More

    ಮಿಂಚಿದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ

    ಬೆಳಗಾವಿ: ಇತ್ತೀಚೆಗೆ ಗೋವಾದಲ್ಲಿ ಆಯೋಜಿಸಿದ್ದ 26ನೇ ಭಾರತೀಯ ಸಾರ್ವಜನಿಕ ದಂತ ಆರೋಗ್ಯ ರಾಷ್ಟ್ರೀಯ ಸಮಾವೇಶದಲ್ಲಿ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಸ್ನಾತಕೋತ್ತರ ಪದವೀಧರರು ವಿವಿಧ ವಿಭಾಗಗಳಲ್ಲಿ ಅನೇಕ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಮೆಗಾ ಇವೆಂಟ್‌ನಲ್ಲಿ ಭಾರತದಾದ್ಯಂತ ಅನೇಕ ದಂತ ವೈದ್ಯಕೀಯ ವಿದ್ಯಾಲಯಗಳಿಂದ ಸುಮಾರು 500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

    ಡಾ.ಮೆಹುಲ್ ಎ.ಷಾ ಅವರು ಸ್ನಾತಕೋತ್ತರ ಸಂಶೋಧನ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ ಎಐಪಿಎಚ್‌ಡಿ ಹಣಕಾಸು ನೆರವು-2022 ಪಡೆಯುವುದರ ಜತೆಗೆ ಅತ್ಯುತ್ತಮ ವೈಜ್ಞಾನಿಕ ಪ್ರಶಸ್ತಿ ಪಡೆದಿದ್ದಾರೆ. ಡಾ. ಅನುಸಾರ ವರ್ಗಿಸ್ ಅವರು ಅತ್ಯುತ್ತಮ ಸಾಮಾನ್ಯ ಪೋಸ್ಟರ್ ಪ್ರಶಸ್ತಿ ಪಡೆದಿದ್ದಾರೆ. ಇಂದಿನ ಕಲಿಯುವವರು ನಾಳಿನ ನಾಯಕರು ವಿಭಾಗದ ಅಡಿಯಲ್ಲಿ ಡಾ. ಅತ್ರೇ ಜೆ.ಪೈ. ಖೋತ, ಡಾ. ರಾಮ್ ಸೊರತ್ ಕುಮಾರ್, ಡಾ.ಮೆಹುಲ್.ಎ.ಷಾ, ಡಾ. ವರ್ಕಿ ಎನ್.ಎಸ್, ಡಾ. ಪ್ರಜಕ್ತಾ ಚವ್ಹಾಣ್, ಡಾ. ಅನುಸಾರ ವರ್ಗಿಸ್ ಅವರು ತಮ್ಮ ವಿನೂತನ ಆಲೋಚನೆಗಳಿಗಾಗಿ ಪುರಸ್ಕೃತರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ದಂತವೈದ್ಯರ ಪ್ರತಿಭೆ ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ಮಾಡಿದ ಡಾ. ಅತ್ರೆ ಜೆ.ಪೈ. ಖೋತ ಅವರು ಮೆಮ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಛಾಯಾಗ್ರಹಣ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ ಪಡೆದರು.
    ಡಾ.ಪ್ರಜಕ್ತಾ ಜೆ. ಚವ್ಹಾಣ್ ಮೆಮ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ತಂಬಾಕು ವಿರೋಧಿ ಲೇಬಲ್ ಸ್ಪರ್ಧೆಯಲ್ಲಿ ಡಾ. ಅನುಸಾರ ವರ್ಗೀಸ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಸ್ನಾತಕೋತ್ತರ ಪದವೀಧರರಿಗೆ ಡಾ.ಅಲ್ಕಾ ಕಾಳೆ, ಅನಿಲ ಅಂಕೋಲಾ, ಡಾ.ರೂಪಾಲಿ ಸಂಕೇಶ್ವರಿ, ಡಾ. ಸಾಗರ ಜಾಲಿಹಾಳ ಮಾರ್ಗದರ್ಶನ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts