಾವಿ ತಾಂಡಾ, ಕಣವಿಯಲ್ಲಿ ಪ್ರಕರಣ ಪತ್ತೆಯಾಗಿವೆ.

    ನರಗುಂದ ಪಟ್ಟಣದ ನರಗುಂದ, ಸಿದ್ಧರಾಮೇಶ್ವರ ನಗರ, ಎನ್​ಎಚ್​ಟಿ ಮಿಲ್, ಗಾಡಿ ಓಣಿ, ಹೊರಕೇರಿ ಓಣಿ, ದಂಡಾಪೂರ ಕಾಲನಿ ಹಾಗೂ ತಾಲೂಕಿನ ಕೊಣ್ಣೂರಲ್ಲಿ, ಮುಂಡರಗಿ ಪಟ್ಟಣದ ಅಂಚೆ ಕಚೇರಿ ಹತ್ತಿರ , ಅಂಬಾಭವಾನಿ ದೇವಸ್ಥಾನದ ಹತ್ತಿರ, ರೋಣ ತಾಲೂಕಿನ ಜಕ್ಕಲಿ, ಬೆಳವಣಕಿ, ತಾಲೂಕಿನ ಕಲಕೇರಿಯಲ್ಲಿ ವೈರಾಣು ಪತ್ತೆಯಾಗಿದೆ.

    ರೋಣ ಪಟ್ಟಣದ ಶ್ರೀನಗರ, ಶಿವಪೇಟೆ 4ನೇ ಕ್ರಾಸ್, ತಾಲೂಕಿನ ಹಿರೇಹಾಳ , ಶಿರಹಟ್ಟಿ ತಾಲೂಕಿನ ಶಿಗ್ಲಿ ನಿವಾಸಿಗೆ ಕೋವಿಡ್ ನಂಜು ದೃಢಪಟ್ಟಿದೆ.

    ಸಾವಿನ ವಿವರ

    ಕೊಪ್ಪಳ ಜಿಲ್ಲೆ ಸಿಡಗನಹಳ್ಳಿ ಗ್ರಾಮದ 10 ವರ್ಷದ ಬಾಲಕ ಅನಾರೋಗ್ಯದಿಂದ ಜುಲೈ 20ರಂದು ಮೃತಪಟ್ಟಿದ್ದಾನೆ

    ಜುಲೈ 19ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ಜುಲೈ 20ರಂದು ಬಂದಿದ್ದು, ಸೋಂಕು ದೃಢಪಟ್ಟಿದೆ. ಮಿದುಳು ಜ್ವರ ಹಾಗೂ ಶ್ವಾಸಕೋಶದ ತೊಂದರೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಬೆಟಗೇರಿ ನಿವಾಸಿ 70 ವರ್ಷದ ವೃದ್ಧ ಜುಲೈ 21ರಂದು ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಜುಲೈ 20 ರಂದು ಜಿಮ್ಸ್ಗೆ ದಾಖಲಾಗಿದ್ದರು. ಜುಲೈ 21ರಂದು ಪಾಸಿಟಿವ್ ಎಂದು ವರದಿ ಬಂದಿದೆ. ರಕ್ತ ಹೀನತೆ, ಹೃದಯ ಸಂಬಂಧಿ ಕಾಯಿಲೆ ಹಾಗೂ ಕಿಡ್ನಿ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.

    ಇಬ್ಬರೂ ಕೋವಿಡ್-19 ಅಲ್ಲದ ಅನ್ಯ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ.

    ರೋಣ ತಾಲೂಕು ಹಿರೇಹಾಳ ನಿವಾಸಿ 60 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಕರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜುಲೈ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಸೋಂಕು ಇರುವುದು ದೃಢಪಟ್ಟಿತ್ತು. ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

    ತಾಲೂಕುವಾರು ಸೋಂಕಿತರ ವಿವರ

    ಗದಗ 542

    ಮುಂಡರಗಿ 80

    ನರಗುಂದ 76

    ರೋಣ 103

    ಶಿರಹಟ್ಟಿ 106

    ತನಿಖೆಗೆ ಡಿಸಿ ಆದೇಶ

    ಗದಗ: ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ 64 ವರ್ಷದ ವೃದ್ಧೆಯ ಸಾವಿನ ಕುರಿತು ವರದಿ ಬರುವ ಮುನ್ನವೇ ಕುಟುಂಬದ ಸದಸ್ಯರಿಗೆ ಶವ ಹಸ್ತಾಂತರಿಸುವ ವಿಷಯವನ್ನು ಜಿಲ್ಲಾಡಳಿತ ತನಿಖೆಗೆ ಒಳಪಡಿಸಿದೆ. ಯಳವತ್ತಿ ಗ್ರಾಮದಲ್ಲಿ ಇಡೀ ಕುಟುಂಬ, ಗ್ರಾಮಸ್ಥರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 5 ದಿನಗಳ ಬಳಿಕ ವೃದ್ಧೆಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದರಿಂದ ಗೊಂದಲ ಉಂಟಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಸುಂದರೇಶಬಾಬು ಅವರು ಪ್ರಕರಣ ಕುರಿತು ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts