More

    ಮಾ.4ಕ್ಕೆ ಅಹೋರಾತ್ರಿ ಶರಾವತಿ ಹಿನ್ನೀರ ಹಬ್ಬ; ಹೊಸನಗರದ ಪಟಗುಪ್ಪ ಸೇತುವೆ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ

    ಹೊಸನಗರ: ತಾಲೂಕಿನ ಪಟಗುಪ್ಪ ಸೇತುವೆ ಬಳಿ ಮಾ.4ರಂದು ವಿನೂತನವಾದ ‘ಶರಾವತಿ ಹಿನ್ನೀರ ಹಬ್ಬ’ ಆಚರಿಸಲಾಗುವುದು ಎಂದು ಸಮಿತಿ ಮುಖಂಡ ಸುರೇಶ ಸ್ವಾಮಿರಾವ್ ತಿಳಿಸಿದರು.
    ಅಂದು ಸಂಜೆ 4 ಗಂಟೆಗೆ ಹಿನ್ನೀರ ಹಬ್ಬ ಶುರುವಾಗಲಿದೆ. ಮೊದಲು ಜೀವನದಿ ಶರಾವತಿಗೆ ಆರತಿ ಬೆಳಗಲಾಗುವುದು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅಹೋರಾತ್ರಿ ನಡೆಯುವ ಹಿನ್ನೀರ ಹಬ್ಬದಲ್ಲಿ ಹೊಸನಗರ ಮತ್ತು ಸಾಗರ ತಾಲೂಕಿನ ವಿವಿಧ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ. ವಿಶೇಷ ಆಕರ್ಷಣೆಯಾಗಿ ಬಳೆ ಕೋಲಾಟ ಸ್ಪರ್ಧೆ ಆಯೋಜಿಸಲಾಗಿದೆ. ಬಾಳೆಕೊಪ್ಪ, ಗುಳ್ಳಹಳ್ಳಿ, ಸಂಪಳ್ಳಿ, ಕಾರೆಹೊಂಡ ತಂಡಗಳಿಂದ ಬಳೆ ಕೋಲಾಟ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹಬ್ಬದಲ್ಲಿ ಮಲೆನಾಡ ಭಾಗದ ವಿಶೇಷ ಖಾದ್ಯಗಳನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ತಿಂಡಿ-ತಿನಿಸುಗಳ ಮಾರಾಟವೂ ಇರಲಿದೆ. ಶಾಸಕ ಹರತಾಳು ಹಾಲಪ್ಪ ಅಧ್ಯಕ್ಷತೆಯಲ್ಲಿ ಹಬ್ಬದ ಯಶಸ್ಸಿಗೆ ವಿವಿಧ ಸಮಿತಿ ರಚಿಸಲಾಗಿದೆ ಎಂದರು.
    ಹೊಳೆಹಬ್ಬ ಮಾದರಿಯಲ್ಲಿ ಆಚರಣೆ: ಈ ಭಾಗದ ಜನರ ಒತ್ತಾಸೆಯ ಪಟಗುಪ್ಪ ಸೇತುವೆ ನಿರ್ಮಾಣದಲ್ಲಿ ಶಾಸಕ ಹರತಾಳು ಹಾಲಪ್ಪ ಪಾತ್ರ ಹಿರಿದಾಗಿದೆ. ಸೇತುವೆ ಶಾಸಕರ ಕನಸಿನ ಕೂಸಾಗಿತ್ತು. ಮುಳುಗಡೆ ಸಂತ್ರಸ್ತರೆಲ್ಲರೂ ಒಗ್ಗೂಡಿ ಹಬ್ಬ ಆಚರಿಸಬೇಕು ಎಂಬುದು ಶಾಸಕರ ಕಲ್ಪನೆ. ಈ ಹಿಂದೆ ಆ ಪ್ರದೇಶದಲ್ಲಿ ಹೊಳೆಹಬ್ಬ ಆಚರಿಸಲಾಗುತ್ತಿತ್ತು. ಆ ಮಾದರಿಯಲ್ಲೇ ಹಿನ್ನೀರ ಹಬ್ಬ ಆಯೋಜನೆ ನಡೆಯಲಿದೆ. ಬೇರೆ ಕಡೆಗಳಲ್ಲಿರುವ ಇಲ್ಲಿನ ಮುಳುಗಡೆ ಸಂತ್ರಸ್ತರು ಬಂದು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಲಿದ್ದಾರೆ ಎಂದು ಸುರೇಶ ಸ್ವಾಮಿರಾವ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts