More

    ಮೀಸಲಾತಿಗೆ ಹೋರಾಟ ಅನಿವಾರ್ಯ

    ಹಿಡಕಲ್ ಡ್ಯಾಂ, ಬೆಳಗಾವಿ: ರಾಜ್ಯದಲ್ಲಿರುವ ಲಿಂಗಾಯತರಲ್ಲಿ ಶೇ. 80 ರಷ್ಟು ಪಂಚಮಸಾಲಿ ಸಮಾಜದವರಿದ್ದರೂ, ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಹೋರಾಟ ಮಾಡುವುದು ಅನಿವಾರ್ಯ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ತಿಳಿಸಿದರು.
    ಸಮೀಪದ ಯಲ್ಲಾಪುರ(ಕೆ) ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಂಚಮಸಾಲಿ ಹೋರಾಟದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಂಚಮಸಾಲಿ ಸಮಾಜದವರು ಒಗ್ಗಟ್ಟಾಗಿ, ನಮ್ಮ ಹಕ್ಕು ಪಡೆಯಲು ಹೋರಾಡಬೇಕಿದೆ. ಸಮಾಜಕ್ಕೆ ನ್ಯಾಯ ಸಿಗಲು ಸಂಘಟಿತರಾಗಿ ಸರ್ಕಾರದ ಎದುರು ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.ಮಾಜಿ ಸಚಿವ ಶಶಿಕಾಂತ ನಾಯಿಕ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ರಾಜೇಶ ನೇರ್ಲಿ ಹಾಗೂ ಕೂಡಲಸಂಗಮ ಪಂಚಮಶಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯಲು ಪ್ರತಿಯೊಂದು ಗ್ರಾಮಗಳಿಗೆ ಹೋಗಿ ಜನಜಾಗೃತಿ ಮೂಡಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದಂತೆ ನಡೆಯುತ್ತಿಲ್ಲ ದೂರಿದರು.
    ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಯುವ ಧುರೀಣ ರವೀಂದ್ರ ಜಿಂಡ್ರಾಳಿ, ವೀರಣ್ಣ ಬಿಸಿರೊಟ್ಟಿ, ಆರ್.ಕೆ.ಪಾಟೀಲ, ಗುಂಡು ಪಾಟೀಲ, ಶಿವಪ್ಪ ಸವದಿ, ಬಸಗೌಡ ಪಾಟೀಲ, ಹುಕ್ಕೇರಿ ತಾಪಂ ಮಾಜಿ ಅಧ್ಯಕ್ಷ ಅಡಿವೆಪ್ಪ ಜಿಂಡ್ರಾಳಿ, ಧರ್ಮಗೌಡ ಪಾಟೀಲ, ಭೀಮಗೌಡ ಹೊಸಮನಿ, ಪ್ರಕಾಶ ಪಾಟೀಲ ಇತರರಿದ್ದರು.

    ಹಿಡಕಲ್ ಡ್ಯಾಂ ಸಮೀಪದ ಯಲ್ಲಾಪುರ (ಕೆ) ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಹೋರಾಟದ ಜನಜಾಗೃತಿ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎ.ಬಿ.ಪಾಟೀಲ, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಾ. ರಾಜೇಶ ನೇರ್ಲಿ, ಶಶಿಕಾಂತ ನಾಯಿಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts