More

    ಮುಂದುವರಿದ ಕರೊನಾ ನಾಗಾಲೋಟ

    ಗದಗ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ 60 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 473ಕ್ಕೇರಿದೆ.

    ಗದಗ ಟಿಪ್ಪು ಸುಲ್ತಾನ್​ವೃತ್ತದ ಹತ್ತಿರದ ನಿವಾಸಿ 27 ವರ್ಷದ ಮಹಿಳೆ, ಜಿಮ್್ಸ ವಸತಿ ನಿಲಯ ನಿವಾಸಿ 26 ವರ್ಷದ ಮಹಿಳೆ ಮತ್ತು 40ವರ್ಷದ ಪುರುಷನಿಗೆ, ಹೊಂಬಳ ರಸ್ತೆಯ ಅಂಬೇಡ್ಕರ್​ನಗರ ನಿವಾಸಿ 39 ವರ್ಷದ ಪುರುಷನಿಗೆ, ರೈಲ್ವೆ ವಸತಿ ಗೃಹದ ನಿವಾಸಿ 34 ಮತ್ತು 25 ವರ್ಷದ ಪುರುಷ, ಕೆ.ಸಿ.ರಾಣಿ ರಸ್ತೆಯ ಬಿಜಾಪುರ ಬಿಲ್ಡಿಂಗ್​ನ ನಿವಾಸಿ 50 ವರ್ಷದ ಪುರುಷ, ಎಸ್.ಎಂ.ಕೃಷ್ಣ ನಗರದ ನಿವಾಸಿ 43 ವರ್ಷದ ಪುರುಷ, ಕಿಲ್ಲಾ ಓಣಿಯ ತ್ರಿಕೂಟೇಶ್ವರ ದೇವಸ್ಥಾನ ಹತ್ತಿರ ನಿವಾಸಿ 28ವರ್ಷದ ಪುರುಷ, ದಾಸರ ಓಣಿ ನಿವಾಸಿಗಳಾದ 36 ವರ್ಷದ ಮಹಿಳೆ, 40 ವರ್ಷದ ಪುರುಷನಿಗೆ, ಲಕ್ಷ್ಮಣಸಾ ನಗರದ ನಿವಾಸಿ 33 ಪುರುಷ, 16 ಪುರುಷನಿಗೆ ಸೋಂಕು ದೃಢಪಟ್ಟಿದೆ.

    ವಿವೇಕಾನಂದ ನಗರ ನಿವಾಸಿ 21 ವರ್ಷದ ಪುರುಷನಿಗೆ ಪಿ-44162ರ ಸಂಪರ್ಕದಿಂದಾಗಿ, 18 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ನಗರದ ಹುಡ್ಕೋ ಕಾಲನಿ ಎರಡನೇ ತಿರುವು ನಿವಾಸಿ 62 ವರ್ಷದ ಪುರುಷನಿಗೆ, ಲಕ್ಷ್ಮೇಶ್ವರದ ಉಪನಾಳ ಪ್ಲಾಟ್ ನಿವಾಸಿ 58 ವರ್ಷದ ಪುರುಷನಿಗೆ, ನಗರದ ಹುಡ್ಕೋ ಕಾಲನಿ ಮೊದಲ ತಿರುವಿನ ನಿವಾಸಿ 58 ಪುರುಷನಿಗೆ (ಪಿ-35078) ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ. ಬೆಟಗೇರಿ ಪೊಲೀಸ್ ವಸತಿ ಗೃಹದ ನಿವಾಸಿ 38 ವರ್ಷದ ಪುರುಷ, ಸಂಬಾಪುರ ಪೊಲೀಸ್ ವಸತಿಗೃಹ ನಿವಾಸಿ 34 ವರ್ಷದ ಪುರುಷ, ತೇಜಾ ನಗರ ನಿವಾಸಿ 42 ವರ್ಷದ ಪುರುಷನಿಗೆ ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಬೇವಿನಕಟ್ಟಿ ನಿವಾಸಿ 24 ವರ್ಷದ ಪುರುಷ, ತೇಜಾ ನಗರದ ನಿವಾಸಿ 46 ವರ್ಷದ ಪುರುಷನಿಗೆ, ಲಕ್ಷ್ಮೇಶ್ವರದ ಜೈಭವಾನಿ ದಾಬಾ ಹತ್ತಿರ ನಿವಾಸಿ 45 ವರ್ಷದ ಮಹಿಳೆಗೆ, ಕುರ್ತಕೋಟಿ ಲಕ್ಷ್ಮೀ ದೇವಸ್ಥಾನದ ಹತ್ತಿರ ನಿವಾಸಿ 28 ವರ್ಷದ ಮಹಿಳೆಗೆ, ಶಿಗ್ಲಿಯ ಜೆ.ಎಸ್.ಎಸ್. ಶಾಲೆಯ ಹತ್ತಿರದ ನಿವಾಸಿ 35 ವರ್ಷದ ಪುರುಷ, ನಗರದ ವೆಲ್ ಫೆರಟೌನ್ ನಿವಾಸಿ 68 ವರ್ಷದ ಮಹಿಳೆಗೆ, ಶಿಗ್ಲಿ ವಿದ್ಯಾನಗರ ನಿವಾಸಿ 26 ಹಾಗೂ 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಬೆಟಗೇರಿಯ ಪೊಲೀಸ್ ವಸತಿ ನಿಲಯದ ನಿವಾಸಿ 45 ವರ್ಷದ ಪುರುಷ, ನಗರದ ವಿವೇಕಾನಂದ ನಗರದ 2ನೇ ತಿರುವಿನ ನಿವಾಸಿ 30 ವರ್ಷದ ಪುರುಷ, ಲಕ್ಷ್ಮೇಶ್ವರದ ಮಲ್ಲಾಡದ ಆಸ್ಪತ್ರೆ ಹತ್ತಿರದ ನಿವಾಸಿ 59 ವರ್ಷದ ಪುರುಷ, ಶಿಗ್ಲಿ ವಿದ್ಯಾನಗರದ ನಿವಾಸಿ 6 ವರ್ಷದ ಬಾಲಕ, ಬೆಟಗೇರಿಯ ವೇಲ್​ಫೆರ್ ಟೌನಶೀಪ್ ನಿವಾಸಿ 40 ವರ್ಷದ ಪುರುಷ, ರಾಜೀವ ಗಾಂಧಿನಗರದ ಹಮಾಲರ ಪ್ಲಾಟ್ ನಿವಾಸಿ 37 ವರ್ಷದ ಮಹಿಳೆಗೆ, ಗಜೇಂದ್ರಗಡದ ಲಿಂಗರಾಜ ನಗರದ ನಿವಾಸಿ 63 ವರ್ಷದ ಮಹಿಳೆಗೆ, ನಗರದ ಆಜಾದ ಗಲ್ಲಿ ವೆಂಕಟೇಶ್ವರ ಟಾಕೀಸ್ ಹತ್ತಿರ ನಿವಾಸಿ 30 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ.

    ಶಿಗ್ಲಿ ವಿದ್ಯಾನಗರದ ನಿವಾಸಿಗಳಾದ 66 ವರ್ಷದ ಪುರುಷ ಹಾಗೂ 2 ವರ್ಷದ ಬಾಲಕಿಗೆ, ನಗರದ ಜಿಮ್್ಸ ವಸತಿನಿಲಯದ ನಿವಾಸಿ 23 ವರ್ಷದ ಮಹಿಳೆಗೆ, ಲಕ್ಷ್ಮೇಶ್ವರ ಅಂಬಾಭವಾನಿ ದೇವಸ್ಥಾನ ಹತ್ತಿರದ ನಿವಾಸಿ 26 ವರ್ಷದ ಪುರುಷನಿಗೆ, ಬಾಗಲಕೋಟ ಜಿಲ್ಲೆಯ ಮುಧೋಳ ನಿವಾಸಿ 22 ವರ್ಷದ ಪುರುಷ, ನಗರದ ಲಾಯನ್ಸ್ ಶಾಲೆಯ ಎದುರಿನ ನಿವಾಸಿ 56 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ. ನಗರದ ಮಹೇಂದ್ರಕರ ವೃತ್ತದ ನಿವಾಸಿ 87 ವರ್ಷದ ಪುರುಷನಿಗೆ, ಶಿರಹಟ್ಟಿಯ ಬಜಾರ ರಸ್ತೆ ನಿವಾಸಿ 65 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ.

    ಕಣಗಿನಹಾಳ ನಿವಾಸಿ 42 ವರ್ಷದ ಪುರುಷ, ಸಿದ್ಧಲಿಂಗ ನಗರದ ನಿವಾಸಿ 85 ವರ್ಷದ ಮಹಿಳೆಗೆ, ಮುಳಗುಂದ ವಿದ್ಯಾನಗರ ನಿವಾಸಿ 30 ವರ್ಷದ ಪುರುಷನಿಗೆ, ಯಾವಗಲ್​ನ ಭರಮಲಿಂಗಪ್ಪ ದೇವಸ್ಥಾನ ಹತ್ತಿರದ ನಿವಾಸಿ 13 ವರ್ಷದ ಬಾಲಕಿಗೆ, ನಗರದ ಇಂಜಿನಿಯರಿಂಗ್ ಕಾಲೇಜು ಹತ್ತಿರದ ನಿವಾಸಿ 53 ವರ್ಷದ ಮಹಿಳೆ ಹಾಗೂ ಡೋಣಿ ಗ್ರಾಮ ನಿವಾಸಿ 65 ವರ್ಷದ ಮಹಿಳೆಗೆ, ಮುಂಡರಗಿಯ ನಿವಾಸಿ 28 ವರ್ಷದ ಪುರುಷ, ಮಲ್ಲಸಮುದ್ರ ಆದಿತ್ಯ ನಗರ ನಿವಾಸಿ 57 ವರ್ಷದ ಪುರುಷ, ಕೋತಬಾಳದ ಅಡವಿಸಿದ್ಧೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ 40 ವರ್ಷದ ಮಹಿಳೆ ಹಾಗೂ 56 ವರ್ಷದ ಪುರುಷನಿಗೆ, ನಾಗಾವಿ ತಾಂಡಾದ ನಿವಾಸಿ 25 ವರ್ಷದ ಪುರುಷ, ಸೀತಾಲಹರಿ ಗ್ರಾಮ ನಿವಾಸಿ 47 ಮತ್ತು 41 ವರ್ಷದ ಪುರುಷನಿಗೆ, ಈಶ್ವರ ನಗರ ನಿವಾಸಿ 85 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

    ಕರೊನಾ ಅಂಶಗಳು

    60: ಇಂದಿನ ಸೋಂಕಿತರು

    14068: ನಿಗಾದಲ್ಲಿ ಇರುವವರು:

    14699: ಮಂದಿಯ ಗಂಟಲ್ ದ್ರವ ಸಂಗ್ರಹ

    480: ಏಳು ದಿನ ಕ್ವಾರಂಟೈನ್ ನಲ್ಲಿರುವವರು:

    253: ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರುವವರು:

    473: ಪಾಸಿಟಿವ್ ಪ್ರಕರಣಗಳು

    210: ಗುಣವಾಗಿ ಬಿಡುಗಡೆಯಾದವರು:

    253: ಸಕ್ರಿಯ ಪ್ರಕರಣಗಳು

    606: ಬಾಕಿ ಇರುವ ವರದಿಗಳು:

    13626: ನೆಗೆಟಿವ್ ಮಾದರಿಗಳು

    9 : ಮೃತರು

    ಸಾಮಾನ್ಯ ವಲಯಗಳಾದ 9 ಪ್ರದೇಶಗಳು

    ಗದಗ: ಜಿಲ್ಲೆಯ 9 ಪ್ರದೇಶಗಳನ್ನು ಕೋವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ ಪ್ರದೇಶಗಳೆಂದು ಘೊಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಜಿಲ್ಲಾಕಾರಿ ಸುಂದರೇಶಬಾಬು ಆದೇಶ ಹೊರಡಿಸಿದ್ದಾರೆ.

    ಗದಗ ಬೆಟಗೇರಿಯ ವೀರನಾರಾಯಣ ಬಡಾವಣೆ, ಅಂಬೇಡ್ಕರ್ ನಗರ, ದಾಸರ ಓಣಿ, 12 ಮತ್ತು 8 ಮನೆಗಳ ಪ್ರದೇಶ, ಗದಗ ತಾಲೂಕು ಹೊಂಬಳದ ರಡ್ಡೇರ ಕಾಲನಿ, ಅಸುಂಡಿಯ ಆಶ್ರಯ ಬಡಾವಣೆ, ಮಲ್ಲಸಮುದ್ರದ ಬೆಂಚಿ ಓಣಿ, ರೋಣ ಪಟ್ಟಣದ ಬಾಬು ಜಗಜೀವನರಾಂನಗರ, ಗಜೇಂದ್ರಗಡದ ಸಾಯಿಬಾಬಾ ನಗರ ಪ್ರದೇಶಗಳನ್ನು ಸಾಮಾನ್ಯ ವಲಯ ಎಂದು ಘೊಷಿಸಲಾಗಿದೆ.

    ದಿನಸಿ ಖರೀದಿಗೆ ಮುಗಿಬಿದ್ದ ಜನ

    ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಮಾರ್ಕೆಟ್ ಸೀಲ್​ಡೌನ್ ಆಗಿದ್ದು, ಶುಕ್ರವಾರ ಸಂತೆ ದಿನ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಪರದಾಡಿದರು. ಪಟ್ಟಣದ ಪ್ರಮುಖ ವ್ಯಾಪಾರಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ 2 ದಿನಗಳ ಹಿಂದೆಯೇ ಮಾರುಕಟ್ಟೆ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಜತೆಗೆ ಕರೊನಾ ಭೀತಿಯಿಂದ ಈ ಪ್ರದೇಶದ ಅಕ್ಕಪಕ್ಕದ ಕಿರಾಣಿ ಅಂಗಡಿಗಳೂ ಮುಚ್ಚಿವೆ. ಈ ಬಗ್ಗೆ ಮಾಹಿತಿ ಇರದ ಗ್ರಾಮೀಣ ಪ್ರದೇಶಗಳ ಜನ ಎಂದಿನಂತೆ ಶುಕ್ರವಾರ ಸಂತೆಗೆ ಆಗಮಿಸಿದ್ದರು. ದರ್ಗಾ ರಸ್ತೆಯಲ್ಲಿನ ತರಕಾರಿ ಮತ್ತು ಬೀದಿ ಬದಿ ವ್ಯಾಪಾರಸ್ಥರಿಂದ ಸಿಕ್ಕ ಕೆಲವೇ ವಸ್ತುಗಳನ್ನು ಖರೀದಿಸಿದರು. ಅಲ್ಲಲ್ಲಿ ಬಾಗಿಲು ತೆಗೆದಿದ್ದ ಸಣ್ಣಪುಟ್ಟ ದಿನಸಿ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ಇದನ್ನೇ ಕೆಲ ವ್ಯಾಪಾರಸ್ಥರು ಬಂಡವಾಳ ಮಾಡಿಕೊಂಡು ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts