More

    ಮಾವಿನ ಮರಕ್ಕೆ ಕೊಡಲಿ ಪೆಟ್ಟು

    ಹಾನಗಲ್ಲ: ಹತ್ತಾರು ವರ್ಷಗಳವರೆಗೆ ನೀರುಣಿಸಿ ಬೆಳೆಸಿದ್ದ ಬೃಹತ್ ಗಾತ್ರದ ಮಾವಿನ ಮರಗಳಿಗೆ ಕೊಡಲಿ ಪೆಟ್ಟು ನೀಡುವ ಅನಿವಾರ್ಯತೆ ಬೆಳೆಗಾರರಿಗೆ ಎದುರಾಗಿದೆ. ಇದಕ್ಕೆ ಕಾರಣ, ಅಧಿಕ ಖರ್ಚು, ಕಡಿಮೆ ಆದಾಯ. ಹವಾಮಾನ ವೈಪರೀತ್ಯ, ಮಾರುಕಟ್ಟೆ ಅವ್ಯವಸ್ಥೆಯಿಂದಾಗಿ ಬೇಸತ್ತ ರೈತರು ಮಾವಿನ ಮರಗಳನ್ನು ಕಡಿದುರುಳಿಸುತ್ತಿದ್ದಾರೆ.

    ತಾಲೂಕಿನ ಚೀರನಹಳ್ಳಿ ಗ್ರಾಮದ ರೈತ ರುದ್ರಗೌಡ ಚಂದ್ರಗೌಡ ಪಾಟೀಲ ಎಂಬುವವರು 14 ಎಕರೆ ಪ್ರದೇಶದಲ್ಲಿನ ಮಾವಿನ

    ಮರಗಳನ್ನು ಕಳೆದ ಎರಡು ದಿನಗಳಿಂದ ಕಡಿದುರುಳಿಸುತ್ತಿದ್ದಾರೆ. ಕಳೆದ ವರ್ಷ ಮಾಸನಕಟ್ಟಿ ಗ್ರಾಮದಲ್ಲೂ ರೈತರೊಬ್ಬರು ಮಾವಿನಗಿಡಗಳನ್ನು ಕಡಿದು ಹಾಕಿದ್ದರು.

    ಕಡಿದುರುಳಿಸಲು ಕಾರಣಗಳೇನು?: ಇತ್ತೀಚಿನ ವರ್ಷಗಳಲ್ಲಿ ಮಾವು ಬೆಳೆಗಾರರು ಹಲವು ಸಂಕಷ್ಟ ಎದುರಿಸುವಂತಾಗಿದೆ. ಮಾವು ಕೃಷಿಗೆ ಮಾಡುತ್ತಿರುವ ನಿರ್ವಹಣೆ ವೆಚ್ಚಕ್ಕಿಂತಲೂ ಫಸಲಿನ ಆದಾಯ ಕಡಿಮೆಯಾಗುತ್ತಿದೆ. ಬಂದ ಫಸಲಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಮಧ್ಯವರ್ತಿಗಳಿಗೆ ಫಸಲು ನೀಡಬೇಕು. ಮಹಾನಗರದ ಮಾರುಕಟ್ಟೆ ದರ ರೈತನಿಗೆ ಸಿಗುತ್ತಿಲ್ಲ. ರೈತನಿಗಿಂತ ಹೆಚ್ಚು ಲಾಭವನ್ನು ಮಾರಾಟಗಾರ ಪಡೆಯುತ್ತಿದ್ದಾನೆ. ಇದೆಲ್ಲದರ ಮಧ್ಯೆ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕುಂಠಿತವಾಗುತ್ತಿದೆ ಎಂಬುದು ಮಾವು ಬೆಳೆಗಾರರ ನೋವಿನ ಮಾತು.

    ಆಶಾಕಿರಣ ಎಚ್​ಕೆಎಚ್ ಮಂಡಿ: ಪಟ್ಟಣದ ಎಚ್​ಕೆಎಚ್ ಮಾವಿನ ಮಂಡಿಯಲ್ಲಿ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ರೈತರಿಂದ ಮಾವು ಖರೀದಿಸುವ ವ್ಯವಸ್ಥೆ ನಡೆದಿದೆ. ಇದೊಂದು ವ್ಯವಸ್ಥೆ ಇರದಿದ್ದರೆ ಇಷ್ಟೊತ್ತಿಗಾಗಲೇ ಬಹಳಷ್ಟು ಬೆಳೆಗಾರರು ಮಾವು ಕೈಬಿಟ್ಟು ಬೇರೆ ಬೆಳೆಗಳತ್ತ ಮುಖ ಮಾಡುತ್ತಿದ್ದರು. ಬೇರೆ ರಾಜ್ಯಗಳ ಖರೀದಿದಾರರು ಇಲ್ಲಿಗೆ ಬಂದು ಟೆಂಡರ್​ನಲ್ಲಿ ಪಾಲ್ಗೊಳ್ಳುವಂತಾದರೆ ಮಾತ್ರ ರೈತರು ಮಾವು ಫಸಲಿನಿಂದ ಲಾಭ ಕಾಣಬಹುದಾಗಿದೆ.

    ಕಸ ವಿಲೇವಾರಿಗೆ ಸೂಕ್ತ ಜಾಗದ ಕೊರತೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ರಸ್ತೆ ಪಕ್ಕ ನಿರುಪಯುಕ್ತ ತ್ಯಾಜ್ಯ ಹಾಕದಂತೆ ಹಲವು ಬಾರಿ ಪಟ್ಟಣದಲ್ಲಿ ಡಂಗುರ ಸಾರಲಾಗಿದೆ. ಅದರೂ, ರಾತ್ರಿ ವೇಳೆಯಲ್ಲಿ ಬಂದು ಕಸ ಚೆಲ್ಲಿ ಹೋಗುತ್ತಿದ್ದಾರೆ. ಕಸ ಚೆಲ್ಲದಂತೆ ಮತ್ತೊಮ್ಮೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.

    | ಬಿ.ಕೆ. ಸಂಶಿ ಪಿಡಿಒ ಹುಲಗೂರ

    ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಸೂಚಿಸಿ

    ದೊಡ್ಡ ಪಟ್ಟಣವಾಗಿರುವ ಹುಲಗೂರಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಉತ್ವತ್ತಿಯಾಗುತ್ತಿದೆ. ಆದರೆ, ಗ್ರಾಪಂನವರಿಗೆ ಅದನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಕಸ ಸಂಗ್ರಹಿಸಲು ವಾಹನದ ವ್ಯವಸ್ಥೆ ಇದ್ದರೂ ಅದನ್ನು ಎಲ್ಲಿ ವಿಲೇವಾರಿ ಮಾಡಬೇಕು ಎನ್ನ್ನುವುದು ಗ್ರಾಪಂಗೆ ಸವಾಲಿನ ಪ್ರಶ್ನೆಯಾಗಿದೆ. ತಾಲೂಕಿನ ಬಹುತೇಕ ಗ್ರಾಪಂಗಳು ತ್ಯಾಜ್ಯ ವಿಲೇವಾರಿ ಘಟಕಗಳನ್ನು ಹೊಂದಿವೆ. ಆದರೆ, ಹುಲಗೂರ ಗ್ರಾಮಕ್ಕೆ ಘಟಕ ಸ್ಥಾಪನೆಗೆ ಸೂಕ್ತ ಜಾಗ ಸೂಚಿಸದ ಕಾರಣ ನಾನಾ ತರಹದ ತ್ಯಾಜ್ಯವನ್ನು ರಸ್ತೆ ಪಕ್ಕ, ಕಾಲುವೆಗಳಿಗೆ ಸುರಿಯಲಾಗುತ್ತಿದೆ. ಕೂಡಲೆ, ಗ್ರಾಪಂ ಆಡಳಿತ ಮಂಡಳಿ ರಸ್ತೆ ಪಕ್ಕದ ದುರ್ವಾಸನೆಗೆ ಮುಕ್ತಿ ನೀಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts