More

    ಮಾಹಿತಿ ಸಲ್ಲಿಸಲು ಹೂವು ಬೆಳೆಗಾರರಿಗೆ ಸೂಚನೆ

    ಹಾನಗಲ್ಲ: ಹೂವು ಬೆಳೆದ ರೈತರು ಪಹಣಿ ಪತ್ರಿಕೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ಹೂ ಬೆಳೆದ ಕುರಿತ ದೃಢೀಕರಣ ಪತ್ರವನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕು. ನಂತರ ರೈತರ ಖಾತೆಗಳಿಗೆ ನೇರವಾಗಿ ಸಹಾಯಧನ ಜಮೆ ಆಗಲಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 232 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಆಸ್ಟರ್, ಚೆಂಡುಹೂವು, ಕನಕಾಂಬರ, ಸುಗಂಧರಾಜ ಸೇರಿ ಜಿಲ್ಲೆಯಲ್ಲಿ 1,038 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಯಲಾಗುತ್ತಿದೆ ಎಂದರು.

    ಲಾಕ್​ಡೌನ್​ನಿಂದಾಗಿ ಹೂವು ಬೆಳೆಗಾರರಿಗೆ ತೀವ್ರ ಸಮಸ್ಯೆಯಾಗಿದೆ. ಮಾರುಕಟ್ಟೆಗಳು ಬಂದ್ ಆಗಿದ್ದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗಿದೆ. ಹೀಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೊಷಿಸಿದೆ. ಹೂವು ಬೆಳೆದವರ ನಷ್ಟ ಭರಿಸುವುದಕ್ಕಾಗಿ ತಲಾ ಹೆಕ್ಟೇರ್​ಗೆ 25,000 ರೂ.ಗಳನ್ನು ನೀಡಲು ನಿರ್ಧರಿಸಿದೆ. ತಾಲೂಕಿನಲ್ಲಿರುವ 232 ಹೆಕ್ಟೇರ್ ಪ್ರದೇಶದಲ್ಲಿ, 480ಕ್ಕಿಂತ ಹೆಚ್ಚು ರೈತರು ಹೂ- ಬೆಳೆಯುತ್ತಿದ್ದಾರೆ. ಹಾನಗಲ್ಲ ಹೋಬಳಿಯಲ್ಲಿ 30 ಹೆ. ಅಕ್ಕಿಆಲೂರು ಹೋಬಳಿಯಲ್ಲಿ 140 ಹೆ. ಬೊಮ್ಮನಹಳ್ಳಿ ಹೋಬಳಿಯಲ್ಲಿ 62 ಹೆ. ಪ್ರದೇಶದಲ್ಲಿ ಹೂವು ಬೆಳೆಯಲಾಗಿದೆ. ಈಗಾಗಲೇ ತಾಲೂಕಿನಲ್ಲಿ 120 ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದರು.

    ರೈತರು ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ಸಮೀಪದ ಮಾರುಕಟ್ಟೆಗಳಿಗೆ ಸಾಗಾಣಿಕೆ ಮಾಡಲು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳನ್ನು ಸೇವೆಗೆ ಒದಗಿಸಲು ಒಪ್ಪಿಕೊಂಡಿದ್ದಾರೆ. ಹುಬ್ಬಳ್ಳಿ, ಶಿರಸಿ, ಹಾವೇರಿ ಮತ್ತು ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗಳಿಗೆ ತೆರಳಲು ಬಳಸಿಕೊಳ್ಳಬಹುದಾಗಿದೆ. ಲಾಕ್​ಡೌನ್ ಅವಧಿಯಲ್ಲಿ ತರಕಾರಿ ಬೆಳೆಗಾರರಿಗೆ ಖರೀದಿದಾರರನ್ನು ಸಂರ್ಪಸಿ, ಸಾಗಾಣಿಕೆ ಮಾಡಲು ತಾಲೂಕು, ಜಿಲ್ಲಾಡಳಿತಗಳು ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ತೆರಳಲು ಪಾಸ್​ಗಳನ್ನು ನೀಡುತ್ತಿವೆ ಎಂದರು.

    ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಣ್ಣು, ತರಕಾರಿ ಬೇಡಿಕೆಯಿರುವ ಮಾರುಕಟ್ಟೆಗಳನ್ನು ಸಂರ್ಪಸಿ ಖರೀದಿದಾರರನ್ನು ಸಂರ್ಪಸಿಕೊಡಲಿದ್ದಾರೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಉದಾಸಿ ರೈತರಿಗೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts