More

    ಮುಂದುವರಿದ ಅಹೋರಾತ್ರಿ ಧರಣಿ

    ಮುಂಡರಗಿ: ತಾಲೂಕಿನ ಕಪ್ಪತಗುಡ್ಡದ ಪವನ ವಿದ್ಯುತ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ವಿುಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಭದ್ರತಾ ಸಿಬ್ಬಂದಿ ಕುಟುಂಬ ಸಮೇತ ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಎರಡು ದಿನ ಪೂರೈಸಿತು.

    ಆತ್ಮಹತ್ಯೆ ಎಚ್ಚರಿಕೆ: ಕಾರ್ವಿುಕ ಕುಟುಂಬದ ಮಹಿಳೆ ಖಾಜಾಬಿ ಖತೀಬ್ ಮಾತನಾಡಿ, ಎರಡು ವರ್ಷದಿಂದ ಕಾರ್ವಿುಕರ ಕೆಲಸ ಕಸಿಯಲು ಪ್ರಯತ್ನಿಸುತ್ತಿರುವ ಸುಜಲಾನ್ ಕಂಪನಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆದರೆ, ಸುಜಲಾನ್ ಕಂಪನಿ ಕಾರ್ವಿುಕರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಎರಡು ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ಕಪ್ಪತಗುಡ್ಡದಲ್ಲಿರುವ ಸುಜಲಾನ್ ಕಂಪನಿ ಪವನ ವಿದ್ಯುತ್ ಯಂತ್ರಗಳ ಕೆಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

    130 ಕುಟುಂಬದವರು ಸುಜಲಾನ್ ಕಂಪನಿ ನೀಡುವ ಅಲ್ಪ ವೇತನ ಅವಲಂಬಿಸಿದ್ದಾರೆ. 13 ವರ್ಷಗಳಿಂದ ದುಡಿಸಿಕೊಂಡು ಈಗ ಏಕಾಏಕಿ ಹೊರಹಾಕಲು ಪಯತ್ನಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಎರಡು ದಿನಗಳಲ್ಲಿ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಕಾರ್ವಿುಕರ ಹೋರಾಟದ ಶಕ್ತಿ ಏನು ಎನ್ನುವುದನ್ನು ನಾವು ತೋರಿಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಈಗಾಗಲೇ ನಾವು ಅಹೋರಾತ್ರಿ ಧರಣಿ ಆರಂಭಿಸಿದ್ದು, ಸುಜಲಾನ್ ಕಂಪನಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಹೋರಾಟದ ತೀವ್ರತೆಯನ್ನು ಅವರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ, ರೈತ ಮುಖಂಡ ವಿ.ಎಸ್. ಗಟ್ಟಿ, ಪುರಸಭೆ ಸದಸ್ಯರಾದ ಪವನ ಮೇಟಿ, ನಾಗರಾಜ ಹೊಂಬಳಗಟ್ಟಿ, ಪ್ರಲ್ಹಾದ ಹೊಸಮನಿ, ಎಂ.ಯು. ಮಕಾಂದಾರ ಕಾರ್ವಿುಕರ ಧರಣಿಗೆ ಬೆಂಬಲ ಸೂಚಿಸಿದರು.

    ನೂರಹಮ್ಮದ್ ಮಕಾಂದಾರ, ಚಿನ್ನಪ್ಪಗೌಡ್ರ ಹಾರೋಗೇರಿ, ರಾಮಣ್ಣ ಸೊರಟೂರ, ಪ್ರಕಾಶ ದಂಡಿನ, ಮಲ್ಲಪ್ಪ ಗುಡಿಗೇರಿ, ಆರ್.ಬಿ. ಮಡಿವಾಳರ, ಎಂ.ಎಂ. ಮುಲ್ಲಾ, ಭರಮಪ್ಪ ಕಿಲಾರಿ, ಪಿ.ಜಿ. ಜವಿ, ಲಕ್ಷ್ಮವ್ವ ಬಳಿಗೇರ, ಈರಯ್ಯ ಲಕ್ಷೆ್ಮೕಶ್ವರಮಠ, ಆರ್.ಡಿ. ಕಡ್ಡಿ, ಶಂಕರ ದೇವರಮನಿ, ಎಸ್.ಎಂ. ಮುದ್ಲಾಪೂರ, ಲಕ್ಷ್ಮವ್ವ ಬಳಿಗೇರ, ಲಕ್ಷ್ಮವ್ವ ಬೇವಿನಕಟ್ಟಿ, ರೇಣವ್ವ ಜಾಲವಾಡಗಿ, ನೀಲವ್ವ ಲಮಾಣಿ, ಮಾಲವ್ವ ಮುದ್ಲಾಪುರ, ಇತರರು ಪಾಲ್ಗೊಂಡಿದ್ದರು.

    ಧರಣಿ ಸ್ಥಳಕ್ಕೆ ಪ್ರಭಾರ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ರ್ಚಚಿಸಿದರು. ನಿಮ್ಮ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುವುದು. ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೊಪ್ಪದ ಪ್ರತಿಭಟನಾಕಾರರು, ‘ಜಿಲ್ಲಾಧಿಕಾರಿಗಳು, ಸುಜಲಾನ್ ಕಂಪನಿ ಮಾಲೀಕರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಕೆ ಮುಂದಾಗಬೇಕು. ಇಲ್ಲವಾದರೆ ಸತ್ಯಾಗ್ರಹ ಮುಂದುವರಿದು ಬೇರೆ ರೂಪ ಪಡೆಯುತ್ತದೆ’ ಎಂದು ಧರಣಿ ಮುಂದುವರೆಸಿದರು.

    ತಹಸೀಲ್ದಾರ್ ಕಾಲಿಗೊರಗಿದ ಕಾರ್ವಿುಕ

    ಪ್ರತಿಭಟನಾಕಾರರನ್ನು ಮನವೊಲಿಸುತ್ತಿದ್ದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಕಾಲಿಗೆ ಬಿದ್ದ ಕಾರ್ವಿುಕನೋರ್ವ, ‘ನಮ್ಮ ಬದುಕು ಬೀದಿಗೆ ಬಂದಿದೆ. ನಮ್ಮನ್ನು ಕೆಲಸಕ್ಕೆ ತಗೆದುಕೊಳ್ಳಬೇಕು. ನಮ್ಮ ಎಲ್ಲ ಬೇಡಿಕೆ ಈಡೇರಿಸಿಕೊಡಬೇಕು’ ಎಂದು ಅಂಗಲಾಚಿದ ಘಟನೆ ನೆರೆದಿದ್ದವರ ಮನಕಲಕುವಂತೆ ಮಾಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts