More

    ಮಾಸ್ಕ್ ಧರಿಸದಿದ್ದರೆ ದಂಡ


    ರಾಮದುರ್ಗ: ದೇಶಾದ್ಯಂತ ಕರೊನಾ ರಣಕೇಕೆ ಹಾಕುತ್ತಿದ್ದರೂ, ಮಾಸ್ಕ್ ಧರಿಸದೆ ಸಂಚರಿಸುವ ಜನತೆ ಹಾಗೂ ಬೀದಿ ಬದಿಯ ವ್ಯಾಪಾರಿಗಳ ಗಂಟಲು ದ್ರವ ಸಂಗ್ರಹಿಸಿ ಕರೊನಾ ತಪಾಸಣೆಗೆ ಒಳಪಡಿಸಿ ಹೋಂ ಕ್ವಾರಂಟೈನ್ ಸೀಲ್ ಹಾಕಬೇಕಾಗುತ್ತದೆ. ಕರೊನಾ ಜಾಗೃತಿ ನಿಯಂತ್ರಣ ಅಭಿಯಾನಕ್ಕೆ ಪುರಸಭೆ, ಪೊಲೀಸ್ ಇಲಾಖೆ ಅಧಿಕಾರಿಗಳು ಕೈಗೊಳ್ಳುವ ಕ್ರಮಗಳಿಗೆ ಜನತೆ ಸಹಕರಿಸಬೇಕು ಎಂದು ತಹಸೀಲ್ದಾರ್ ಎ.ಡಿ. ಅಮರಾವದಗಿ ಎಚ್ಚರಿಕೆ ನೀಡಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಕೋವಿಡ್19 ನಿಯಂತ್ರಣ, ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದು, ಮಾಸ್ಕ್ ಧರಿಸದೆ ಇರುವ ಬೀದಿ ಬದಿಯ ವ್ಯಾಪಾರಸ್ಥರು, ಗ್ರಾಹಕರು ನಿಯಮ ಪಾಲನೆ ಮಾಡದೇ ಇದ್ದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಎಲ್ಲ ಅಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಬೆಂಗಳೂರಿನಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಏಳು ದಿನಗಳವರೆಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ರಂಜಾನ್ ಹಿನ್ನೆಲೆಯಲ್ಲಿ ಇಫ್ತೀಯಾರ್ ಕೂಟಗಳನ್ನು, ಧಾರ್ಮಿಕ ಸಭೆ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ದೇವಸ್ಥಾನದಲ್ಲಿ ದೈನಂದಿನ ಪೂಜಾ ಕೈಂಕರ್ಯ ಮಾಡುವ ಪೂಜಾರಿಗಳಷ್ಟೇ ಧಾರ್ಮಿಕ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಮಧುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದ್ದು, ಮದುವೆಗೆ ತೆರೆದ ಪ್ರದೇಶಗಳಲ್ಲಿ 200, ಕಲ್ಯಾಣ ಮಂಟಪ, ಸಭಾಂಗಣಗಳಲ್ಲಿ 100 ಜನತೆ, ಶವ ಸಂಸ್ಕಾರಕ್ಕೆ 50 ಜನತೆ, ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200 ಜನತೆಯ ಮಿತಿಯನ್ನು ಮೀರುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆಯಾದಲ್ಲಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ತಾಪಂ ಇಒ ಮುರಳೀಧರ ದೇಶಪಾಂಡೆ, ಸಿಪಿಐ ಶಶಿಕಾಂತ ವರ್ಮಾ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ಅಂಬಿಗೇರ, ಡಾ. ನವೀನ್ ನಿಜಗುಲಿ, ಪಿಎಸ್‌ಐಗಳಾದ ರಾಮನಗೌಡ ಕಟ್ಟಿಮನಿಗೌಡ್ರ, ಶರಣೇಶ ಜಾಲಿಹಾಳ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಎಸ್.ಡಿ ಐನಾಪುರ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts