More

    ಮುಂಜಾನೆಯೇ ಕಾದು ಪ್ರತಿಭಟನೆ ನಡೆಸಿದರೂ ಸಿಗಲಿಲ್ಲ ವ್ಯಾಕ್ಸಿನ್


    ಚಿಕ್ಕಮಗಳೂರು: ಮುಂಜಾನೆಯೇ ಕರೊನಾ ಲಸಿಕಾ ಕೇಂದ್ರದ ಎದುರು ಕಾದು ನಿಂತರೂ ಟೋಕನ್ ನೀಡದಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿ ಸಿಬ್ಬಂದಿ ಮೇಲೆ ಹರಿಹಾಯ್ದರು.
    ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸೋಮವಾರ 300ಕ್ಕೂ ಹೆಚ್ಚು ಜನ ಮುಂಜಾನೆಯಿಂದ ಕಾದು ನಿಂತಿದ್ದರು. ಬೆಳಗ್ಗೆ 9 ಗಂಟೆಗೆ ಅಧಿಕಾರಿಗಳು ಆಗಮಿಸಿ ಕೇವಲ 200 ಟೋಕನ್ ಮಾತ್ರ ನೀಡಿದ್ದಕ್ಕೆ ಅಧಿಕಾರಿಗಳು ಹಾಗೂ ಏಜೆನ್ಸಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಸಿಬ್ಬಂದಿ ಹಾಗೂ ಏಜೆನ್ಸಿಯ ವ್ಯಕ್ತಿ ಜತೆ ಮಾತಿನ ಚಕಮಕಿ ನಡೆದು ದಿಢೀರ್ ಪ್ರತಿಭಟನೆ ನಡೆಸಿದರಾದರೂ ಲಸಿಕೆ ಮಾತ್ರ ಸಿಗದೆ ಮನೆಗೆ ಹಿಂದಿರುಗಿದರು. ನಂತರ ಎಂದಿನಂತೆ ಟೋಕನ್ ಹೊಂದಿದ 300 ಮಂದಿಗೆ ಲಸಿಕೆ ನೀಡಲಾಯಿತು.
    ನಗರ ಹೊರವಲಯದ ಐಡಿಎಸ್​ಐ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಬೆಳಗ್ಗೆ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಲಸಿಕೆ ನೀಡಲಾಯಿತು. ಕಾಲೇಜಿನಲ್ಲಿ 200 ಸಿಬ್ಬಂದಿ, 3600 ವಿದ್ಯಾರ್ಥಿಗಳು ಸೇರಿ 3800 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 11 ಸಾವಿರ ವಿದ್ಯಾರ್ಥಿಗಳಿದ್ದು, ಪ್ರತಿದಿನ ಒಂದು ಸಾವಿರ ವಿದ್ಯಾರ್ಥಿಗಳಂತೆ ಹಂತ ಹಂತವಾಗಿ ಲಸಿಕೆ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts