More

    ಮುಂಡಗೋಡಲ್ಲೂ ಲಂಪಿಸ್ಕಿನ್ ರೋಗ

    ವಿಜಯವಾಣಿ ಸುದ್ದಿಜಾಲ ಮುಂಡಗೋಡ: ದೇಶದಲ್ಲಿಯೇ ಮೊದಲ ಬಾರಿ ಕಾಣಿಸಿಕೊಂಡ ‘ಲಂಪಿಸ್ಕಿನ್’ ಎಂಬ ಸಾಂಕ್ರಾಮಿಕ ರೋಗ ತಾಲೂಕಿನ ಜಾನುವಾರುಗಳಲ್ಲೂ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

    ಪಟ್ಟಣ, ಚಿಗಳ್ಳಿ, ಸಾಲಗಾಂವ, ಕಾತೂರ ಭಾಗಗಳ ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಇಂದೂರ ಭಾಗದಲ್ಲಿ ಜಾನುವಾರುಗಳಿಗೆ ಹೆಚ್ಚಾಗಿ ವ್ಯಾಪಿಸಿದೆ. ವೈರಸ್​ನಿಂದ ಬರುವ ಈ ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಸೊಳ್ಳೆ ಮತ್ತು ನೊಣಗಳು ಕಚ್ಚುವುದರಿಂದ ಹರಡುತ್ತದೆ. ಈ ರೋಗದ ಲಕ್ಷಣಗಳೆಂದರೆ ಕಾಲು ಬಾವು ಬರುವುದು ಮತ್ತು ಮೈ ತುಂಬಾ ಗಂಟುಗಳು ಕಾಣಿಸಿಕೊಳ್ಳುವುದು. ಬಾವು ಬಂದಾಗ ಜಾನುವಾರುಗಳಿಗೆ ಸಂಚರಿಸಲು ತೊಂದರೆ ಇರುವುದಿಲ್ಲ. ಮಲಗಲು ಕಷ್ಟವಾಗುತ್ತದೆ. ಬಾವು ಬಂದ ಮೇಲೆ ಗುಳ್ಳೆಗಳು ಬರಬಹುದು ಅಥವಾ ಗುಳ್ಳೆಗಳು ಬಂದ ಮೇಲೆ ಬಾವು ಬರಬಹುದು. ಮಳೆಗೆ ಬೇಗ ಸೋಂಕು ಹರಡಿದರೆ ಬಿಸಿಲಿಗೆ ಬಹುಬೇಗ ಕಡಿಮೆಯಾಗುತ್ತದೆ.

    ರೋಗ ತಡೆಗೆ ಕ್ರಮ: ರೋಗ ತಡೆಗಟ್ಟಲು ದನಗಳ ಕೊಟ್ಟಿಗೆಯನ್ನು ಸ್ವಚ್ಛವಾಗಿಡಬೇಕು. ರೋಗ ಕಾಣಿಸಿಕೊಂಡ ದನಗಳನ್ನು ಬೇರೆ ಕಡೆ ಕಟ್ಟಬೇಕು. ಬೇವಿನ ಎಣ್ಣೆ ಮತ್ತು ಉಣ್ಣೆ ಎಣ್ಣೆಯನ್ನು ಹಚ್ಚಬೇಕು. ಗಂಟುಗಳು ಒಡೆದಾಗ ಹುಳುಗಳು ಬೀಳುವ ಸಾಧ್ಯತೆ ಇದೆ. ಅದಕ್ಕೆ ಮುಲಾಮು ಹಚ್ಚಬೇಕು. ರೋಗ ನಿವಾರಣೆಯಾಗಲು 20ರಿಂದ 25 ದಿನಗಳು ಬೇಕು. ಆದರೆ, ಜಾನುವಾರುಗಳ ಜೀವಕ್ಕೇನೂ ಅಪಾಯವಿಲ್ಲ. ಒಮ್ಮೆ ರೋಗ ಬಂದ ಜಾನುವಾರಿಗೆ ಮತ್ತೊಮ್ಮೆ ಈ ರೋಗ ಬರುವುದಿಲ್ಲ ಎಂದು ಪಶು ವೈದ್ಯ ಜಯಚಂದ್ರ ಕೆಂಪಾಶಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts