More

    ಮಾ.7ರಿಂದ ಇಂದ್ರಧನುಷ್ ಲಸಿಕಾ ಅಭಿಯಾನ

    ಕಲಬುರಗಿ: ಪೋಲಿಯೋ ಸೇರಿ ವಿವಿಧ ರೋಗಗಳ ತಡೆಗೆ ನೀಡಲಾಗುವ ಲಸಿಕೆಗಳಿಂದ ವಂಚಿತರಾದ 0-2 ವರ್ಷದ ಮಕ್ಕಳು ಮತ್ತು ಗರ್ಭಿಣಿಯರಿಗೆ ಮಾ.7ರಿಂದ ಮೂರು ಹಂತದಲ್ಲಿ 11 ಬಗೆಯ ಆ್ಯಂಟಿಜನ್ ಲಸಿಕೆ ನೀಡಲು ಇಂದ್ರಧನುಷ್ 4.0 ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾ.7, ಏ.4 ಹಾಗೂ ಮೇ 9 ರಂದು ಅಭಿಯಾನ ನಡೆಯಲಿದೆ. ಪೋಲಿಯೋ, ಹೆಪಟೈಟಿಸ್-ಬಿ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಟಾ ವೈರಸ್, ಅತಿಸಾರ, ಇರುಳು ಕುರುಡು, ದಡಾರ, ರುಬೆಲ್ಲ, ಗಂಟಲುಮಾರಿ ಮತ್ತು ಮಿದುಳು ಜ್ವರ ತಡೆಗೆ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.

    ವಿಶ್ವ ಆರೋಗ್ಯ ಸಂಸ್ಥೆಯ ಕನ್ಸಲ್ಟೆಂಟರ್ ಡಾ.ಅನೀಲಕುಮಾರ ತಾಳಿಕೋಟಿ ಮಾತನಾಡಿ, ಕೇಂದ್ರ ಸರ್ಕಾರ ಸರ್ವೇ 2019-20ರ ಪ್ರಕಾರ ರಾಜ್ಯದ ಕಲಬುರಗಿ ಸೇರಿ 11 ಜಿಲ್ಲೆಗಳನ್ನು ಮಿಷನ್ ಇಂದ್ರಧನುಷ್ 4.0 ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ಈವರೆಗಿನ ದೇಶದಲ್ಲಿ ಶೇ.90, ರಾಜ್ಯದಲ್ಲಿ ಶೇ.84.01 ಹಾಗೂ ಕಲಬುರಗಿಯಲ್ಲಿ ಶೇ.74 ಲಸಿಕಾಕರಣ ಆಗಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿದರು. ಅಭಿಯಾನದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್‌ಸಿಎಚ್ ಅಕಾರಿ ಡಾ.ಪ್ರಭುಲಿಂಗ ಮಾನಕರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಯು. ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts