More

    ಮಿಡತೆ ಹಾವಳಿಗೆ ಆತಂಕ ಬೇಡ

    ಬ್ಯಾಡಗಿ: ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ಗೋವಿನ ಜೋಳದ ಹೊಲದಲ್ಲಿ ಮಿಡತೆಗಳ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಬಸವರಾಜ ಮರಗಣ್ಣನವರ ಶುಕ್ರವಾರ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.

    ಗ್ರಾಮದ ಕ್ವಾಟಿಗುಡ್ಡದ ಬಳಿ ರೈತ ಚನ್ನಬಸಪ್ಪ ಬ್ಯಾಡಗಿ ಎಂಬುವರಿಗೆ ಸೇರಿದ 3 ಎಕರೆ ಹೊಲದಲ್ಲಿ ಎರಡು ದಿನಗಳಿಂದ ಮಿಡತೆಗಳ ಹಿಂಡು ದಾಳಿಯಿಟ್ಟಿದ್ದು, ಸಾಕಷ್ಟು ಗೋವಿನ ಜೋಳ ತಿಂದು ಹಾಳು ಮಾಡಿವೆ. ಹೀಗಾಗಿ, ಸಾಕಷ್ಟು ಆತಂಕದಲ್ಲಿ ಮುಳುಗಿದ್ದರು. ಇಡೀ ಹೊಲದಲ್ಲಿ ಎಲ್ಲಿ ನೋಡಿದರೂ ಹಿಂಡು ಹಿಂಡಾಗಿ ಮಿಡತೆಗಳು ಕಾಣುತ್ತಿದ್ದವು. ಹೀಗಾಗಿ ರೈತನಿಗೆ ಸೂಕ್ತ ನಿರ್ದೇಶನ ನೀಡಲು ಕೃಷಿ ಇಲಾಖೆ ತಂಡ ತೆರಳಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಸಲಹೆ ನೀಡಿತು. ಕೃಷಿ ಸಹಾಯಕ ಅಧಿಕಾರಿ ಎಂ. ಮಂಜುನಾಥ, ರೈತ ನಿಂಗಪ್ಪ ಅಗಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts