More

    ಮುಂದಿನ ಬಜೆಟ್​ನಲ್ಲಿ ನಿಗಮ ಘೋಷಣೆ

    ಮುಗಳಖೋಡ: ಮುಂದಿನ ಬಜೆಟ್​ನಲ್ಲಿ ಮಾಳಿ, ಮಾಲಗಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
    ಇಲ್ಲಿನ ಬಸಲಿಂಗಪ್ಪ ನೀಲಪ್ಪ ಕುಲಿಗೋಡ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದ್ವೀತಿಯ ಮಾಳಿ, ಮಾಲಗಾರ ಸಮಾವೇಶದಲ್ಲಿ ಅವರು ಮಾತನಾಡಿದರು.
    ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಮಾಳಿ, ಮಾಲಗಾರದಂತಹ ಸಣ್ಣ ವೃತ್ತಿಪರ ಸಮುದಾಯಗಳ ಅಭಿವೃದ್ಧಿಗೆ ಆಯ&ವ್ಯಯದಲ್ಲಿ ಒಟ್ಟು 400 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

    ಸಣ್ಣ ಸಮುದಾಯಗಳು ಎಲೆಮರೆಯ ಕಾಯಿಯಂತೆ ರಾಜ್ಯದ ಆರ್ಥಿಕತೆಗೆ ತಮ್ಮದೆ ಕೊಡುಗೆ ನೀಡುತ್ತಿವೆ. ಮಾಳಿ, ಮಾಲಗಾರ ಸಮುದಾಯ ಸೇರಿ ದಿನನಿತ್ಯದ ಅವಶ್ಯಕತೆಯ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವಂತಹ ಸಮುದಾಯಗಳಿಗೆ ಮುಂದಿನ ಆಯ&ವ್ಯಯದಲ್ಲಿ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುವುದು. ಮಾಳಿ, ಮಾಲಗಾರ ನೇತೃತ್ವದ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    21ನೇ ಶತಮಾನ ಾನದ ಶತಮಾನ. ಮಾಳಿ, ಮಾಲಗಾರ ಸಮುದಾಯದ ಮಕ್ಕಳು ಉತ್ತಮ ಶಿಣ ಪಡೆಯುವುದು ಬಹಳ ಮುಖ್ಯ. ನಿಗಮದ ಮೂಲಕ ಸಮುದಾಯದ ಮಕ್ಕಳಿಗೆ ಉತ್ತಮ ಶಿಣ, ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುವುದು. ಸಮುದಾಯದ ಮಕ್ಕಳ ಭವಿಷ್ಯ ಉಜ್ವಲಗೊಳಿಸುವುದು ಸರ್ಕಾರದ ಆದ್ಯತೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಶಸ ನೀಡಿದ್ದ ಸಾವಿತ್ರಿಬಾಯಿ ಫುಲೆ ಇದೇ ಸಮುದಾಯದವರು. ದೇಶದ ಪ್ರಥಮ ಮಹಿಳಾ ಶಿಕಿಯಾಗಿ ಸೇವೆ ಸಲ್ಲಿಸಿರುವ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಉತ್ತಮ ಶಿಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
    ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುಗಳಖೋಡ&ಜಿಡಗಾ ಮಠದ ಪೀಠಾಧಿಪತಿ ಡಾ. ಮುರುರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಳಿ, ಮಾಲಗಾರ ಸಮುದಾಯ ನಿಯೋಗದ ಅಧ್ಯ ಡಾ. ಸಿ.ಬಿ.ಕುಲಿಗೋಡ ಸಮಾವೇಶದ ಅಧ್ಯತೆ ವಹಿಸಿದ್ದರು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಪಿ.ರಾಜೀವ ಹಾಗೂ ಸಿದ್ದು ಸವದಿ ಮಾತನಾಡಿದರು.

    ನಾಗರಾಳ ಪರಮಾನಂದ ಆಶ್ರಮದ ಾನೇಶ್ವರ ಮಹಾರಾಜರು, ಪ್ರಭು ಮಹಾರಾಜರು, ಅನಂತಾನಂದ ಶರಣರು, ಬೆಳಗಲಿಯ ಸದಾಶಿವ ಗುರೂಜಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹೇಶ ಅಥಣಿ, ಸುಭಾಷ ಗುತ್ತೇದಾರ, ಶ್ರೀಮಂತ ಪಾಟೀಲ, ಮಹಾದೇವಪ್ಪ ಯಾದವಾಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಅಪ್ಪಾಸಾಹೇಬ ಕುಲಗೋಡೆ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯ ನರೇಂದ್ರಬಾಬು, ವಿಜಯಪುರ ಬಿಜೆಪಿ ಜಿಲ್ಲಾಧ್ಯ ಉಮೇಶ ಕಾರಜೋಳ, ಮಾಳಿ, ಮಾಲಗರ ಸಮುದಾಯದ ರಾಜ್ಯಾಧ್ಯ ಕಾಡು ಮಾಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts