More

    ಮೀಸಲಾತಿ ವರ್ಗೀಕರಣದಿಂದ ಸಮುದಾಯಗಳ ಶೋಷಣೆ

    ಸೊರಬ: ಒಳಮೀಸಲಾತಿ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಬುಧವಾರ ಪಟ್ಟಣದಲ್ಲಿ ತಾಲೂಕು ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯದವರು ಪ್ರತಿಭಟನೆ ನಡೆಸಿದರು.
    ಶ್ರೀರಂಗನಾಥ ದೇವಸ್ಥಾನದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಮುಖ್ಯಮಂತ್ರಿಗಳ ಪ್ರತಿಕೃತಿ ದಹನಕ್ಕೆ ಮುಂದಾದರು. ಮಧ್ಯ ಪ್ರವೇಶಿಸಿದ ಸಿಪಿಐ ಭಾಗ್ಯಲಕ್ಷ್ಮಿ ಪ್ರತಿಭಟನಾಕಾರರ ಮನವೊಲಿಸಿ, ಶಾಂತ ರೀತಿಯಲ್ಲಿ ಪ್ರತಿಭಟಿಸಲು ತಿಳಿಸಿದರು. ನಂತರ ತಾಲೂಕು ಕಚೇರಿ ಎದುರು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭೋವಿ ಸಮಾಜದ ತಾಲೂಕು ಅಧ್ಯಕ್ಷ ಎಚ್.ಜಯಪ್ಪ ಮಾತನಾಡಿ, ಭೋವಿ, ಬಂಜಾರ, ಕೊರಚ, ಕೊರಮ ಸೇರಿ ಒಟ್ಟು ಪರಿಶಿಷ್ಟ ಜಾತಿ, ಪಂಗಡದಲ್ಲಿ ಒಟ್ಟು 109 ಜಾತಿಗಳು ಸಹೋದರರಂತೆ ಮೀಸಲಾತಿ ಹಂಚಿಕೊಂಡು ಸಹಜೀವನ ನಡೆಸುತ್ತಿವೆ. ಪ್ರಬಲ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಸರ್ಕಾರ ತಳ ಸಮುದಾಯಗಳ ಪಾಲಿನ ಮೀಸಲಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣದ ಹೆಸರಿನಲ್ಲಿ ಈ ಸಮುದಾಯಗಳನ್ನು ಶೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಾಪಂ ಮಾಜಿ ಉಪಾಧ್ಯಕ್ಷ ಹಾಗೂ ಭೋವಿ ಸಮಾಜದ ಕಾರ್ಯಾಧ್ಯಕ್ಷ ಸುರೇಶ್ ಹಾವಣ್ಣನವರ್, ಭೋವಿ ಸಮಾಜದ ಕಾರ್ಯಾಧ್ಯಕ್ಷ ಸುರೇಶ್ ಹಾವಣ್ಣನವರ್ ಮಾತನಾಡಿದರು. ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಯಂಕ್ಯಾನಾಯ್ಕ್, ಕೊರಮ ಸಮಾಜದ ಅಧ್ಯಕ್ಷ ರವಿಕುಮಾರ ತಿಮ್ಮಾಪುರ, ಉಪಾಧ್ಯಾಕ್ಷ ಎಸ್.ಎಲ್ ಚನ್ನಯ್ಯ, ಶ್ರೀನಿವಾಸ ಎಣ್ಣೆಕೊಪ್ಪ, ಎನ್.ಜಿ ಶಿವಕುಮಾರ್ ಹಿರೇಚೌಟಿ, ಅಭಿಷೇಕ್ ತತ್ತೂರು, ಸುರೇಶ್ ಬಿಳವಾಣಿ, ಮಾಜಿ ತಾಪಂ ಅಧ್ಯಕ್ಷ ಜೈಶೀಲಪ್ಪ, ಬಂಜಾರ ಸಮಾಜದ ಮುಖಂಡ ಜೆ.ವಿಷ್ಣು, ಗೋರ್‍ಸೇನಾ ಅಧ್ಯಕ್ಷ ದಿವಾಕರ ನಾಯ್ಕ್, ಓಂಕಾರ ನಾಯ್ಕ್, ಧರ್ಮ ನಾಯ್ಕ್ , ಸುರೇಶ್ ಉದ್ರಿ, ಮನಸ್ವಿನಿ ಗುರುವಪ್ಪ ಬಿಳುವಾಣಿ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.
     ಹೈ ಅಲರ್ಟ್:  ಶಿಕಾರಿಪುರದಲ್ಲಿ ಒಳಮೀಸಲಾತಿ ವಿರೋ„ಸಿ ಬಂಜಾರ ಸಮುದಾಯ ಆರಂಭಿಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ನಡುವೆ ಪ್ರತಿಭಟನೆ ನಡೆಯಿತು. ಎಸ್‍ಪಿ ಜಿ.ಕೆ. ಮಿಥುನ್ ಕುಮಾರ್ ಪ್ರತಿಭಟನಾ ಸ್ಥಳದಲ್ಲಿದ್ದು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಭದ್ರತೆಗಾಗಿ ಮೂವರು ಸಿಪಿಐ, ನಾಲ್ವರು ಪಿಎಸ್‍ಐ, 80 ಪೆÇಲೀಸ್ ಕಾನ್ಸ್‍ಟೇಬಲ್ ಸೇರಿ ಮೂರು ಕೆಎಸ್‍ಆರ್‍ಪಿ, ಒಂದು ಡಿಆರ್ ತುಕುಡಿಯನ್ನು ನಿಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts