More

    ಜನಮನ ಗೆದ್ದ ಸಾಂಸ್ಕೃತಿಕ ಕಾರ್ಯಕ್ರಮ

    ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಜನಪರ ಉತ್ಸವದಲ್ಲಿ ವಿವಿಧ ಕಲಾವಿದರು ದೇಶೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಹಲವಾರು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಜನಮನ ಗೆದ್ದರು.

    ಶ್ರೀರಾಮೇಶ್ವರ ದೇವಾಲಯ ಸನ್ನಿಧಿಯ ಕಾವೇರಿ ನದಿ ತಟದಲ್ಲಿ ಸ್ಥಾಪಿಸಿದ್ದ ವಿಶೇಷ ಸಭಾ ಮಂಟಪದಲ್ಲಿ ವಿವಿಧ ಕಲಾವಿದರು ಜನಪದ ಶೈಲಿಯಲ್ಲಿ ಆಕರ್ಷಕ ವೇಷಭೂಷಣಗಳನ್ನು ತೊಟ್ಟು ಲಂಬಾಣಿ, ಜೋಗತಿ ನೃತ್ಯ, ತೊಗಲು ಗೊಂಬೆ, ಸುಗಮ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಸೋಬಾನೆ ಪದ, ತತ್ವಪದ, ಗೀಗಿ ಪದ, ನಾಟಕ, ವೀರಗಾಸೆ, ಮಹಿಳಾ ನಗಾರಿ, ಡೊಳ್ಳು ಕುಣಿತ, ಪೂಜಾ ಕುಣಿತ, ಚಿಟ್ಟಿಮೇಳ, ಗಾರುಡಿ ಗೊಂಬೆ, ಗೊರವನ ಕುಣಿತ ಪ್ರದರ್ಶಿಸಿ ಜನಮನ ಸೂರೆಗೊಂಡರು.

    ಇದಕ್ಕೂ ಮುನ್ನ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಶಾಸಕ ಎ.ಮಂಜು, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ಅಶೋಕ್, ಪಶುಪಾಲನಾ ಇಲಾಖೆ ನಿರ್ದೇಶಕ ಡಾ.ಎ.ಡಿ.ಶಿವರಾಮ್, ಬೆಂಗಳೂರಿನ ಗ್ಯಾಸ್ಟ್ರೋ ತಜ್ಞ ಡಾ.ಅಂಜನಪ್ಪ, ಗ್ರಾಪಂ ಅಧ್ಯಕ್ಷೆ ಪವನ ಕುಮಾರಿ, ಉಪಾಧ್ಯಕ್ಷ ಮಾದೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts