More

    ಮೀಸಲಾತಿಗೆ ಆಗ್ರಹಿಸಿ ಪತ್ರ ಚಳವಳಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಪಂಚಮಸಾಲಿ ಸಮಾಜಕ್ಕೆ ‘2 ಎ’ ಮೀಸಲಾತಿ ಕೊಡಲು ಆಗ್ರಹಿಸಿ ರಾಷ್ಟ್ರೀಯ ಪಂಚಲಕ್ಷ ಪತ್ರ ಚಳವಳಿ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ರೈಲ್ವೆ ಸ್ಟೇಷನ್ ಹತ್ತಿರದ ಪ್ರಧಾನ ಅಂಚೆ ಕಚೇರಿಯಲ್ಲಿ ಸದ್ಯ 25 ಸಾವಿರ ಪತ್ರಗಳನ್ನು ಬುಧವಾರ ಖರೀದಿಸಲಾಗಿದೆ.

    ಶೈಕ್ಷಣಿಕ, ಉದ್ಯೋಗ, ಆರ್ಥಿಕ ಸದೃಢತೆಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಆದರೂ ಸರ್ಕಾರ ಕಿವಿಗೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ 5 ಲಕ್ಷ ಪತ್ರ ಸಿಎಂಗೆ ಬರೆದು ಒತ್ತಾಯಿಸಲಾಗುತ್ತಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಪತ್ರ ಬರೆಯಲಾಗಿದೆ. ಹೀಗೆ 5 ಹಂತಗಳಲ್ಲಿ ಬೇಡಿಕೆ ಈಡೇರಿಸಲು ಆಗ್ರಹಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡ ಹೇಳಿದರು.

    ಪತ್ರದಲ್ಲಿ 2ಎ ಮೀಸಲಾತಿಗೆ ಆಗ್ರಹ ಎಂದು ಬರೆಯುವ ಮೂಲಕ ಚಳವಳಿಗೆ ಚಾಲನೆ ನೀಡಲಾಯಿತು.

    ಪದಾಧಿಕಾರಿಗಳಾದ ರಾಜಣ್ಣ ಕೊಟಗಿ, ವಿರೂಪಾಕ್ಷ ಕಳ್ಳಿಮನಿ, ಈಶ್ವರ ಶಿರಸಂಗಿ, ಶಂಕರ ಯಂಕನ್ನವರ, ಚಂಬಣ್ಣ ಹಾಳದೋಟರ, ಸಿದ್ದರಾಮೇಶ್ವರ ಕೂಡಲ, ಆನಂದ ಕೊಟಗಿ, ಮೈಲಾರಿ ಹಡಪದ, ಉಳವಪ್ಪ ಮಡ್ಡೆನ್ನವರ, ವೀರಭದ್ರ ಆಲದಕಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts