More

    ಮಾಸಿಕ ವೇತನ ಪಾವತಿಗೆ ಆಗ್ರಹ

    ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 40ಕ್ಕೂ ಹೆಚ್ಚು ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕೆಲವರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆರೋಪಿಸಿ ಹೊರಗುತ್ತಿಗೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

    ಈ ವಾರದೊಳಗೆ ಸಮಸ್ಯೆ ಕುರಿತು ಗಮನಹರಿಸಿ ಬಿಡುಗಡೆಯಾಗದ ಬಾಕಿ ವೇತನ ಪಾವತಿಗೆ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಡಿಸಿಗೆ ಮನವಿ ಸಲ್ಲಿಸಿದರು. ಎರಡು ದಿನದೊಳಗೆ ಇತ್ಯರ್ಥ ಪಡಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ ನೀಡಿದರು.

    ಶುಶ್ರೂಷಕರು, ನಾನ್ ಕ್ಲೀನಿಕಲ್, ಟೆಕ್ನಿಷಿಯನ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್ ‘ಡಿ’ ನೌಕರರು ಸೇರಿ ಹಲವರು ಹೊರಗುತ್ತಿಗೆ ಆಧಾರದಲ್ಲಿ 2008, 2010ರಿಂದ ಕಾರ್ಯನಿರ್ವಹಿಸುತ್ತ ಬಂದಿದ್ದೇವೆ. ಕಳೆದ ಎರಡ್ಮೂರು ವರ್ಷಗಳಿಂದ ಪದೇ ಪದೆ ಈ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

    ಮಾಸಿಕ ವೇತನ ಸಮಯಕ್ಕೆ ಸರಿಯಾಗಿ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ. ಹೊರಗುತ್ತಿಗೆ ನೌಕರರ ಕುರಿತು ಏಕೆ ನಿರ್ಲಕ್ಷೃ ಎಂದು ಪ್ರಶ್ನಿಸಿದರು.

    6 ತಿಂಗಳ ವೇತನ ಪಾವತಿಯಾಗದ ಹೊರತು ಕರ್ತವ್ಯಕ್ಕೆ ಹಾಗೂ ನಮ್ಮ ವ್ಯಾಪ್ತಿಯ ಯಾವ ವಾರ್ಡ್‌ಗಳಲ್ಲೂ ಕಾರ್ಯನಿರ್ವಹಿಸುವುದಿಲ್ಲ. ಏನೇ ತೊಂದರೆ ಉಂಟಾದರೂ ನಾವು ಜವಾಬ್ದಾರರಲ್ಲ. ಇದಕ್ಕೆ ಆಸ್ಪದ ನೀಡದೆ, ಬಿಡುಗಡೆಗೆ ಕ್ರಮವಹಿಸಬೇಕು ಎಂದು ಕೋರಿದರು.

    ಮಂಗಳಗೌರಿ, ಸರ್ವಮಂಗಳಾ, ಸಿದ್ದಮ್ಮ, ವೀಣಾ, ಪುಷ್ಪವತಿ, ಯರ್ರಿಸ್ವಾಮಿ, ಶಿವಶಂಕರಮೂರ್ತಿ, ಸುನಿಲ್, ಅರುಣ್‌ಕುಮಾರ್, ತಿಪ್ಪೇಸ್ವಾಮಿ, ಹೇಮೇಶ್, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts